Belthangady: ಕಾರು-ಬೈಕ್‌ ಭೀಕರ ಅಪಘಾತ, ಬೈಕ್‌ ಸವಾರ ಸಾವು!

Share the Article

Bantwala: ಕಾರು ಮತ್ತು ಬೈಕ್‌ ಅಪಘಾತದಲ್ಲಿ ಬೈಕ್‌ ಸವಾರ ಬೆಳ್ತಂಗಡಿಯ ಯುವಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆಯೊಂದು ಬಂಟ್ವಾಳ ತಾಲೂಕಿನ ಮಧ್ವದಲ್ಲಿ ನಡೆದಿದೆ.

ಬೈಕ್‌ ಸವಾರ ಪ್ರದೀಪ್‌ ಶೆಟ್ಟಿ (27) ಎಂಬಾತನೇ ಮೃತ ವ್ಯಕ್ತಿ. ಬೆಳ್ತಂಗಡಿಯ ರಮೇಶ್‌ ಶೆಟ್ಟಿ ಮತ್ತು ಪ್ರೇಮ ದಂಪತಿಯ ಎರಡನೇ ಪುತ್ರ ಇವರಾಗಿದ್ದಾರೆ.

ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ಸಮಯದಲ್ಲಿ ಕಾವಳಕಟ್ಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದು, ಈತನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕೊಂಡು ಹೋದರೂ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿ ಬೆಳ್ತಂಗಡಿಯ ಮುತ್ತೂಟು ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸಂಸ್ಥೆಯ ಕೆಲಸಕ್ಕೆಂದು ಮಂಗಳೂರಿಗೆ ಹೋಗಿದ್ದರು ಎಂದು ವರದಿಯಾಗಿದೆ. ಈ ಘಟನೆ ಕುರಿತು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply