Congress guarantees : ಲೋಕಸಭಾ ಚುನಾವಣೆ ಬಳಿಕ ಇವರೆಲ್ಲರ ಗ್ಯಾರಂಟಿ ಯೋಜನೆ ಬಂದ್ ?!

Share the Article

Congress guarantees : ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಬಂದ್ ಆಗುತ್ತದೆ ಎಂದು ವಿಧಾನಸಭೆಯಲ್ಲಿ ಹೇಳುವ ಮೂಲಕ ಶಾಸಕ ಅರವಿಂದ್ ಬೆಲ್ಲದ್(MLA Arvind Bellad) ಹೊಸ ಬಾಂಬ್ ಸಿಡಿಸಿದ್ದಾರೆ.

Congress guarantees

ಹೌದು, ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆಯ(Parliament election)ಬಳಿಕ ಕ್ಯಾನ್ಸಲ್ ಆಗುತ್ತದೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇದೀಗ ಈ ಬೆನ್ನಲ್ಲೇ ವಿಧಾನಸಭಾ ಅಧಿವೇಶನದಲ್ಲಿ ಅರವಿಂದ್ ಬೆಲ್ಲದವರು ಚುನಾವಣೆಯ ಬಳಿಕ ಕೆಲವರ ಗ್ಯಾರೆಂಟಿ ಯೋಜನೆಗಳು ಬಂದಾಗಲಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ಅಂದಹಾಗೆ ಗ್ರಾಮ ಸಹಾಯಕರಿಗೆ, ಗೆಸ್ಟ್ ಲೆಕ್ಚರರ್‌ಗೆ, ಅಂಗನವಾಡಿ ಕಾರ್ಯಕರ್ತೆಯರಿಗೂ ಗ್ಯಾರಂಟಿ ಬಂದ್ ಮಾಡುತ್ತಾರೆ. ಲೋಕಸಭೆ(Loksabhe) ನಂತರ ಗ್ಯಾರಂಟಿ(Guarantees) ಕೊಡೋದು ಬೇಡ ಅಂತ ಪ್ರಸ್ತಾವ ಇದೆ. ಯಾರಿಗೆ ಗ್ಯಾರಂಟಿ ಬಂದ್ ಮಾಡಬೇಕು ಅನ್ನೋ ಪ್ರಸ್ತಾವನೆಯನ್ನು ಸರ್ಕಾರ ರೆಡಿ ಮಾಡಿದೆ. ಆರ್ಥಿಕ ಇಲಾಖೆಯಿಂದ ಗ್ಯಾರಂಟಿ ಬಂದ್ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿದೆ ಎಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಆದರೆ ಇದು ಎಷ್ಟು ಸತ್ಯವೆಂದ ಚುನಾವಣೆ ಬಳಿಕ ಗೊತ್ತಾಗಲಿದೆ.

Leave A Reply