Upendra Movie Song: ಸಿಎಂ ಸಿದ್ದುಗೂ ಬಿಡದ, ‘ಏನಿಲ್ಲ ಏನಿಲ್ಲ’ ಮೊಯೆ ಮೊಯೆ!! ಹಾಡಿನ ನಂಟು

Share the Article

Upendra Movie Song: ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ ಎಂಬ ಹಾಡು ಇತ್ತೀಚೆಗೆ ಸೂಪರ್ ಹಿಟ್ ಆಗಿತ್ತು. ಈ ಹಾಡು ಬಹು ಮಂದಿ ಪ್ರೇಮಿಗಳ ನಿದ್ದೆಯನ್ನು ಕೆಡೆಸಿತ್ತು. ಅಷ್ಟಕ್ಕೇ ಸುಮ್ಮನಾಗದೆ ಇದೀಗ ಸಿಎಂ ಸಿದ್ದು ಸಹ ಹಾಡಿನೊಳಗೆ ಸಿಲುಕಿದ್ದಾರೆ.ಹಾಗಾದರೆ ಈಗ ಆಗಿದ್ದೇನು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

ಈ ಸಿನಿಮಾ ವು 1999 ರಲ್ಲಿ ತೆರೆಕಂಡು ಕನ್ನಡದ ಸಿನಿ ರಂಗದಲ್ಲಿ ತನ್ನ ವಿಶೇಷ ಹಾಡಿನ ಮೂಲಕ ಹೊಸದೊಂದು ದಾಖಲೆಯನ್ನು ಬರೆಯಿತು. ಉಪೇಂದ್ರರವರ ಸಿನಿಮಾದ ಸೂಪರ್ ಹಿಟ್ ಹಾಡಾಗಿ ‘ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ’ ಎಂಬ ಹಾಡಿನಿಂದ ಕೋಟ್ಯಂತರ ಮಂದಿ ಹುಚ್ಚೆದ್ದು ಕುಣಿದಿದ್ದರು.

ಹೀಗೆ ಜನಮಾನಸದಲ್ಲಿ ಬೆರೆತು ಹೋದ ಹಾಡಿಗೆ ಈಗ 25 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಕೆಲವರು ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ಹೋಲಿಸಿ ಟ್ರೋಲ್ ಮಾಡಲು ಈ ಹಾಡನ್ನು ಬಳಸಿಕೊಂಡಿದ್ದಾರೆ.

ಮೊಯೆ ಮೊಯೆ vs ಏನಿಲ್ಲ ಏನಿಲ್ಲ!

ಚುನಾವಣೆಗಳು ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ವ್ಯಕ್ತಿಗಳ ಬಗ್ಗೆ ಟ್ರೋಲ್ ಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸಿದ್ದರಾಮಯ್ಯರವರ ವಿಚಾರಗಳು ಹೆಚ್ಚಾಗಿ ಟ್ರೋಲ್ ಗೆ ಗುರಿಯಾಗುತ್ತಿವೆ.

ಅದೇ ರೀತಿ ಸಿಎಂ ಸಿದ್ದು ಹಾಗೂ ಪ್ರಧಾನ ಮಂತ್ರಿ ಮೋದಿ ಅವರ ನಡುವೆ ಈ ಹಾಡನ್ನು ಬಳಸಿಕೊಂಡು ಹೋಲಿಕೆ ಮಾಡುತ್ತಿದ್ದಾರೆ ಕೆಲವರು. ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಏನಿಲ್ಲ ಏನಿಲ್ಲ ಸಾಂಗ್ ಜೊತೆಗೆ ಮೊಯೆ ಮೊಯೆ ರಿಮಿಕ್ಸ್ ಬಳಸಿ ಟ್ರೋಲ್ ಮಾಡುತ್ತಿದ್ದಾರೆ.

‘ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ.. ಏನೇನಿಲ್ಲ.. ಏನಿಲ್ಲ ಏನಿಲ್ಲ.. ನಿನ್ನ ನನ್ನ ನಡುವೆ ಏನಿಲ್ಲ.. ನಿಜದಂತಿರುವ ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವೂ ಸುಳ್ಳಲ್ಲ ಏನಿಲ್ಲ ಏನಿಲ್ಲ.. ಏನೇನಿಲ್ಲ… ಹೀಗೆ ಇರುವ ಹಾಡನ್ನು ಮೊಯೆ ಮೊಯೆ ಯ ಜೊತೆಗೆ ಮಿಕ್ಸ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ.

ಮುಖ್ಯವಾಗಿ ಸಿಎಂ ಸಿದ್ದರಾಮಯ್ಯರವರಿಗೆ ಈ ಹಾಡನ್ನು ಹಾಕಿ ಟ್ರೋಲ್ ಮಾಡುತ್ತಿರುವುದು ಪರ ವಿರೋಧಗಳ ಚರ್ಚೆಗೆ ಕಾರಣವಾಗುತ್ತಿದೆ. ಇದೆಲ್ಲದರ ನಡುವೆ ಟ್ರೋಲ್ ಜೊತೆಗೆ ಹಾಡಿನ ಪಾಪಿಲಾರಿಟಿ ಸಹ ಹೆಚ್ಚುತ್ತಿದೆ.

Leave A Reply

Your email address will not be published.