Draught: ಬರ ನಿರ್ವಹಣೆಗೆ ರೈತರಿಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ!
ಕೋಲಾರದಲ್ಲಿ ಕೃಷಿಯನ್ನು ಮಾಡುವ ಮಾದರಿಯನ್ನು ಕರ್ನಾಟಕದ ಇತರ ಭಾಗಗಳಲ್ಲಿ
ಅನುಷ್ಠಾನಗೊಳಿಸುವುದರ ಜೊತೆಗೆ ರೈತರ ಸುಸ್ಥಿರ ಅಭಿವೃದ್ದಿಗೆ ಕರ್ನಾಟಕ ರೈತ ಸಮೃದ್ಧಿ ಯೋಜನೆಯು ಗಮನ ನೀಡಲಿದೆ.
ಇದನ್ನೂ ಓದಿ: CM Siddaramaiah: ನಾನೇಕೆ ನನ್ನ ಹೆಂಡತಿಯನ್ನು ಇನ್ನೂ ಪರಿಚಯಿಸಲ್ಲ ಗೊತ್ತಾ? ವೈರಲ್ ಆಯ್ತು ಸಿಎಂ ಸಿದ್ದರಾಮಯ್ಯ ಕೊಟ್ಟ ಹೇಳಿಕೆ
ಬೆಂಗಳೂರು: ಕರ್ನಾಟಕದಲ್ಲಿ ಪ್ರತಿ ವರ್ಷ ರೈತರ ಆತ್ಮಹತ್ಯೆ ಹೆಚ್ಚುತ್ತಲೇ ಇದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿಗೆ ತರಲು ಸಿದ್ದವಾಗಿದೆ. ಕಳೆದ ಬಜೆಟ್ 2024 ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯವನ್ನು ವಿವರಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ಜಾರಿಯಲ್ಲಿರುವ ಸಮಗ್ರ ಕೃಷಿ ಯೋಜನೆಗೆ ವಿಸ್ತೃತ ರೂಪ ನೀಡಿ ಸಮೃದ್ದಿ ಯೋಜನೆ ಜಾರಿಗೊಳಿಸಲಾಗುವುದು ಎಂದರು. ಈ ಕುರಿತು ಕರ್ನಾಟಕದ ಕೃಷಿ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಯಶಸ್ವಿಯಾಗಿರುವ ಕೃಷಿ ಮಾದರಿಗಳನ್ನು ಸಂಗ್ರಹ ಮಾಡಿ,ಅವುಗಳನ್ನು ಮುಂತಾದ ಜಿಲ್ಲೆಗಳಿಗೂ ವಿಸ್ತರಿಸಿ ರೈತರನ್ನು ಆತ್ಮಹತ್ಯೆಯನ್ನು ತಡೆಗಟ್ಟಬಹುದಾಗಿದೆ.
ಏನಿದು ಯೋಜನೆ
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಗಟ ಪ್ರಧಾನವಾಗಿದೆ. ಕೆಲವು ಜಿಲ್ಲೆಗಳು ನೀರಾವರಿ ಸೌಲಭ್ಯ ಒಳಗೊಂಡಿವೆ. ಹಲವು ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯದ ವ್ಯವಸ್ಥೆ ಕಡಿಮೆ ಇದೆ. ಇದರಿಂದ ಜನ ಮಳೆಯಾಶ್ರಿತ ಬೆಳೆಗಳನ್ನು ಹಾಗೂ ಬೋರ್‌ವೆಲ್‌ಗಳನ್ನು ಆಧರಿಸಿ ವರ್ಷವಿಡೀ ಬೇಸಾಯ ಮಾಡುತ್ತಾರೆ. ಬೆಳೆ ಬಂದಾಗ ಬೆಲೆ ಇಲ್ಲ. ಬೆಲೆ ಇದ್ದಾಗ ಬೆಳೆ ಇರುವುದಿಲ್ಲ. ಅದರಲ್ಲೂ ಹಣ್ಣು ಹಾಗೂ ತರಕಾರಿ ವಿಚಾರದಲ್ಲಿ ಇದು ಸಾಮಾನ್ಯವಾಗಿದೆ.
ಇದರಿಂದಲೇ ಕೆಲವು ರೈತರು ವಿಭಿನ್ನ ಹಾಗೂ ಯಶಸ್ವಿ ಮಾದರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅಂತಹ ಮಾದರಿಗಳನ್ನು ಒಳಗೊಂಡಿರುವುದೇ ಕರ್ನಾಟಕ ರೈತ ಸಮೃದ್ಧಿ ಯೋಜನೆ. ಈ ಯೋಜನೆಗೆ ಅನುದಾನವನ್ನೇ ನೀಡುವುದಿಲ್ಲ. ಆಯಾ ಜಿಲ್ಲೆಗಳಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಆರ್ಥಿಕ ನೆರವನ್ನು ಪಡೆದು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ
ಯೋಜನೆ ಸ್ವರೂಪ ಹೀಗಿರಲಿದೆ.
ಕೃಷಿ ಕ್ಷೇತ್ರವನ್ನು ಸುಸ್ಥಿರಗೊಳಿದುವುದು ಸರ್ಕಾರದ ಮುಖ್ಯ ವಿಷಯವಾಗಿದೆ. ಈ ಉದ್ದೇಶದಿಂದ ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆಗಳ ಜೊತೆಗೆ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ಆದಾಯದಲ್ಲಿ ಸುಸ್ಥಿರತೆಯನ್ನು ಕಂಡುಕೊಳ್ಳಲು ಬೆಂಬಲ ನೀಡುವುದಾಗಿದೆ.
ಮಣ್ಣಿನ ಗುಣಗಳು, ಮಾರುಕಟ್ಟೆ ಬೇಡಿಕೆಯನ್ನು ಆಧರಿಸಿ ಯಾವ ಬೆಳೆ ಸೂಕ್ತ ಎಂದು ರೈತರಿಗೆ ಸಲಹೆ ನೀಡುವುದು.
ಮಣ್ಣು ಪರೀಕ್ಷೆ ಮತ್ತು ಗುಣಮಟ್ಟದ ಮಾಹಿತಿ ತಿಳಿಸುವುದು.
ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಅರಿವು ಮೂಡಿಸಿ, ಬೆಂಬಲ ನೀಡುವುದು.
ರೈತರಿಗೆ ಸಂಗ್ರಹಣೆ ಮತ್ತು ಮೌಲ್ಯವರ್ಧನೆಯ ಕುರಿತು ಜಾಗೃತಿ ಮೂಡಿಸುವುದು.
ರೈತರಿಗೆ ಮಾರುಕಟ್ಟೆಯ ಸಂಪರ್ಕವನ್ನು ಕಲ್ಪಿಸುವುದು.