Physical Intimacy Desire In Women: ಕೊರೊನಾ ನಂತರ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ತೀವ್ರ ಕಡಿಮೆ; ಮರಳಿ ಬಯಕೆ ಹುಟ್ಟಲು ಇಲ್ಲಿದೆ ತಜ್ಞರ ಸಲಹೆ

Physical Intimacy Desire In Women: ಕೊರೊನ ಬಂದ ಸಮಯದಲ್ಲಿ ಹಲವು ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡರು. ಈ ನೋವಿನಿಂದಲೇ ಜಗತ್ತೇ ಮೇಲೆ ಬರಲು ಪ್ರಯತ್ನ ಪಡುತ್ತಿದ್ದ. ಇಂತಹ ಸಮಯದಲ್ಲಿ ಬಿಎಂಸಿ ಪಬ್ಲಿಕ್‌ ಹೆಲ್ತ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ನಿಜಕ್ಕೂ ಶಾಕಿಂಗ್‌ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಅಧ್ಯಯನದ ಪ್ರಕಾರ, ಕೊರೊನಾ ಅವಧಿಯ ನಂತರ ಅನೇಕ ಮಹಿಳೆಯಲ್ಲಿ ಲೈಂಗಿಕ ಬಯಕೆಗಳು ಕಡಿಮೆಯಾಗಿದೆ ಎಂದು.

ಈ ಸಂಶೋಧನೆಯನ್ನು ಜನವರಿ 2022 ರಲ್ಲಿ ಮಾಡಲಾಯಿತು. ಪುರುಷರಿಗಿಂತ ಮಹಿಳೆಯರು ಲೈಂಗಿಕ ಬಯಕೆಗಳೊಂದಿಗೆ ಹೆಚ್ಚು ಹೋರಾಡುತ್ತಿದ್ದಾರೆ ಎಂದು ಕಂಡುಬಂದಿದೆ.

ಇದೀಗ ಮಹಿಳೆಯರಲ್ಲಿ ಈ ಲೈಂಗಿಕ ಬಯಕೆಗಳನ್ನು ಹುಟ್ಟುಹಾಕುವುದು ಹೇಗೆ? ಇಲ್ಲಿದೆ ತಜ್ಞರ ಕೆಲವೊಂದು ಸಲಹೆ;

ಭಾವನಾತ್ಮಕ ಸಂಪರ್ಕ ಮುಖ್ಯ: ಕೋವಿಡ್ ನಂತರ ಅನೇಕ ಮಹಿಳೆಯರು ಒತ್ತಡಕ್ಕೆ ಒಳಗಾಗಿದ್ದಾರೆ. ಒತ್ತಡದ ಸಮಯದಲ್ಲಿ ಒಳ್ಳೆಯದನ್ನು ಮಾಡುವ ಬಯಕೆ ಇರುವುದಿಲ್ಲ. ನಿಮ್ಮಲ್ಲಿ ಲೈಂಗಿಕ ಬಯಕೆಯನ್ನು ಜಾಗೃತಗೊಳಿಸಲು ನೀವು ಬಯಸಿದರೆ, ನಿಮ್ಮ ಸಂಗಾತಿ ಅಥವಾ ಪತಿಯೊಂದಿಗೆ ನಿಮ್ಮ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುವುದು ಸೂಕ್ತ.

ಸಂಗಾತಿಗೆ ಸಮಯವನ್ನು ನೀಡಿ; ಸಂಬಂಧದಲ್ಲಿ ಸುದೀರ್ಘ ಸಮಯದ ನಂತರ, ಲೈಂಗಿಕ ಬಯಕೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ನೀವು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆದರೆ ಮಾತ್ರ ಭಾವನಾತ್ಮಕವಾಗಿ ಸಂಪರ್ಕವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಗುಣಮಟ್ಟದ ಲೈಂಗಿಕತೆಗೆ ಆದ್ಯತೆ: ಲೈಂಗಿಕತೆ ಸಾಮಾನ್ಯ ಜೀವನದ ಭಾಗವೆಂದು ಪರಿಗಣಿಸಬೇಡಿ. ನಿಮ್ಮ ಲೈಂಗಿಕ ಸಂಬಂಧವನ್ನು ಒಂದು ಗುಣಮಟ್ಟವನ್ನು ಹೆಚ್ಚಿಸಿ. ಇದನ್ನು ಮಾಡದಿದ್ದರೆ ನಿಮ್ಮ ಲೈಂಗಿಕ ಜೀವನ ನೀರಸದಾಯಕವಾಗಿರುತ್ತದೆ.

ನಿಮ್ಮನ್ನು ನೀವು ಅರಿತುಕೊಳ್ಳಿ: ಸ್ವಲ್ಪ ಆತ್ಮೀಯತೆಯನ್ನು ಮರಳಿ ತರಲು ನೀವು ಮಾಡುತ್ತಿರುವ ಪ್ರಯತ್ನಗಳು ಸಾಕೇ ಅಥವಾ ಇಲ್ಲವೇ ಎಂದು ನೀವೇ ಕೇಳಿಕೊಳ್ಳುವುದು ಉತ್ತಮ. ಇದನ್ನು ಗಮನಿಸಲು ಪ್ರಾರಂಭ ಮಾಡಿದಾಗ ನಿಮ್ಮ ಲೈಂಗಿಕ ಬಯಕೆಗಳು ಕ್ರಮೇಣ ಸುಧಾರಿಸುತ್ತವೆ.

ವೈದ್ಯರನ್ನು ಭೇಟಿ ಮಾಡಿ: ಸಂಭೋಗದ ನಂತರ ಅಥವಾ ಲೈಂಗಿಕತೆ ನಡೆಯುವ ಸಮಯದಲ್ಲಿ ತಮ್ಮ ಖಾಸಗಿ ಅಂಗಗಳಲ್ಲಿ ಅತೀವ ನೋವನ್ನು ಅನುಭವಿಸುವ ಅನೇಕ ಮಹಿಳೆಯರು ಇದ್ದಾರೆ. ಸಂಭೋಗದಿಂದ ನೋವುಂಟಾಗುತ್ತದೆ ಎನ್ನುವ ಕಾರಣದಿಂದ ಅವರು ನಂತರ ಗಂಡನ ಜೊತೆ ಅಥವಾ ಸಂಗಾತಿ ಜೊತೆ ಲೈಂಗಿಕತೆಯಿಂದ ಅನ್ಯೋನ್ಯವಾಗಿರಲು ಹೆದರುತ್ತಾರೆ. ಈ ರೀತಿ ಏನಾದರೂ ಸಂಭವಿಸಿದರೆ ಕೂಡಲೇ ನೀವು ವೈದ್ಯರನ್ನು ಸಂಪರ್ಕಿಸಬೇಕು ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸಬೇಕು.

Leave A Reply

Your email address will not be published.