Ayodhya Rama: ಒಂದು ತಿಂಗಳಲ್ಲಿ ಅಯೋಧ್ಯೆ ರಾಮನಿಗೆ ಭಕ್ತರು ನೀಡಿದ ಚಿನ್ನ, ಬೆಳ್ಳಿ ಎಷ್ಟು ಗೊತ್ತಾ?! ಕೇಳಿದ್ರೆ ಶಾಕ್ ಆಗ್ತೀರಾ

Share the Article

 

Ayodhya Rama: ಅಯೋಧ್ಯೆಯಲ್ಲಿ ಶ್ರೀರಾಮಂಚದ್ರನು ವಿರಾಜಮಾನನಾಗಿ ಸರಿಯಾಗಿ ಒಂದು ತಿಂಗಳ ಕಳೆದಿದೆ. ಈ ಒಂದು ತಿಂಗಳಲ್ಲಿ ಲಕ್ಷಾಂತರ ಭಕ್ತರು ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಇದರೊಂದಿಗೆ ರಾಮನಿಗೆ ನಗ-ನಾಣ್ಯಗಳನ್ನೂ ಸಮರ್ಪಿಸಿದ್ದಾರೆ. ಹೀಗೆ ಬಂದುದರಲ್ಲಿ ಭಕ್ತರು ಸಮರ್ಪಿಸಿದ ಚಿನ್ನ, ಬೆಳ್ಳಿ ಎಷ್ಟೆಂದು ತಿಳಿದರೆ ನೀವೇ ಶಾಕ್ ಆಗ್ತೀರಾ!!

ಹೌದು, ರಾಮನನ್ನು(Ayodhya Rama) ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ಆಗಮಿಸುವ ಭಕ್ತರು ರಾಮಲಲ್ಲಾನಿಗೆ ಬರೀ ಒಂದು ತಿಂಗಳಲ್ಲಿ ಬರೋಬ್ಬರಿ 10 ಕೆಜಿ ಚಿನ್ನ, 25 ಕೆಜಿ ಬೆಳ್ಳಿಯನ್ನು ಸಮರ್ಪಿಸಿದ್ದಾರೆ. ಇದರೊಂದಿಗೆ ಕೋಟಿ ಕೋಟಿ ಹಣವನ್ನೂ ಶ್ರೀರಾಮನಿಗೆ ದೇಣಿಗೆ ನೀಡಿದ್ದಾರೆ.

ಅಂದಹಾಗೆ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಕಿರೀಟ, ಹಾರ, ಛತ್ರಿ, ರಥ, ಬಳೆಗಳು, ಆಟಿಕೆಗಳು, ಕಾಲುಂಗುರಗಳು, ದೀಪ ಮತ್ತು ಅಗರಬತ್ತಿಯ ಸ್ಟ್ಯಾಂಡ್, ಬಿಲ್ಲು ಮತ್ತು ಬಾಣಗಳು, ವಿವಿಧ ರೀತಿಯ ಪಾತ್ರೆಗಳು ಸೇರಿದಂತೆ ಸಾಕಷ್ಟು ವಸ್ತುಗಳನ್ನ ಒಳಗೊಂಡಿದೆ. ಇಷ್ಟೇ ಅಲ್ಲದೆ ಇಲ್ಲಿಯವರೆಗೆ 25 ಕೆಜಿಗೂ ಹೆಚ್ಚು ಬೆಳ್ಳಿಯನ್ನ ಸಮರ್ಪಿಸಿದ್ದಾರೆ. ಚಿನ್ನದ ಬಗ್ಗೆ ಹೇಳುವುದಾದ್ರೆ, ಅದರ ನಿಖರವಾದ ತೂಕವನ್ನ ಇನ್ನೂ ಅಂದಾಜು ಮಾಡಲಾಗಿಲ್ಲ. ಆದರೆ, ಟ್ರಸ್ಟ್‌ನ ಮೂಲಗಳನ್ನ ನಂಬುವುದಾದರೆ, ವಿವಿಧ ಕಿರೀಟಗಳು ಸೇರಿದಂತೆ ಸಮರ್ಪಿಸಲಾದ ವಸ್ತುಗಳ ಒಟ್ಟು ತೂಕ ಸುಮಾರು 10 ಕೆ.ಜಿ ಆಗಿದೆಯಂತೆ. ಈ ಕುರಿತು ಸ್ವತಃ ರಾಮಜನ್ಮ ಭೂಮಿ ಟ್ರಸ್ಟ್ ಮಾಹಿತಿ ನೀಡಿದೆ.

Leave A Reply