CM Siddaramaia: ಸಿಎಂ ಸಿದ್ದರಾಮಯ್ಯ ಲಂಚ ಪ್ರಕರಣ : ಕ್ಲೀನ್ ಚಿಟ್ ವರದಿಗೆ ಕೋರ್ಟ್ ತಡೆ

ಬೆಂಗಳೂರಿನ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಸಿದ್ಧಾರಾಮಯ್ಯ ಅವರಿಗೆ ಲಂಚ ಪ್ರಕರಣದಲ್ಲಿ ಹಿನ್ನಡೆಯಾಗಿದೆ. ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಕ್ಲೀನ್ ಚಿಟ್ ವರದಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತಾ ಪೊಲೀಸರಿಗೆ ನಿರ್ದೇಶನ ನೀಡಿದೆ.

 

ಇದನ್ನೂ ಓದಿ: Shringeri: ಸಾಲ ಹಿಂದಿರುಗಿಸುವಂತೆ ಧರ್ಮಸ್ಥಳ ಸಂಘದವರಿಂದ ಹಲ್ಲೆ ಆರೋಪ- ನೇಣುಬಿಗಿದು 29ರ ಮಹಿಳೆ ಆತ್ಮಹತ್ಯೆ!!

ವಿಶೇಷ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ಜೂನ್ 7, 2023 ರ ದೋಷಾರೋಪ ಮುಕ್ತ ವರದಿಯನ್ನು (ಬಿ ವರದಿ) ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿ”ನ್ಯಾಯಯುತ” ತನಿಖೆಯನ್ನು ನಡೆಸಲಾಗಿಲ್ಲ, ಇನ್ನು ಆರು ತಿಂಗಳೊಳಗೆ ಹೊಸ ವರದಿಯನ್ನು ಸಲ್ಲಿಸುವಂತೆ ಐಒಗೆ ನಿರ್ದೇಶನ ಮಾಡಿದರು.

ಸಿದ್ದರಾಮಯ್ಯ ಅವರು ಸಿಎಂ ಆದ ಮೊದಲ ಅವಧಿಯಲ್ಲಿ ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ನ ವ್ಯವಸ್ಥಾಪಕ ಸಮಿತಿ ಸದಸ್ಯರಾಗಿ ಎಲ್‌ ವಿವೇಕಾನಂದರನ್ನು ನಾಮನಿರ್ದೇಶನ ಮಾಡಿ 1.3 ಕೋಟಿ ರೂ.ಗಳನ್ನು ಪಡೆದಿದ್ದರು’ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಎನ್‌ಆರ್‌ ರಮೇಶ್‌ ಅವರು ದೂರಿದ್ದರು. ಜುಲೈ 28, 2014 ರಂದು ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ವಿರುದ್ಧ ಯಾವುದೇ ಲಂಚ ಸ್ವೀಕರಿಸಿಲ್ಲ ಎಂದು ಮುಕ್ತಾಯ ವರದಿಯನ್ನು ಸಲ್ಲಿಸಿದ್ದರು.

Leave A Reply

Your email address will not be published.