Mangaluru: ಒಕ್ಕಲಿಗರ ಪ್ರೀಮಿಯರ್ ಲೀಗ್ 2024; ಮಂಗಳೂರಿನಲ್ಲಿ ನಡೆಯಲಿದೆ ಭರ್ಜರಿ ಕ್ರಿಕೆಟ್ ಕೂಟ ಆಯೋಜನೆ
ಮಂಗಳೂರು : ಯುವ ಘಟಕ ಒಕ್ಕಲಿಗರ ಯಾನೆ ಗೌಡ ಸೇವಾ ಸಂಘದ ವತಿಯಿಂದ ಫೆ.18 ಹಾಗೂ ಫೆ.19 ರಂದು ಕ್ರಿಕೆಟ್ ಪ್ರೀಮಿಯರ್ ಲೀಗ್ 2024 ಅಂತರ್ ಜಿಲ್ಲಾ ಮಟ್ಟದ ಕಿಕೆಟ್ ಪಂದ್ಯವನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ: Tanisha Kuppanda: ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ತಂಗಿ ಮಗು ನೋಡಲು ಬಂದ ತನಿಷಾ ಕುಪ್ಪಂಡ, ವೀಡಿಯೋ ವೈರಲ್
ಕೂಟದ ಉದ್ಘಾಟನೆ ಫೆ.18ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನೆರವೇರಲಿದೆ. ಸಮಾರೋಪ ಸಮಾರಂಭವು ಫೆ.19ರ ಸೋಮವಾರದಂದು ಸಂಜೆ 7 ಗಂಟೆಗೆ ನಡೆಯಲಿದೆ. ಪಂದ್ಯದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಕಾಸರಗೋಡು ಜಿಲ್ಲೆಗಳ ತಂಡಗಳು ಭಾಗವಹಿಸಲಿದ್ದು ಈಗಾಗಲೇ 32 ತಂಡಗಳು ನೊಂದಣಿ ಮಾಡಿಕೊಂಡಿವೆ.
ಈ ಹಿಂದೆ ಫೆ.17 ಹಾಗೂ ಫೆ.18ರಂದು ಕೂಟ ನಡೆಸಲು ದಿನ ನಿಗದಿಯಾಗಿತ್ತು. ಆದರೆ ಫೆ.17 ರಂದು ಕಾಂಗ್ರೆಸ್ ಸಮಾವೇಶ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆಯಲಿರುವುದರಿಂದ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಕೂಟವನ್ನು ಫೆ.18 ಮತ್ತು ಫೆ.19ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ಯುವ-ಘಟಕ-ಒಕ್ಕಲಿಗರ ಯಾನೆ ಗೌಡ ಸೇವಾ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ತಿಳಿಸಿದ್ದಾರೆ.
ಪಂದ್ಯ ವಿಜೇತರಿಗೆ 55,555 ರೂ ನಗದು ಹಾಗೂ ಟ್ರೋಪಿ, ರನ್ನರ್ ಅಫ್ ಗೆ 33,333 ರೂ ನಗದು ಜೊತೆಗೆ ಟ್ರೋಫಿ, ಹಾಗೂ ಎರಡನೇ ರನ್ನರ್ ಅಫ್ ತಂಡಕ್ಕೆ 15,555 ರೂ ನಗದು ಮತ್ತು ಟ್ರೋಫಿಯನ್ನು ನೀಡಲಾಗುವುದು. ಜೊತೆಗೆ ಸರಣಿ ಶ್ರೇಷ್ಠ ಆಟಗಾರನಿಗೆ 5,000,ರೂ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಗೆ 2,000ರೂ, ಬೆಸ್ಟ್ ಬೌಲರ್ ಗೆ 2,000ರೂ, ಬೆಸ್ಟ್ ಫೀಲ್ಡ್ ಗೆ 2000ರೂ, ಬೆಸ್ಟ್ ವಿಕೆಟ್ ಕೀಪರ್ ಗೆ 2000ರೂ, ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಆಟಗಾರನಿಗೆ 1500ರೂ, ನಗದು ಹಾಗೂ ಕಪ್ ಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಇನ್‌ವಿಟೇಷನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ