Puttur: ಪುತ್ತೂರು ಹೊರತು ಪಡಿಸಿ 7 ಮಂಡಲಗಳಿಗೆ ಅಧ್ಯಕ್ಷರ ನೇಮಕ ಮಾಡಿದ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ!!

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಮಂಡಲಗಳಿಗೆ ಅಧ್ಯಕ್ಷರನ್ನು ನೇಮಕಗೊಳಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಆದೇಶ ನೀಡಿದ್ದಾರೆ. ಕಿಶೋರ್‌ ಬೊಟ್ಯಾಡಿಯವರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಭಾಗಗಳಿಗೆ ಪದಾಧಿಕಾರಿಗಳ ಘೋಷಣೆಯಾಗಿದೆ. ಆದರೆ ಪುತ್ತೂರು ಮಂಡಲದ ಅಧ್ಯಕ್ಷ ಹಾಗೂ ಜಿಲ್ಲಾ ಉಪಾಧ್ಯಕ್ಷ ಒಂದು ಸ್ಥಾನಕ್ಕೆ ಇನ್ನೂ ಹೆಸರು ಘೋಷಣೆಯಾಗಿಲ್ಲ. ಈ ಕುರಿತು ಭಾರೀ ಕುತೂಹಲ ಮೂಡಿದೆ.

ಇದನ್ನೂ ಓದಿ: Instagram: ಇನ್‌ಸ್ಟಾಗ್ರಾಮ್ ಬಳಕೆದಾರರೇ ಇಲ್ಲಿದೆ ನಿಮಗೊಂದು ಎಚ್ಚರಿಕೆಯ ಮಾಹಿತಿ!!

ಮಂಡಲ ಅಧ್ಯಕ್ಷರ ಪಟ್ಟಿ: ಬೆಳ್ತಂಗಡಿ ಮಂಡಲಕ್ಕೆ ಶ್ರೀನಿವಾಸ್‌ ರಾವ್‌, ಮೂಡುಬಿದಿರೆಗೆ ದಿನೇಶ್‌ ಪುತ್ರನ್‌, ಮಂಗಳೂರು ನಗರ ಉತ್ತರಕ್ಕೆ ರಾಜೇಶ್‌ ಕೊಟ್ಟಾರಿ, ಮಂಗಳೂರು ನಗರದ ದಕ್ಷಿಣಕ್ಕೆ ರಮೇಶ್‌ ಕಂಡೆಟ್ಟು, ಮಂಗಳೂರಿಗೆ ಜಗದೀಶ್‌ ಆಳ್ವ ಕುವೆತ್ತಬೈಲ್‌, ಬಂಟ್ವಾಳಕ್ಕೆ ಚೆನ್ನಪ್ಪ ಕೋಟ್ಯಾನ್‌, ಸುಳ್ಯಕ್ಕೆ ವೆಂಕಟ ವಳಲಂಬೆ ಅವರನ್ನು ನೇಮಕ ಮಾಡಲಾಗಿದೆ.

ವಿವಿಧ ಮೋರ್ಚಾಗಳ ಅಧ್ಯಕ್ಷರ ಪಟ್ಟಿ; ಮೋರ್ಚಾ ಅಧ್ಯಕ್ಷರ ನೇಮಕ ಎಸ್‌.ಟಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾಗಿ ಪುತ್ತೂರು ತಾಲೂಕು ಪಂಚಾಯತ್‌ ಸದಸ್ಯರಾಗಿದ್ದ ಹರೀಶ್‌ ಬಿಜತ್ರೆ, ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷರಾಗಿ ಮಂಜುಳಾ ರಾವ್‌, ಯುವ ಮೋರ್ಚಾ ಅಧ್ಯಕ್ಷರಾಗಿ ನಂದನ್‌ ಮಲ್ಯ, ಎಸ್ಸಿ ಮೋರ್ಚಾಕ್ಕೆ ಜಗನ್ನಾಥ್‌ ಬೆಲ್ವಾಯಿ, ರೈತ ಮೋರ್ಚಾಕ್ಕೆ ಗಣೇಶ್‌ ಗೌಡ ನಾವುರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪದಾಧಿಕಾರಿಗಳ ಪಟ್ಟಿ

ಸುನೀಲ್‌ ಆಳ್ವ, ಮೂಲ್ಕಿ ಉಪಾಧ್ಯಕ್ಷರು

ಶ್ರೀ ಜಯಂತ್‌ ಪೂಜಾರಿ, ಬೆಳ್ತಂಗಡಿ ಉಪಾಧ್ಯಕ್ಷರು

ತಿಲಕ್‌ರಾಜ್‌ ಕೃಷ್ಣಾಪುರ ಉಪಾಧ್ಯಕ್ಷರು

ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷರು

ಶ್ರೀಮತಿ ಪೂಜಾ ಪೈ, ಉಪಾಧ್ಯಕ್ಷರು

ಶ್ರೀ ರಾಕೇಶ್‌ ರೈ ಕೆಡಿಂಜೆ, ಉಪಾಧ್ಯಕ್ಷರು

ಶ್ರೀ ಶಾಂತಿಪ್ರಸಾದ್‌ ಹೆಗ್ಡೆ, ಉಪಾಧ್ಯಕ್ಷರು

ಶ್ರೀ ಪ್ರೇಮಾನಂದ ಶೆಟ್ಟಿ, ಮಂಗಳೂರು ಪ್ರಧಾನ ಕಾರ್ಯದರ್ಶಿ

ಶ್ರೀ ಯತೀಶ್‌ ಆರ್ವಾರ್‌, ಸುಳ್ಯ ಪ್ರಧಾನ ಕಾರ್ಯದರ್ಶಿ

ಶ್ರೀ ಕಿಶೋರ್‌ ಬೊಟ್ಯಾಡಿ, ಪುತ್ತೂರು ಪ್ರಧಾನ ಕಾರ್ಯದರ್ಶಿ

ಶ್ರೀ ವಿನಯ ಮುಳುಗಾಡು, ಕಾರ್ಯದರ್ಶಿ

ಶ್ರೀ ದೇವಪ್ಪ ಪೂಜಾರಿ ಬಂಟ್ವಾಳ, ಕಾರ್ಯದರ್ಶಿ

ಶ್ರೀ ಕವಿತಾ ದಿನೇಶ್‌, ಮೂಡುಶೆಡ್ಡೆ, ಕಾರ್ಯದರ್ಶಿ

ಶ್ರೀಮತಿ ವಸಂತಿ ಕುಲಾಲ್‌ ಮಚ್ಚಿನ ಕಾರ್ಯದರ್ಶಿ

ಶ್ರೀಮತಿ ಪೂರ್ಣಿಮಾ, ಕಾರ್ಯದರ್ಶಿ

ಶ್ರೀಮತಿ ವಿದ್ಯಾಗೌರಿ ಪುತ್ತೂರು, ಕಾರ್ಯದರ್ಶಿ

ಶ್ರೀ ದಿನೇಶ್‌ ಅಮ್ಮೂರು, ಕಾರ್ಯದರ್ಶಿ

ಶ್ರೀ ಸೀತಾರಾಮ ಬೆಳಾಲ್‌, ಕಾರ್ಯದರ್ಶಿ

ಶ್ರೀ ಸಂಜಯ ಪ್ರಭು, ಕೋಶಾಧಿಕಾರಿ

ಶ್ರೀ ಅರವಿಂದ ಬೆಂಗ್ರೆ, ಕಾರ್ಯಾಲಯ ಕಾರ್ಯದರ್ಶಿ

Puttur

Leave A Reply

Your email address will not be published.