Arecanut: ಅಡಿಕೆಯ ಗಿಡಗಳನ್ನು ಬಿಸಿಲಿನಿಂದ ರಕ್ಷಿಸುವುದು ಹೇಗೆ?

 

ಬಹಳ ಮಂದಿ ರೈತರು ಹೇಳುವುದುಂಟು. ಅಯ್ಯೋ ನಮ್ಮ ಅಡಿಕೆ ಗಿಡದ ಕಾಂಡವು ಗೆದ್ದಲು ಬಂದಿದೆ ಎಂದು. ಆದರೆ ಅವರಿಗೆ ಗೋತ್ತಿಲ್ಲ, ಬಿಸಿಲಿನ ಬೇಗೆಗೆ ಮರದ ಕಾಂಡ ಬೆಂದು ನಂತರ ಗೆದ್ದಲು ತಿನ್ನುವುದು ಎಂದು. ನಾವು ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ.

ಇದನ್ನೂ ಓದಿ: Bengaluru: ವಾಹನ ಸಾವರರಿಗೆ ಗಡುವು ನೀಡಿದ ಸರಕಾರ!!

ಬೇಸಿಗೆಯಲ್ಲಿ ಅಡಿಕೆ ಗಿಡಗಳನ್ನು ಬಿಸಿಲಿನಿಂದ ಕಾಪಾಡುವುದು ತುಂಬ ಅಗತ್ಯವಾದದ್ದು. ಬೇಸಿಗೆಯಲ್ಲಿ ಬಿಸಿಲಿನ ಬೇಗೆಗೆ ಮರದ ಮೈ ಒಣಗಿ ಮರದ ಕಾಂಡ ಸೀಳಾಗುತ್ತದೆ. ಸೀಳಾದ ಒಂದೆರೆಡು ತಿಂಗಳುಗಳಲ್ಲಿ ಗೆದ್ದಲು ಬಂದು ಗಾಳಿಗೆ ಸಿಕ್ಕಿ ಮರ ಮುರಿದು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ರೈತ ಬಾಂಧವರು ಒಂದಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಮೊದಲನೇಯದಾಗಿ ನಿಮ್ಮ ಜಮೀನಿನ ಸುತ್ತಲೂ ನೆರಳು ಕೋಡುವ ಮರಗಳು ಇರುವಂತೆ ನೋಡಿಕೊಳ್ಳಿ. ಅಥವಾ ಸ್ಥಳಾವಕಾಶವಿದ್ದರೆ ತ್ಯಾಗ,ಸಿಲವಾರ, ಬೇವು, ಹೊಂಗೆ ಯ ಮರಗಳನ್ನು ತೋಟದ ಸುತ್ತಲೂ ತೋಟಕ್ಕೆ 25 ಅಡಿಗಳ ದೂರದಲ್ಲಿ ಬೆಳೆಸಬಹುದು. ಹೀಗೆ ಮಾಡುವುದರಿಂದ ತೋಟದಲ್ಲಿ ಮಣ್ಣಿನ ತೇವಾಂಶವನ್ನು ಕಾಪಾಡುವುದರ ಜೊತೆಗೆ ಮರಗಳ ಬೆನ್ನು ಒಣಗಲನ್ನು ತಪ್ಪಿಸಬಹುದಾಗಿದೆ. ಮರಗಳು ಅದಷ್ಟು ತೋಟದಿಂದ ದೂರವಿರಲಿ. ಇದು ನೈಸರ್ಗಿಕ ಪದ್ಧತಿಯಾಗಿದೆ.

ಜಮೀನಿನಲ್ಲಿ ತೋಟದ ಸುತ್ತಲು ಸ್ಥಳ ಇಲ್ಲದೆ ಇದ್ದರೆ, ಅಡಿಕೆ ಗಿಡಗಳಿಗೆ ಬಣ್ಣ ಅಥವಾ ಸುಣ್ಣವನ್ನು ಮರದ ತೊಗಟೆಗೆ ಲೇಪನ ಮಾಡಬಹುದಾಗಿದೆ. ಸುಣ್ಣವನ್ನು ಲೇಪನ ಮಾಡುವುದು ತುಂಬಾ ಒಳ್ಳೆಯದು. ಸುಣ್ಣವನ್ನು ಲೇಪನ ಮಾಡುವುದರಿಂದ ಮರವು ತಂಪಾಗಿರುತ್ತದೆ. ಆದರೆ ಕಾಲ ಕ್ರಮೇಣ ಸುಣ್ಣ ಉದುರಿ ಹೋಗುವ ಸಾದ್ಯತೆ ಹೆಚ್ಚಿರುತ್ತದೆ. ಆಗ ಮರಗಳ ಕಾಂಡ ಮತ್ತೆ ಒಣಗಲು ಶುರುವಾಗುತ್ತದೆ. ಆದ್ದರಿಂದ ಸುಣ್ಣವನ್ನು ಹೊಡೆಯುವ ಬದಲು ಬಿಳಿಯ ಬಣ್ಣವನ್ನು (ಡಿಸ್ ಟೆಂಪರ್) ಅನ್ನು ಬಳಸುವುದು ಉತ್ತಮ.ಆಯಿಲ್ ಪೇಂಟ್ ಗಳನ್ನು ಬಳಸಬಾರದು. ಬಿಳಿಯ ಡಿಸ್ ಟೆಂಪರ್ ಬಣ್ಣವನ್ನು ಮಾತ್ರ ಬಳಸಿಕೊಂಡು ಅಡಿಕೆ ಗಿಡಗಳ ಇಡೀ ಕಾಂಡಕ್ಕೆ (ಬುಡದಿಂದ ಮೊದಲ ಗರಿಯ ವರೆಗೆ) ಲೇಪನ ಮಾಡಬೇಕು. ಮಳೆಗಾಲ ಮುಗಿದು ಬೇಸಿಗೆಯ ಆರಂಭ ಅಂದರೆ ಡಿಸೆಂಬರ್ ಕೊನೆಯ ವಾರದಲ್ಲಿ ಈ ಕೆಲಸವನ್ನು ಮಾಡಬೇಕಾಗುತ್ತದೆ. ಬಿಳಿ ಬಣ್ಣದಿಂದ ಒಂದು ಬಾರಿ ಲೇಪನ ಮಾಡಿದರೆ ಎರಡು ಮೂರು ವರ್ಷಗಳು ಹಾಗೇ ಉಳಿಯುತ್ತದೆ. ಇದರಿಂದ ಮರವು ದೀರ್ಘಕಾಲೀನದ ವರೆಗೆ ಬಿಸಿಲಿನಿಂದ ರಕ್ಷಿಸಿಕೊಳ್ಳುತ್ತದೆ. ದೊಡ್ದ ಮರಗಳ ಕಾಂಡ ಎಕೆ ಸೀಳುವುದಿಲ್ಲ? ಯಾಕೆಂದರೆ ಅವುಗಳ ಕಾಂಡ ಬಲಿತಿರುತ್ತದೆ. ಸೂರ್ಯನ ಬಿಸಿಲನ್ನು ತಡೆದುಕೊಳ್ಳುವಂತ ಶಕ್ತಿಯನ್ನು ಪಡೆದಿರುತ್ತದೆ. ಸಸಿ ಗಿಡಗಳ ಕಾಂಡ ಇನ್ನು ಹಸಿರಾಗಿ ಇರುವುದರಿಂದ ಸೂರ್ಯನ ತಾಪಕ್ಕೆ ಕಾಂಡ ಸುಡುತ್ತದೆ. ಗಿಡಕ್ಕೆ ಆರೇಳು ವರ್ಷ ಆಗುವ ವರೆಗೆ ಬಣ್ಣದ ಲೇಪನವನ್ನು ಪ್ರತಿ ವರ್ಷ ಮಾಡಬೇಕಾಗುತ್ತದೆ. ಅಡಿಕೆ ಗಿಡಗಳನ್ನು ನೆಟ್ಟ ದಿನದಿಂದ ಬಣ್ಣ ಲೇಪನ ಮಾಡುವ ಅಗತ್ಯವಿಲ್ಲ. ನೆಟ್ಟ ಎರಡು ವರ್ಷಗಳ ನಂತರ ಅಥವಾ ಪಟ್ಟೆ ಬಿಟ್ಟ ನಂತರದ ದಿನಗಳಿಂದ ಲೇಪನವನ್ನು ಖಡ್ಡಾಯವಾಗಿ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ತುಸು ವ್ಯತ್ಯಾಸವಾದರೂ ಅಡಿಕೆ ತೋಟವು ಬಿಸಿಲಿನ ಬೇಗೆಗೆ ಸಂಪೂರ್ಣವಾಗಿ ನಾಶವಾಗುತ್ತದೆ. ಆದ್ದರಿಂದ ರೈತರು ಎಚ್ಚೆತ್ತುಕೊಳ್ಳಬೇಕು.

Leave A Reply

Your email address will not be published.