7th Pay Commission: ಸರಕಾರಿ ನೌಕರರೇ ಗಮನಿಸಿ, ತುಟ್ಟಿ ಭತ್ಯೆ ಜೊತೆಗೆ ಟಿಎ-ಎಚ್‌ಆರ್‌ಎ ಪರಿಷ್ಕರಣೆ?

ಕೇಂದ್ರವು ತನ್ನ ನೌಕರರಿಗೆ ಮುಂದಿನ ಮಾರ್ಚ್ ತಿಂಗಳಲ್ಲಿ ಬಂಪರ್ ಆಫರ್ ನೀಡಲಿದೆ. ಈ ಹಿಂದೆ ಹೇಳಿದಂತೆ ಕೇಂದ್ರವು ತನ್ನ ನೌಕರರ ಪ್ರಯಾಣ ಭತ್ಯೆ ಮತ್ತು ಮನೆ ಬಾಡಿಗೆಯ ಭತ್ಯೆಯ ಜೊತೆಗೆ ತುಟಿ ಭತ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ
ಇದನ್ನೂ ಓದಿ: KFD Virus: ಕರ್ನಾಟಕದಲ್ಲಿ ಮಂಗನ ಕಾಯಿಲೆ ಉಲ್ಬಣ: 100ರ ಗಡಿ ದಾಟಿದ ಸಕ್ರಿಯ ಪ್ರಕರಣಗಳು
ನೌಕರರ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಿಸುವ ಮೂಲಕ ನೌಕರರ ತುಟ್ಟಿಭತ್ಯೆ ಶೇ. 50ಕ್ಕೆ ಹೆಚ್ಚಾಗಲಿದೆ. ಇನ್ನೇನು ಲೋಕಸಭಾ ಚುನಾವಣೆಗಳು ಬರುತ್ತಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ತುಟ್ಟಿ ಭತ್ಯೆಯ ಜೊತೆಗೆ ಪ್ರಯಾಣ ಭತ್ಯೆ ಹಾಗೂ ವಸತಿ ಭತ್ಯೆಗೆ ಮುಂದಿನ ಮಾರ್ಚ್ ನಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ.
ತುಟ್ಟಿಭತ್ಯೆಯ ಹೆಚ್ಚಳ ಯಾವಾಗ
ಸಾಮಾನ್ಯವಾಗಿ 6 ತಿಂಗಳಿಗೊಮ್ಮೆ ತುಟ್ಟಿ ಭತ್ಯೆಯ ಏರಿಕೆಯನ್ನು ಮಾಡಲಾಗುತ್ತದೆ. ಇದು ಮಾರ್ಚ್ ನಲ್ಲಿ ಅನುಮೋದನೆ ಪಡೆಯುತ್ತದೆ. ಜುಲೈ ನಿಂದ ಡಿಸೆಂಬರ್ ತನಕ 50 ರಷ್ಟು ತುಟ್ಟಿ ಭತ್ಯೆ ಪಡೆಯುತ್ತಾರೆ. ಈಗ ತುಟ್ಟಿ ಭತ್ಯೆ ಶೇ 46 ರಷ್ಟಿದೆ.
ಪ್ರಯಾಣ ಭತ್ಯೆ ಏರಿಕೆ ಯಾವಾಗ
ಮಾಹಿತಿಯ ಪ್ರಕಾರ ದರ್ಜೆ 1 ಮತ್ತು ದರ್ಜೆ 2 ನೌಕರರಿಗೆ 1,800 ಹಾಗೂ 1,900 ಹಾಗೇ ದರ್ಜೆ 3 ರಿಂದ ದರ್ಜೆ 8 ರ ವರೆಗೆ 3,600 ಹೆಚ್ಚೂ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಮನೆ ಬಾಡಿಗೆ ಭತ್ಯೆ
ಮಾರ್ಚ್ ನಲ್ಲಿ ಎಚ್‌ಆರ್‌ಎ ಸಹ ಪರಿಷ್ಕರಣೆಯಾಗಲಿದೆ. ಇದಾದ ಬಳಿಕ ತುಟ್ಟಿ ಭತ್ಯೆ ಶೇ. 50 ರಷ್ಟು ಹೆಚ್ಚಾದರೆ ಮಾತ್ರ ಎಚ್‌ಆರ್‌ಎ ಯನ್ನೂ ಪರಿಷ್ಕರಣೆ ಮಾಡಬೇಕಿದೆ.
ಸದ್ಯ 27, 24, 18 ರಲ್ಲಿ ಮನೆ ಭತ್ಯೆಯನ್ನು ನೀಡಲಾಗುತ್ತಿದೆ. ಒಂದು ವೇಳೆ ತುಟ್ಟಿ ಭತ್ಯೆ 50 ಕ್ಕಿಂತ ಹೆಚ್ಚಾದರೆ ಮಾತ್ರ 30, 27, 21 ಹೆಚ್ಚಾಗುವ ಸಾಧ್ಯತೆ ಇದೆ.