Cleaning Tips: ನಿಮ್ಮ ಮನೆಯ ಸೋಫಾಗಳು ಕಲೆ ಯಾಗಿವೆಯೇ!!ಹೀಗೆ ಮಾಡಿ ಕಲೆ ಮಾಯವಾಗುತ್ತದೆ.
ನಾವು ಮನೆಯನ್ನು ಸುಂದರವಾಗಿ ಇಡಲು ವಿವಿಧ ರೀತಿಯ ಕ್ರಮಗಳನ್ನು ಅನುಸರಿಸುತ್ತೇವೆ. ನಾವು ನಮ್ಮ ಮನೆಯ ಸೋಫಾಗಳನ್ನು ಸುಂದರವಾಗಿ ಮತ್ತು ಸ್ವಚ್ಛವಾಗಿ ಇರಿಸಿಕೊಳ್ಳವುದು ಅಷ್ಟೇ ಮುಖ್ಯವಾದದ್ದು. ನಾವು ಎಷ್ಟೇ ಕಾಳಜಿ ವಹಿಸಿದರು ಕೆಲವೊಮ್ಮೆ ತಿನ್ನುವ ಪದಾರ್ಥಗಳು ಬಿದ್ದಾಗ ಸೋಫಾ ಗಳು ಗಲೀಜು ಆಗುತ್ತವೆ.
ಇದನ್ನೂ ಓದಿ: Summer Skin Care Tips: ಮುಖ ಕಪ್ಪಾಯ್ತು ಎಂಬ ಚಿಂತೆಯೇ? ಇಲ್ಲಿದೆ ಸುಲಭ ಉಪಾಯ
ನಾವು ಬಹುತೇಕವಾಗಿ ಬಿಡುವಿನ ಸಮಯದಲ್ಲಿ ಮನೆ ಮಂದಿಯೊಂದಿಗೆ ಟಿವಿ ನೋಡಿಕೊಂಡು ಹರಟೆ ಹೊಡೆಯುವುದು ಸೋಫಾ ಮೇಲೆಯೇ. ಸೋಫಾ ಒಂದು ರೀತಿಯಲ್ಲಿ ಅತಿ ಹೆಚ್ಚು ಜನರು ಇಷ್ಟ ಪಡುವ ವಸ್ತುವಾಗಿದೆ.
ಸೋಫಾ ಗಳು ಹತ್ತಿಯಿಂದ ಕೂಡಿರುತ್ತವೆ. ಅವುಗಳ ಮೇಲೆ ಏನಾದರೂ ಚೆಲ್ಲಿದರೆ, ಕಲೆ ಹಾಗೇ ಉಳಿಯುತ್ತದೆ. ಇದರಿಂದ ಆದರ ಮೇಲೆ ಕೂರಲು ಕೆಲವರು ಹಿಂಜರಿಯುತ್ತಾರೆ. ಅವುಗಳನ್ನು ಆಗಾಗ ಸ್ವಚ್ಚ ಗೊಳಿಸಬೇಕು.
ಈ ಸೋಫಾಗಳನ್ನು ಸ್ವಚ್ಛಗೊಳಿಸಲು ಕೆಲವರು ವೃತ್ತಿಪರರನ್ನು ಕರೆಸುತ್ತಾರೆ. ಇಲ್ಲವೇ ದುಬಾರಿ ವೆಚ್ಚದ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಇವುಗಳ ಬದಲು ನೀವೇ ನಿಮ್ಮ ಸೋಫಾ ಗಳನ್ನು ಸುಲಭವಾಗಿ ಸ್ವಚ್ಛ ಮಾಡಬಹುದು. ಈ ಕೆಳಗಿನ ಪದ್ಧತಿಗಳನ್ನು ಅನುಸರಿಸಿ ಸಾಕು.
ಬ್ರಷ್ ಮಾಡುವುದು ಒಳ್ಳೆಯದು.
ನೀವು ತುಂಬಾ ಸೂಕ್ಷ್ಮವಾದ ಬ್ರಷ್ ಅನ್ನು ಬಳಕೆ ಮಾಡಿ. ಸೋಫಾ ದ ಮೇಲೆ ಇರುವ ಧೂಳನ್ನು ಸ್ವಚ್ಛಗೊಳಿಸಿ. ಕೈ ಗವಸು ಹಾಕಿಕೊಂಡು ಸ್ವಚ್ಚಗೊಳಿಸುವುದು ಉತ್ತಮ. ನೀವು ವ್ಯಾಕ್ಯೂಮ್ ಕ್ಲೀನರ್ ಬಳಸಿ ಸಹ ಸೋಫಾ ವನ್ನು ಸ್ವಚ್ಛಗೊಳಿಸಬಹುದು.ಮೈಕ್ರೋಫೈಬರ್ ಬಳಸಿ ಸ್ವಚ್ಛತೆ ಮಾಡಬಹುದು. ಓಣ ಬಟ್ಟೆಯನ್ನು ಬಳಸಬಹುದು.
ಮೊಂಡುತನದ ಕಲೆಗಳನ್ನು ತೆಗೆದುಹಾಕುವ ವಿಧಾನ
ವಾಶಿಂಗ್ ಲಿಕ್ವೆಡ್, ಬಿಳಿ ವಿನೆಗರ್, ಅಡಿಗೆ ಸೋಡಾ, ಬೆಚ್ಚಗಿನ ನೀರನ್ನು ಸಿದ್ದ ಮಾಡಿ ಕೊಳ್ಳಿ. ನಂತರ ಈ ಮೇಲೆ ಹೇಳಲಾದ ವಸ್ತುಗಳನ್ನು ಒಂದು ಬಟ್ಟಲಿಗೆ ಮಿಕ್ಸ್ ಮಾಡಿಕೊಳ್ಳಿ. ನಂತರ ಮೃದುವಾದ ಬ್ರಿಸ್ಟಲ್ ಟೂತ್ ಬ್ರಷ್ ಅನ್ನು ಬಳಕೆ ಮಾಡಿ ಕಲೆಯಾಗಿರುವ ಜಾಗಕ್ಕೆ ಹಚ್ಚಿ,10 ನಿಮಿಷಗಳ ಕಾಲ ಬಿಟ್ಟು ಒಣ ಬಟ್ಟೆಯಿಂದ ಒರೆಸಿ . ನಿಮ್ಮ ಸೋಫಾ ದ ಕಲೆ ಮಾಯವಾಗುತ್ತದೆ.
ನೀವು ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ಸೋಫಾ ವನ್ನು ಕ್ಲೀನ್ ಮಾಡಬೇಡಿ. ಆ ಬಟ್ಟೆಯಲ್ಲಿ ಇರುವ ಬಣ್ಣವು ನಿಮ್ಮ ಸೋಫಾ ಗೆ ಹಚ್ಚಿಕೊಳ್ಳುತ್ತದೆ.
Good one