Home ಬೆಂಗಳೂರು Vijayanagar : ರಟ್ಟಿನ ಬಾಕ್ಸ್ ಒಳಗಿದ್ದ ಕೋಳಿ ಕೊಕ್ಕೊಕ್ಕೋ… ಅಂದೇ ಬಿಡ್ತು !! ಟಿಕೆಟ್ ತಗೋ...

Vijayanagar : ರಟ್ಟಿನ ಬಾಕ್ಸ್ ಒಳಗಿದ್ದ ಕೋಳಿ ಕೊಕ್ಕೊಕ್ಕೋ… ಅಂದೇ ಬಿಡ್ತು !! ಟಿಕೆಟ್ ತಗೋ ಎಂದ ಕಂಡಕ್ಟರ್, ಸೀಟ್ ಕೊಡು ಎಂದ ಮಹಿಳೆ !! ನಂತರ ಆಗಿದ್ದೇ ಬೇರೆ

Vijayanagar

Hindu neighbor gifts plot of land

Hindu neighbour gifts land to Muslim journalist

Vijayanagar: ಇತ್ತೀಚೆಗೆ ಬಸ್ ಒಳಗೆ ಕೆಲವು ವಿಚಿತ್ರ ಸನ್ನಿವೇಶಗಳು ನಡೆಯುವುದುಂಟು. ಅಂತೆಯೇ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಕಂಡಕ್ಟರ್ ಮತ್ತು ಮಹಿಳೆ ನಡುವೆ ಭಾನುವಾರ ರಾತ್ರಿ ಕೋಳಿ ಜಗಳ ನಡೆದಿದೆ. ಇದನ್ನು ಕೇಳಿದ್ರೆ ನೀವೂ ಒಮ್ಮೆ ನಕ್ಕು ಬಿಡ್ತೀರಿ…

ಇದನ್ನೂ ಓದಿ: Parliment election: ಬಿಜೆಪಿಯಿಂದ ನಾಡಿನ ಈ ಪ್ರಬಲ ಸ್ವಾಮಿಜಿ ಕಣಕ್ಕೆ?!

ಹೌದು, ಕೂಡ್ಲಿಗಿ(Kudligi) ಬಸ್‌ ನಿಲ್ದಾಣದ ಹಗರಿಬೊಮ್ಮನಹಳ್ಳಿ ಸಾರಿಗೆ ಸಂಸ್ಥೆ ಘಟಕದ ಧರ್ಮಸ್ಥಳ ಕಡೆ ಹೋಗುವ ಮಾರ್ಗದ ಬಸ್ಸಿನಲ್ಲಿ ಕೋಳಿಗೆ ಟಿಕೆಟ್‌ ನೀಡುವ ವಿಚಾರವಾಗಿ ಕಂಡಕ್ಟರ್‌ ಮತ್ತು ಮಹಿಳೆ ನಡುವೆ ಜಗಳ ನಡೆದಿದೆ. ಮಹಿಳೆಯೊಬ್ಬರು ಕೋಳಿಯನ್ನು ಬಾಕ್ಸ್‌ನಲ್ಲಿಟ್ಟುಕೊಂಡು ಬಸ್‌ನಲ್ಲಿ ಲಗೇಜ್‌ ಇಡುವ ಜಾಗದಲ್ಲಿ ಇಟ್ಟಿದ್ದರು. ಆದರೆ, ದಾರಿ ನಡುವೆ ಕೋಳಿ ಕೂಗಿದ್ದು, ಬಸ್‌ ಕಂಡಕ್ಟರ್‌ ಕೋಳಿಗೆ ಟಿಕೆಟ್‌ ಕೇಳಿದ್ದಾನೆ. ಆಗ ಮಹಿಳೆ ಟಿಕೆಟ್‌ ತಗೋತಿನಿ ಕೋಳಿಗೆ ಸೀಟು ಕೊಡಿ ಎಂದು ಜಗಳಕ್ಕೆ ಇಳಿದಿದ್ದಾಳೆ.

ಅಂದಹಾಗೆ ಬಸ್ಸಿಲ್ಲಿ ಕೋಳಿ ಕೂಗಿನ ಸದ್ದಿಗೆ ಕಂಡಕ್ಟರ್ ಟಿಕೆಟ್ ಕೇಳಿದ್ದಾರೆ. ಆಗ ಮಹಿಳೆ, ಯಾವ್ ಸೀಮೆ ಕಂಡಕ್ಟರ್ ಸ್ವಾಮಿ ನೀನು, ಕೋಳಿಗ್ಯಾರಾದ್ರೂ ಟಿಕೆಟ್ ಕೇಳ್ತಾರಾ ಅಂದಾಗ ಅಮ್ಮೋ..ರೂಲ್ಸ್ ಪ್ರಕಾರ ಕೋಳಿಗೆ ಆಫ್ ಟಿಕೆಟ್ ತಗೋಬೇಕು. ಇಲ್ಲ ಅಂದ್ರೆ ಕೋಳಿ ಹಿಡ್ಕೊಂಡು ಕೆಳಗಿಳಿ ತಾಯಿ ಅನ್ನುತ್ತಿದ್ದಂತೆ, ಮಹಿಳೆಯು ಸರಿ ಕಂಡಕ್ಟರೇ.. ಟಿಕೆಟ್ ತಗಂತೀನಿ ಆದ್ರೆ ಕೋಳಿಗಾಗಿ ಸೀಟು ಕೊಡಲೇಬೇಕು ಎಂದು ರಂಪ ಮಾಡಿದ್ದಾಳೆ. ಬಳಿಕ ಕೋಳಿ ಜಗಳ ಜೋರಾಯಿತು. ನೋಡಿ ನೋಡಿ ಸಾಕಾದ ಪ್ರಯಾಣಿಕರು ಸೇರಿ ಎಲ್ಲರೂ ಮಹಿಳೆಖೆ ಸಾಕಷ್ಟು ತಿಳಿ ಹೇಳಿದ ಬಳಿಕ ಮಹಿಳೆ ಟಿಕೆಟ್‌ ಪಡೆದಿದ್ದಾಳೆ.