Kerala: “ದೇಶವನ್ನು ರಕ್ಷಿಸಿದ ಗೋಡ್ಸ್ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಕಮೆಂಟ್ ಹಾಕಿದ ಪ್ರಾಧ್ಯಾಪಕಿ
Kerala: ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿರುವ ಪ್ರಾಧ್ಯಾಪಕಿ ವಿರುದ್ಧ ಇದೀಗ ಸಮಿತಿ ರಚಿಸಿ ತನಿಖೆ ನಡೆಸಲಾಗುತ್ತಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕ್ಯಾಲಿಕಟ್ (NIT) ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಿದ ಮಹಿಳಾ ಪ್ರಾಧ್ಯಾಪಕರ ಇತ್ತೀಚಿನ ವಿವಾದಾತ್ಮಕ ಫೇಸ್‌ಬುಕ್ ಕಾಮೆಂಟ್‌ನ ತನಿಖೆಗಾಗಿ ಸಮಿತಿಯನ್ನು ರಚಿಸಿದೆ. ಸಮಿತಿಯ ಸಂಶೋಧನೆಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ಭರವಸೆ ನೀಡಿದೆ ಎಂದು ಶನಿವಾರ ಅಧಿಕೃತ ಹೇಳಿಕೆ ತಿಳಿಸಿದೆ.
ಇಲ್ಲಿನ ಇನ್‌ಸ್ಟಿಟ್ಯೂಟ್‌ನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಅಧ್ಯಾಪಕಿಯಾಗಿರುವ ಅವರು ಜನವರಿ 30 ರಂದು ಫೇಸ್‌ಬುಕ್‌ನಲ್ಲಿ “ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆಗೆ ಹೆಮ್ಮೆ” ಎಂದು ಕಾಮೆಂಟ್ ಹಾಕಿದ್ದರು. ‘ಹಿಂದೂ ಮಹಾಸಭಾ ಕಾರ್ಯಕರ್ತ ನಾಥೂರಾಂ ವಿನಾಯಕ್ ಗೋಡ್ಸೆ, ಭಾರತದ ಹಲವರ ನಾಯಕ’ ಎಂಬ ಶೀರ್ಷಿಕೆಯೊಂದಿಗೆ ಗೋಡ್ಸೆ ಅವರ ಚಿತ್ರವನ್ನು ಪೋಸ್ಟ್ ಮಾಡಿದ ವಕೀಲ ಕೃಷ್ಣ ರಾಜ್ ಅವರ ಪೋಸ್ಟ್‌ಗೆ ಅವರು ಈ ಕಾಮೆಂಟ್ ಮಾಡಿದ್ದಾರೆ.
ಫೇಸ್‌ಬುಕ್‌ನಲ್ಲಿ “ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸ್ ಬಗ್ಗೆ ಹೆಮ್ಮೆ ಪಡಬೇಕು” ಎಂದು ಶಿಕ್ಷಕಿ ಕಮೆಂಟ್ ಮಾಡಿದ್ದರು. ಎಸ್‌ಎಫ್‌ಐ, ಕೆಎಸ್‌ಯು, ಎಂಎಸ್‌ಎಪ್ ಸೇರಿ ಹಲವು ವಿವಧ ವಿದ್ಯಾರ್ಥಿ ಸಂಘಟನೆಗಳು ಪೊಲೀಸ್ ಠಾಣೆಗಳಲ್ಲಿ ಪ್ರಾಧ್ಯಾಪಕಿ ವಿರುದ್ಧ ದೂರು ನೀಡಿದ್ದು. ಇದೀಗ ಐಪಿಸಿ ಸೆಕ್ಷನ್ 153 ಅಡಿಯಲ್ಲಿ (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ) ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ವರ್ಲ್ಡ್ ಬ್ಯಾಂಕ್‌ನಿಂದ ವಿಶ್ವದ ಅತ್ಯಂತ ಬಡ ದೇಶ ಘೋಷಣೆ