Home Karnataka State Politics Updates Mangaluru Bajarangadal: ಆರ್.ಅಶೋಕ್‌ ಅವರಿಗೆ ಬಹಿರಂಗ ಎಚ್ಚರಿಕೆ ನೀಡಿದ ಬಜರಂಗದಳ ಮುಖಂಡ! ಮಂಗಳೂರಿಗೆ ಕಾಲಿಟ್ಟಾಗ ಪ್ರತಿರೋಧ...

Mangaluru Bajarangadal: ಆರ್.ಅಶೋಕ್‌ ಅವರಿಗೆ ಬಹಿರಂಗ ಎಚ್ಚರಿಕೆ ನೀಡಿದ ಬಜರಂಗದಳ ಮುಖಂಡ! ಮಂಗಳೂರಿಗೆ ಕಾಲಿಟ್ಟಾಗ ಪ್ರತಿರೋಧ ಎದುರಿಸಲು ಸಿದ್ಧರಾಗಿ

Mangaluru Bajarangadal

Hindu neighbor gifts plot of land

Hindu neighbour gifts land to Muslim journalist

Mangaluru: ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ವಿರುದ್ಧ ಬಜರಂಗದಳ ಆಕ್ರೋಶ ಗೊಂಡಿದೆ. ಕಾರಣವೇನೆಂದರೆ ಅಶೋಕ್‌ ಅವರು ಅಧಿವೇಶನದಲ್ಲಿ ” ನಾನು ಗೃಹ ಸಚಿವನಾಗಿದ್ದಾಗ, ಬಜರಂಗದಳದವರ ಮೇಲೆಯೇ ಗೂಂಡಾ ಕಾಯ್ದೆ ಹಾಕಿದ್ದೆ” ಎಂದು ಹೇಳಿಕೆಯನ್ನು ನೀಡಿದ್ದು, ಈ ಆಕ್ರೋಶಕ್ಕೆ ಕಾರಣ.

ಇದನ್ನೂ ಓದಿ: Actress Trisha: ನಟಿ ತ್ರಿಷಾ ವಿರುದ್ಧ ಮತ್ತೊಂದು ವಿವಾದಾತ್ಮಕ ಹೇಳಿಕೆ; 25ಲಕ್ಷ ಕೊಟ್ಟು ತ್ರಿಷಾಳನ್ನು ರೆಸಾರ್ಟ್‌ಗೆ ಕರೆಸಿದ್ದೆ-ರಾಜಕಾರಣಿಯ ಶಾಕಿಂಗ್‌ ಹೇಳಿಕೆ

https://www.facebook.com/puneethraj.kottary.1/

ಇದೀಗ ಈ ಹೇಳಿಕೆ ವಿರುದ್ಧ ಮಂಗಳೂರು ಬಜರಂಗದಳ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೇಳಿಕೊಂಡಿದ್ದಾರೆ. ಮಂಗಳೂರಿನ ಬಜರಂಗದಳದ ಕಾರ್ಯಕರ್ತರ ಪ್ರತಿರೋಧ ಎದುರಿಸಲು ಸಿದ್ಧರಾಗಿ ಎಂಬ ಮಾತಿನ ಎಚ್ಚರಿಕೆಯನ್ನು ಬಜರಂಗದಳ ಮಂಗಳೂರು ವಿಭಾಗದ ಸಹಸಂಯೋಜಕ ಪುನೀತ್‌ ಅತ್ತಾವರ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬಹಿರಂಗ ಎಚ್ಚರಿಕೆಯ ಸಂದೇಶವನ್ನು ಆರ್.ಅಶೋಕ್‌ ಅವರಿಗೆ ನೀಡಿದ್ದಾರೆ.

ನೀವು ಆರ್ ಅಶೋಕ್ ಅಲ್ಲ..ನಿಮ್ಮ ಹೆಸರನ್ನು ಎ ಅಶೋಕ್ ಅಂತ ಬದಲಾಯಿಸಿ ಬಿಡಿ ಅಡ್ಜಸ್ಟ್ ಮೆಂಟ್ ಅಶೋಕ್ ಅವರೇ..!!

ನಿಮ್ಮ ನಾಲಗೆಯನ್ನು ನಾಲಗೆ ರೀತಿಯನ್ನು ಬಳಸಿ ಎಕ್ಕಡದ ರೀತಿ ಬಳಸಿಕೊಳ್ಳಬೇಡಿ…ಅಡ್ಜಸ್ಟ್ ಮೆಂಟ್ ರಾಜಕಾರಣ ಎಂಬ ಗೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಬಜರಂಗದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆಯಿಲ್ಲ…ಸಿದ್ಧಾಂತಕ್ಕಾಗಿ ಹೋರಾಡುವ ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿ ಅವರನ್ನು ಸುಮ್ಮನಿರಿಸುವಷ್ಟು ದೊಡ್ಡವರು ನೀವಾಗಿಲ್ಲ…ಬಜರಂಗದಳ ಕಾರ್ಯಕರ್ತರು ಹೋರಾಡುವುದು ನಿಮ್ಮ ಹಾಗೆ ವೈಯಕ್ತಿಕ ಲಾಭದ ಆಸೆಗಾಗಿ ಅಲ್ಲ..ನಿಮ್ಮ ರಾಜಕೀಯ ತೆವಲಿಗಾಗಿ ಬಜರಂಗದಳ ಕಾರ್ಯಕರ್ತರ ಬಗ್ಗೆ ಆಡಿದ ಮಾತನ್ನು ಹಿಂದೆಗೆದುಕೊಳ್ಳಿ

ಪ್ರತಿಪಕ್ಷನಾಯಕನಾಗಿರುವ ನೀವು ಒಂದಲ್ಲ ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ ಎಂಬ ಮಾತು ನೆನಪಿರಲಿ…!! ಹಿಂದೂ ವಿರೋಧಿ ಕೃತ್ಯಕ್ಕೆ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನೀವೊಬ್ಬರು ಹೆಚ್ಚಾಗುವುದಿಲ್ಲ…ಒಂದಾ ಬಜರಂಗದಳದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳನ್ನು ಹಿಂದೆ ಪಡೆಯಿರಿ ಇಲ್ಲದಿದ್ದರೆ ಬಜರಂಗದಳದ ಕಾರ್ಯಕರ್ತರ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ.

ಜೈ ಶ್ರೀ ರಾಮ್

ಜೈ ಭಜರಂಗಿ

ಜೈ ಬಜರಂಗದಳ…..

ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.