BIG NEWS: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.

ಬೆಂಗಳೂರು: 01.04.2006 ಪೂರ್ವದಲ್ಲಿನ ನೇಮಕಾತಿಯ ಅಧಿಸೂಚನೆಗಳ ಮೂಲಕ ಆಯ್ಕೆ ಯಾಗಿರುವ , ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತ ರಾಜ್ಯಪತ್ರವನ್ನು ರಾಜ್ಯ ಸರ್ಕಾರವು ಹೊರಡಿಸಿದೆ.

ಇದನ್ನೂ ಓದಿ: Murder Case: ಲೈಂಗಿಕತೆಗೆ ಒಪ್ಪದ ಮಹಿಳೆ, ತಲೆ ಮೇಲೆ ಕಲ್ಲು ಹಾಕಿ ಬೆಂಕಿ ಹಚ್ಚಿ ಕೊಲೆ!

ಸರ್ಕಾರದ ಆದೇಶದ ಅನ್ವಯ 1.04.2006 ಹಾಗೂ ಇದಾದ ನಂತರ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರರಿಗೆ ನೂತನ ಪಿಂಚಣಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಿದೆ.

ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಸೂಚನೆಗಳ ಅನ್ವಯ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಾಗಸೂಚಿಗಳನ್ನು ಸೂಚಿಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.

ಕೇಂದ್ರ ಸರ್ಕಾರವು ತನ್ನ ನೌಕರರಿಗೆ 22-12-2003 ರ ಮೊದಲು ನೇಮಕಾತಿ/ನೇಮಕಾತಿಗಾಗಿ ಜಾಹೀರಾತು/ಹಾಗೂ ನೌಕರರು ನೇಮಕಾತಿ ಹೊಂದಿದ ನಂತರ ಸೇವೆಯನ್ನು ಆರಂಭಿಸಿದ ನೌಕರರು ಮೊದಲ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಒಂದು ಆಯ್ಕೆಯ ಅವಕಾಶವನ್ನು ಕಲ್ಪಿಸಿ ದಿನಾಂಕ:31.08.2023 ರೊಳಗೆ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ದಿನಾಂಕ:03.03.2023ರ ಅಧಿಕೃತ ಸಮಯಾವಕಾಶವನ್ನು ನೀಡಲಾಗಿದೆ.

ದಿನಾಂಕ: 03.03.2023ರ ಕೇಂದ್ರ ಸರ್ಕಾರವು ಹೊರಡಿಸಿದ ಆದೇಶದಲ್ಲಿ ಕೇಂದ್ರ ನೌಕರರಿಗೆ ಇರುವ ಸೌಲಭ್ಯಗಳನ್ನು ರಾಜ್ಯ ನೌಕರರಿಗೂ ಅನ್ವಯವಾಗುವಂತೆ ತೀರ್ಮಾನಿಸಿದ ಸರ್ಕಾರ ದಿನಾಂಕ: 01.04.2006ರ ನಂತರ ನೇಮಕಾತಿ ಹೊಂದಿದ ಎಲ್ಲಾ ಸರ್ಕಾರಿ ನೌಕರರಿಗೆ ಡಿಫೈನ್ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಭಿಮತವನ್ನು ಸೂಚಿಸಿತು. ಈ ಕ್ರಮ ಸೂಕ್ತ ಎಂದು ಪರಿಗಣಿಸಿ ಈ ಕೆಳಗಿನಂತೆ ಆದೇಶ ನೀಡಿತು.

 

ರಾಜ್ಯದಲ್ಲಿ ರಾಜ್ಯ ಸಿವಿಲ್ ಯೋಜನೆಗಳಲ್ಲಿ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ದಿನಾಂಕ 01.04.2006ರ ನಂತರ ನೇಮಕ ಹೊಂದಿದ ಸರ್ಕಾರಿ ನೌಕರರು ಈ ಕೆಳಗಿನ ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಿಸಲು ಸರ್ಕಾರ ಒಪ್ಪಿಗೆಯನ್ನು ಸೂಚಿಸಿದೆ.

1. ದಿನಾಂಕ: 01.04.2006ರ ನಂತರ ರಾಜ್ಯ ಸರ್ಕಾರಕ್ಕೆ ನೇಮಕಾತಿ ಹೊಂದಿದ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಇಷ್ಟಪಟ್ಟರೆ, ತಮ್ಮ ಅಭಿಪ್ರಾಯದ ಅಭಿಮತವನ್ನು ನಮೂನೆಯ ಜೊತೆಗೆದಿನಾಂಕ: 30.06.2024ರೊಳಗೆ ನೇರವಾಗಿ ಪ್ರಾಧಿಕಾರಕ್ಕೆ ಸಲ್ಲಿಸಬಹುದು. ಈ ಆಯ್ಕೆಯು ಕೇವಲ ಒಂದು ಬಾರಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

2. ಒಮ್ಮೆ ಮಾಡಿದ ಆಯ್ಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ.

3. ಮೇಲಿನ ಅನ್ವಯ 1 ರಂತೆ ನಿಗದಿತ ಸರ್ಕಾರಿ ನೌಕರ ಯಾವುದೇ ಅಭಿಮತವನ್ನು ಅಥವಾ ನಮೂನೆಯನ್ನು ಸಲ್ಲಿಸದೆ ಇದ್ದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರೆಯುತ್ತಾರೆ.

4. ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡುವ ನಿಗದಿತ ಅರ್ಹತೆಯನ್ನು ಹೊಂದಿರುವ ನೇಮಕಾತಿಯನ್ನು ಪ್ರಾಧಿಕಾರವು ಖಚಿತಪಡಿಸಿಕೊಂಡು 31.07.2024 ರೊಳಗಾಗಿ ಅಂತಹ ನೌಕರರನ್ನು ಕಳೆದ ಡಿಫೈನ್ಸ್ ಪಿಂಚಣಿ ಯೋಜನೆಗೊಳಪಡಿಸಲು ಸೂಕ್ತ ಮಾರ್ಗದರ್ಶನದೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಒಟ್ಟಾರೆಯ ಪ್ರಸ್ತಾವನೆಯನ್ನು ಸಲ್ಲಿಸಬೇಕು.

5. ಇಲಾಖೆಯ ಮುಖ್ಯಸ್ಥರು ತಮಗೆ ಬಂದ ಎಲ್ಲಾ ಪ್ರಸ್ತಾವನೆಗಳನ್ನು ಸ್ವೀಕರಿಸಿ ಸೂಕ್ಷ್ಮವಾಗಿ ಪರಿಶೀಲಿಸಿ ಕಳೆದ ಡಿಫೈನ್ಸ್ ಪಿಂಚಣಿ ಯೋಜನೆಗೊಳಪಡಲು ಇಚ್ಚಿಸುವ ಅಭ್ಯರ್ಥಿಗಳ ಪಟ್ಟಿಯನ್ನು 31.08.2024ರೊಳಗೆ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ನೇರವಾಗಿ ಸಲ್ಲಿಸತಕ್ಕದ್ದು.

6. ರಾಜ್ಯ ಸರ್ಕಾರ ನೌಕರರು ಈ ಇಂದಿನ ಡಿಫೈನ್ಸ್ ಪಿಂಚಣಿ ಯೋಜನೆಯನ್ನು ಪಡೆದುಕೊಳ್ಳಲು ಒಪ್ಪಿದರೆ ಮನವಿಯನ್ನು ಹಿಂದಿನ ನೇಮಕಾತಿ ಪ್ರಾಧಿಕಾರಕ್ಕೆ ದಿನಾಂಕ 30.06.2024ರೊಳಗಾಗಿ ಸಲ್ಲಿಸಬೇಕಾಗುತ್ತದೆ. ಬೇರೆ ಬೇರೆ ಇಲಾಖೆಗೆ ಆಯ್ಕೆಯಾಗಿರುವ ಹುದ್ದೆಗೆ ವರದಿಮಾಡಿಕೊಳ್ಳುವ ಕಾರಣ ಹೇಳಿ ಬಿಡುಗಡೆ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಂಡು ಮೇಲಿನ ಕ್ರಮ ಸಂಖ್ಯೆ (4) ರಂತೆ ಪರಿಶೀಲಿಸಿ ಮೇಲಿನ ಕ್ರಮ ಸಂಖ್ಯೆ (5) ರಂತೆ ಮುಂದಿನ ಕ್ರಮಕ್ಕಾಗಿ ಕಳುಹಿಸಿ ಕೊಡಬೇಕು ಎಂದು ಆದೇಶವು ತಿಳಿಸಿದೆ.

Leave A Reply

Your email address will not be published.