Pejavara shri: ಎಲ್ ಕೆ ಅಡ್ವಾಣಿಗೆ ಭಾರತ ರತ್ನ- ಅಯೋಧ್ಯೆಯಲ್ಲಿರೋ ಪೇಜಾವರ ಶ್ರೀಗಳಿಂದ ಬಂತು ಮಹತ್ವದ ಸಂದೇಶ !!

Share the Article

 

Pejavara shri: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ(LK Advani) ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ(Bharata rtna)ವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಅನೇಕ ನಾಯಕರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಬೆನ್ನಲ್ಲೇ ಅಯೋಧ್ಯೆಯಲ್ಲಿರುವ ಉಡುಪಿಯ ಪೇಜಾವರ ಶ್ರೀ(Pejavara shri)ಗಳಿಂದ ಮಹತ್ವದ ಸಂದೇಶವೊಂದು ಬಂದಿದೆ.

ಹೌದು, ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನಾ ಪ್ರಯುಕ್ತ 48 ದಿನಗಳ ಮಂಡಲೋತ್ಸವವು ಉಡುಪಿಯ ಪೇಜಾವರಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಸಮ್ಮುಖದಲ್ಲಿ ನೆರವೇರುತ್ತಿದ್ದು, ಶ್ರೀಗಳು ಅಯೋಧ್ಯೆಯಲ್ಲಿಯೇ ಇದ್ದಾರೆ. ಇದೀಗ ಅಡ್ವಾಣಿ ಅವರಿಗೆ ಭಾರತ ರತ್ನ ಬಂದಿರುವ ಕುರಿತು ಅವರು, ಮಾಜಿ ಉಪಪ್ರಧಾನಿ ನೀಡುವ ವಿಚಾರ ಕೇಳಿ ತುಂಬಾ ಸಂತೋಷವಾಗಿದೆ. ರಾಮ ಮತ್ತು ಕೃಷ್ಣದೇವರ ಅನುಗ್ರಹ ಅಡ್ವಾಣಿಯವರಿಗೆ ಸದಾ ಕಾಲ ಇರಲಿ ಎಂದು ತಿಳಿಸಿದ್ದಾರೆ.

ಅಲ್ಲದೆ ಶ್ರೀರಾಮಚಂದ್ರನ ಭಕ್ತಿಯನ್ನು ದೇಶದಲ್ಲಿ ಜಾಗೃತವಾಗಿಟ್ಟವರು ಅಡ್ವಾಣಿಯವರು. ರಥಯಾತ್ರೆಯ ಮೂಲಕ ಸುಪ್ತವಾಗಿದ್ದ ರಾಮಮಂದಿರ ಹೋರಾಟಕ್ಕೆ ಬಲ ತುಂಬಿದವರು. ಶ್ರೀ ವಿಶ್ವೇಶ ತೀರ್ಥರ ಜೊತೆ ವಿಶೇಷ ಒಡನಾಟ ಇಟ್ಟುಕೊಂಡಿದ್ದ ಅಡ್ವಾಣಿಯವರು. ಈ ವಯಸ್ಸಿನಲ್ಲೂ ಅವರ ಶ್ರದ್ಧೆ ಮೆಚ್ಚುವಂಥದ್ದು. ಅಡ್ವಾಣಿಯವರು ದೇಶದ ರಾಜಕಾರಣಕ್ಕೆ ಉತ್ತಮ ಮಾರ್ಗದರ್ಶಿಯಾಗಿದ್ದಾರೆ. ಅವರಿಗೆ ಭಾರತ ರತ್ನ ಬಂದದ್ದು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.