Arecanut: ಅಡಿಕೆ ಕಟಾವನ್ನು ಹೀಗೆ ಮಾಡಿ!!
ಅಡಿಕೆಯನ್ನು ಸರಿಯಾದ ಸಮಯಕ್ಕೆ ಸರಿಯಾದ ಕ್ರಮದಲ್ಲಿ ಕಟಾವು ಮಾಡುವುದು ತುಂಬ ಮುಖ್ಯವಾದದ್ದು. ಇಲ್ಲವಾದರೆ ಮುಂದಿನ ವರ್ಷದಲ್ಲಿ ಅಡಿಕೆ ಗಿಡದಲ್ಲಿ ಫಸಲೆ ಇಲ್ಲದಂತೆ ಆಗುತ್ತದೆ . ಈ ಬಗ್ಗೆ ನೋಡುತ್ತ ಹೋಗೋಣ.
ಇದನ್ನೂ ಓದಿ: Internet Speed: ನಿಮ್ಮ ಇಂಟರ್ ನೆಟ್ ಸ್ಪೀಡ್ ಮಾಡಿಕೊಳ್ಳಲು ಹೀಗೆ ಮಾಡಿ!!!
ಮೊದಲಿಗೆ ನಾವು ಅಡಿಕೆಯನ್ನು ಯಾವ ರೀತಿ ಮಾರಾಟ ಮಾಡುತ್ತೇವೆ ಎಂಬುದನ್ನು ತಿಳಿಯಬೇಕು. ಕೆಲವರು ಅಡಿಕೆಯನ್ನು ಉಂಡೆಗಳಾಗಿ ಮಾರಾಟ ಮಾಡಿದರೆ, ಇನ್ನೂ ಕೆಲವರು ಪೋಡಿ ಹಾಕಿ ಮಾರಾಟ ಮಾಡುತ್ತಾರೆ. ಪೋಡಿ ಎಂದರೆ ಅಡಿಕೆಯನ್ನು ಹಚ್ಚಿ ಮಾರಾಟ ಮಾಡುವುದು.
ನಾವು ಅಡಿಕೆಯನ್ನು ಉಂಡೆಗಳ ರೂಪದಲ್ಲಿ ಮಾರಾಟ ಮಾಡಲು ನಿರ್ಧರಿಸಿದರೆ, 1 ತಿಂಗಳಿಗೆ ಒಮ್ಮೆ ಕಟಾವು ಮಾಡಬೇಕು. ಅಡಿಕೆ ಹದವಾಗಿದೆಯೋ ಇಲ್ಲವೋ ಎಂದೂ ಕಂಡುಹಿಡಿಯುವುದು ಹೇಗೆ?? ಈ ಕೆಳಗಿನಂತೆ ವಿವರಿಸಬಹುದು.
ಅಡಿಕೆ ಗೆ ನಮ್ಮ ಉಗುರು ಇಳಿಯುವಂತೆ ಇರುವ ಅಡಿಕೆ ಕಟಾವಿಗೆ ಹದವಾಗಿರುತ್ತದೆ. ಅಡಿಕೆಯನ್ನು ಕುಯ್ಯುವ ಮೊದಲು ಕಂಕ್ಕಿಯಲ್ಲಿರುವ ಒಂದು ಅಡಿಕೆಯನ್ನು ಪರೀಕ್ಷಿಸಬೇಕು. ಅದು ಹದವಾಗಿದ್ದರೆ ಆ ಕಂಕ್ಕಿಯನ್ನು ಕುಯ್ಯಬೇಕು. ಹದವಾಗಿಲ್ಲದ ಅಡಿಕೆಯನ್ನು ಕಿತ್ತರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಬೇಯಿಸುವಾಗ ಕರಗಿ ಹೋಗುತ್ತದೆ.
ಇನ್ನೂ ಪೋಡಿ ಹಾಕಿಸಲು ನಿರ್ಧರಿಸಿದರೆ, ಚುರು ಎಳೆಯ ಅಡಿಕೆಯನ್ನು ಕಿತ್ತರು ಪರವಾಗಿಲ್ಲ. ಆದರೆ ಅಡಿಕೆಯನ್ನು ಬಲಿಸಿ ಕೊಯ್ಲು ಮಾಡಬಾರದು. ಇದರಿಂದ ಅಡಿಕೆಯ ದರ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ವರ್ಷಕ್ಕೆ ಅಡಿಕೆಯಲ್ಲಿ 4 ಕೊಯ್ಲು ಮಾಡಬಹುದು. ಅದಷ್ಟು 1 ತಿಂಗಳೊಳಗೆ ಕಟಾವು ಮಾಡುವುದು ಸೂಕ್ತ. ಏಕೆಂದರೆ ಅಡಿಕೆಯನ್ನು ಗಿಡದಲ್ಲಿ ಕಟಾವು ಮಾಡದೆ ಬಲಿದಿದರೆ. ಗಿಡವು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಅಡಿಕೆಯ ಫಸಲು ಕಡಿಮೆಯಾಗುತ್ತದೆ.
ಆದಷ್ಟೂ ಹದಾವಾಗಿರುವ ಅಡಿಕೆಯನ್ನು ಕೀಳುವುದು ಸೂಕ್ತವಾದದ್ದು. ಇದರಿಂದಾಗಿ ನಮಗೆ ಲಾಭ ದೊರೆಯುವುದ ಜೊತೆಗೆ ಅಡಿಕೆ ಗಿಡದ ಆರೋಗ್ಯವೂ ಚೆನ್ನಾಗಿರುತ್ತದೆ.