Home Karnataka State Politics Updates Aadhaar card: ಮಾರ್ಚ್ 14ರ ಒಳಗೆ ಆಧಾರ್ ಕಾರ್ಡಿನಲ್ಲಿ ಈ ಕೆಲಸ ಮಾಡಿ, ಇಲ್ಲಾಂದ್ರೆ ಬಿಚ್ಚಬೇಕು...

Aadhaar card: ಮಾರ್ಚ್ 14ರ ಒಳಗೆ ಆಧಾರ್ ಕಾರ್ಡಿನಲ್ಲಿ ಈ ಕೆಲಸ ಮಾಡಿ, ಇಲ್ಲಾಂದ್ರೆ ಬಿಚ್ಚಬೇಕು ಭಾರಿ ದುಡ್ಡು !!

Aadhaar card

Hindu neighbor gifts plot of land

Hindu neighbour gifts land to Muslim journalist

Adhar card: ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕೆಂದು ಸರ್ಕಾರವು ಹಲವು ತಿಂಗಳಿಂದ ಹೇಳುತ್ತಿದೆ. ಕೆಲವರು ಮಾಡಿದೆ ಇನ್ನು ಕೆಲವರು ಅಪ್ಡೇಟ್ ಮಾಡದೆ ಉದಾಸೀನ ತೋರುತ್ತಿದ್ದಾರೆ. ಆದರೀಗ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಸರ್ಕಾರ ಡೆಡ್ ಲೈನ್ ನೀಡಿದ್ದು ಇದರೊಳಗೆ ನೀವು ಆಧಾರ್ ಕಾರ್ಡ್ (Adhar card) ಅಪ್ಡೇಟ್ ಮಾಡದಿದ್ದರೆ ಭಾರೀ ಮೊತ್ತದ ದಂಡವನ್ನು ಬಿಚ್ಚಬೇಕು.

ಹೌದು, ಉಚಿತವಾಗಿ ಆಧಾರ್ ಅಪ್ಡೇಟ್(Adhar Update)ಮಾಡಲು ಈ ಹಿಂದೆ ಸರ್ಕಾರವು ಎರಡು ಬಾರಿ ಅವಧಿ ವಿಸ್ತರಣೆ ಮಾಡಿತ್ತು. 2023ರ ಸೆಪ್ಟೆಂಬರ್ 14ಕ್ಕೆ ಡೆಡ್ಲೈನ್ ಇತ್ತು. ಅದನ್ನು ಡಿಸೆಂಬರ್ 14ಕ್ಕೆ ವಿಸ್ತರಿಸಲಾಯಿತು. ಈಗ ಡಿಸೆಂಬರ್ 15ರಿಂದ ಮಾರ್ಚ್ 14ರವರೆಗೆ ಗಡುವು ಹೆಚ್ಚಿಸಲಾಗಿದೆ. ಸರ್ಕಾರವು ಮಾರ್ಚ್ 14, 2024 ರ ನಿರ್ಣಾಯಕ ಗಡುವನ್ನು ನಿಗದಿಪಡಿಸಿದೆ. ಹೀಗಾಗಿ ದಯವಿಟ್ಟು ಯಾರೆಲ್ಲಾ ಇನ್ನೂ ತಮ್ಮ ಆಧಾರ್ ಅಪ್ಡೇಟ್ ಮಾಡಿಸಿಲ್ಲವೋ ಈಗಲೇ ಮಾಡಿಸಿ. ಒಂದು ವೇಳೆ ಆಗದಿದ್ದರೆ ಭಾರೀ ಮೊತ್ತವನ್ನು ನೀವು ಬಿಚ್ಚಬೇಕಾದಿತು.

ಅಂದಹಾಗೆ ಸರ್ಕಾರ ನೀಡಿದ ಈ ಗಡುವಿನ ಅವಧಿಯಲ್ಲಿ ಭಾರತೀಯ ನಿವಾಸಿಗಳು ತಮ್ಮ ಮಾಹಿತಿಯನ್ನು-ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್, ಬದಲಾಯಿಸಲು ಅಥವಾ ಸರಿಪಡಿಸಲು ಅವಕಾಶವನ್ನು ನೀಡವಾಗಿದೆ. ಇವುಗಳನ್ನು ಸಾರ್ವಜನಿಕರು ಇಮೇಲ್ ಇಲ್ಲದೇ ಆನ್‌ಲೈನ್ ಪೋರ್ಟಲ್ ಮೂಲಕ ಅಪ್ಡೇಟ್ ಮಾಡಬಹುದು.

ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡುವುದು ಹೇಗೆ ?

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು https://myaadhaar.uidai.gov.in/ ಗೆ ಲಾಗಿನ್ ಮಾಡಿ .

• ಪ್ರೋಸೀಡ್ ಟು ಅಡ್ರೆಸ್ ಅಪ್ಡೇಟ್ ಆಯ್ಕೆಯನ್ನು ಆರಿಸಿ.

ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

• ಇದರ ನಂತರ ‘ಡಾಕ್ಯುಮೆಂಟ್ ಅಪ್ಡೇಟ್ ” ಮೇಲೆ ಕ್ಲಿಕ್ ಮಾಡಬೇಕು.

• ಇದರ ನಂತರ, ಯಾವುದೇ ರೀತಿಯ ಅಪ್ಡೇಟ್ ಮಾಡಬಹುದಾಗಿದೆ.

• ಅಂತಿಮವಾಗಿ ಸಬ್ಮಿಟ್ ಬಟನ್ ಆಯ್ಕೆಮಾಡಿ.

ಡಾಕ್ಯುಮೆಂಟ್‌ಗಳನ್ನು ಅಪ್ಡೇಟ್ ಮಾಡಲು ಅದರ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

• ಆಧಾರ್ ಅಪ್‌ಡೇಟ್ ವಿನಂತಿಯನ್ನು ಸ್ವೀಕರಿಸಲಾಗುತ್ತದೆ ಮತ್ತು 14 ಅಂಕಿಗಳ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ರಚಿಸಲಾಗುತ್ತದೆ