Home Karnataka State Politics Updates Dakshina kannada: ಕರಾವಳಿಯಲ್ಲಿ ಕುತೂಹಲ ಕೆರಳಿಸಿದ ‘ಕಮಲ’ ಪಡೆ – ಕಟೀಲ್ ಬದಲಿಗೆ ಇವರಿಗೆ ಬಿಜೆಪಿ...

Dakshina kannada: ಕರಾವಳಿಯಲ್ಲಿ ಕುತೂಹಲ ಕೆರಳಿಸಿದ ‘ಕಮಲ’ ಪಡೆ – ಕಟೀಲ್ ಬದಲಿಗೆ ಇವರಿಗೆ ಬಿಜೆಪಿ ಟಿಕೆಟ್?!

Dakshina kannada

Hindu neighbor gifts plot of land

Hindu neighbour gifts land to Muslim journalist

Dakshina kannada: ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟಿಗೆ ಈ ಬಾರಿ ಭಾರೀ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಈ ಬಾರಿ ಹಾಲಿ ಸಂಸದ ನಳೀನ್ ಕುಮಾರ್ (Nalin kumar) ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.‌ ಕಮಲ ಪಕ್ಷದ ಈ ನಡೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Kerala: ಹಸಿವು ತಾಳಲಾರದೆ ಬೆಕ್ಕಿನ ಹಸಿ ಮಾಂಸ ತಿಂದ ಯುವಕ; ವೀಡಿಯೋ ವೈರಲ್‌

ಹೌದು, ದಕ್ಷಿಣ ಕನ್ನಡ(Dakshina kannada)ದಲ್ಲಿ ಕಟೀಲ್‌ಗೆ ಟಿಕೆಟ್ ತಪ್ಪಿಸಲು ಸಾಧ್ಯವೇ? ಎಂಬ ಪ್ರಶ್ನೆ ಸಹಜ. ಆದರೆ ಈಗ ನಡೆಯುತ್ತಿರುವ ಒಂದಷ್ಟು ಬೆಳೆವಣಿಗೆ ಅಚ್ಚರಿಗೆ ಕಾರಣವಾಗಿದೆ. ಯಾಕೆಂದರೆ ರಾಷ್ಟ್ರೀಯತೆ ಹಾಗೂ ಸಾಮಾಜಿಕ, ಹಿಂದೂ ಪರ ಕೆಲಸ ಮಾಡುತ್ತಿರುವ ಮುಖಂಡರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಯಾರು ಟಿಕೆಟ್ ಆಕಾಂಕ್ಷಿಗಳು?

ಬ್ರಿಜೇಶ್ ಚೌಟ, ಮಹೇಶ್ ವಿಕ್ರಮ್ ಹೆಗ್ಡೆ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. ಅಲ್ಲದೆ ಸ್ಥಳೀಯ ಮಟ್ಟದಲ್ಲಿ ಹಿಂದೂ ಪರ ಕೆಲಸ ಮಾಡುತ್ತಿರುವ ಬ್ರಿಜೇಶ್ ಚೌಟ ಹಾಗೂ ಪತ್ರಕರ್ತ ಮಹೇಶ್ ವಿಕ್ರಮ್ ಹೆಗ್ಡೆ ಬಗ್ಗೆ ಯುವ ಹಿಂದೂ ಕಾರ್ಯಕರ್ತರು ಒಲವು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದ್ದು ಅದು ಜಿಲ್ಲೆಯ ಪ್ರಬಾವೀ ಮುಖಂಡ ಮತ್ತು ಬಿಲ್ಲವ ಸಮುದಾಯದ ಸತ್ಯಜಿತ್ ಸುರತ್ಕಲ್ ಅವರದ್ದು. ಜಿಲ್ಲೆಯ ಬಿ.ಸಿ.ರೋಡ್ ನಲ್ಲಿನ ಪರಿವಾರದ ನಾಯಕರ ನಿವಾಸ ಒಂದರಲ್ಲಿ ಈ ಸಂಬಂಧ ಮೀಟಿಂಗ್ ನಡೆದದ್ದು ಸತ್ಯಜಿತ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುವ ನಿರ್ಧಾರಕ್ಕೆ ಬರಲಾಗಿದೆ. ಇತ್ತ ಅರುಣ್ ಪುತ್ತಿಲ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಕಟೀಲ್ ಗೆ ಸೀಟ್ ಸಿಗೋದು ಡೌಟ್ ಯಾಕೆ?

ಅಂದಹಾಗೆ ಪ್ರವೀಣ್ ನೆಟ್ಟಾರ ಹತ್ಯೆ ನಡೆದಾಗಲೇ ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಹಿಂದೂ ಕಾರ್ಯಕರ್ತರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ತಪ್ಪಿದಾಗಲೂ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಅಲ್ಲದೆ ಕಳೆದ ಲೋಕಸಭಾ ಚುನಾವಣೆಯ(Parliament election)ಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ಸಿನ ಮಿಥುನ್ ರೈ ವಿರುದ್ದ ಸುಮಾರು 2.75ಲಕ್ಷಗಳ ಭಾರೀ ಅಂತರದಿಂದ ಗೆದ್ದಿದ್ದರು. ಆದರೆ, ಈಗಿನ ಬದಲಾದ ಸನ್ನಿವೇಶದಲ್ಲಿ ಸ್ವಕ್ಷೇತ್ರದಲ್ಲೇ ಕಟೀಲ್ ವಿರೋಧವನ್ನು ಎದುರಿಸುತ್ತಿದ್ದಾರೆ ಎಂಬುದು ಕೂಡ ಟಿಕೆಟ್ ತಪ್ಪಲು ಕಾರಣವಾಗಬಹುದು.