H D kumarswamy: ಎಚ್ ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ನಾಯಕರು !!

H D kumarswamy: ಮಂಡ್ಯ (Mandya) ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಕಳೆದ ಶನಿವಾರ ರಾತ್ರಿ ಹನುಮಧ್ವಜ (Hanuma Dhwaja) ಹಾರಿಸಿದ್ದು, ಪೊಲೀಸರನ್ನು ಬಳಸಿ ಕೆಳಗೆ ಇಳಿಸಿದ್ದ ಪ್ರಕರಣದ ಹೋರಾಟ ಇದೀಗ ಹಿಂಸಾಚಾರದ ಸ್ವರೂಪ ಪಡೆದುಕೊಂಡಿದೆ. ಒಂದೆಡೆ ಇದು ಹಲವಾರು ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದ್ದರೆ ಮತ್ತೊಂದೆಡೆ ಬಿಜೆಪಿಯು ಇದನ್ನು ಎಲ್ಲಾ ಆಯಾಮಗಳಿಂದಲೂ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ.

ಮಂಡ್ಯದಲ್ಲಿ ಹನುಮಧ್ವಜ್ವ ಇಳಿಸಿದ ಪ್ರಕರಣದ ಹೋರಾಟ ರಾಜ್ಯಾದ್ಯಂತ ವ್ಯಾಪಿಸುವ ಲಕ್ಷಣ ಕಾಣುತ್ತಿದೆ. ಹೀಗಾಗಿ ಬಿಜೆಪಿ ನಾಯಕರೆಲ್ಲರೂ ಬೀಡುಬಿಟ್ಟಿದ್ದಾರೆ. ಇದರೊಂದಿಗೆ ಬಿಜೆಪಿಯ ದೋಸ್ತಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ(H D kumarswamy)ಅವರು ಕೂಡ ಕೇಸರಿ ಶಾಲು ಹೊದ್ದು ಮಂಡ್ಯದಲ್ಲಿ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಈ ಬೆನ್ನಲ್ಲೇ ಮಂಡ್ಯದ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ.

ಹೌದು, ಮಂಡ್ಯದ ಪ್ರತಿಭಟನೆಗೆ ಹೆಚ್ ಡಿ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದಂತೆ ಅಲ್ಲಿದ್ದಂತಹ ಮಂಡ್ಯದ ಬಿಜೆಪಿ ನಾಯಕರಾದ ನಾರಾಯಣ ಗೌಡ(Narayana Gowda, preetam gowda) ಹಾಗೂ ಪ್ರೀತಂ ಗೌಡ ಅವರು ಪ್ರತಿಭಟನೆಯನ್ನೇ ಬಿಟ್ಟು ಹೊರಟಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದಂತೆ ಬಿಜೆಪಿ(BJP) ನಾಯಕರ ಈ ನಡೆ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಬಾರಿ ಮಜುಗರವನ್ನುಂಟುಮಾಡಿದೆ. ಇದರಿಂದಾಗಿ ಬಿಜೆಪಿ ನಾಯಕರು ಬಹಿರಂಗವಾಗಿಯೇ ಜೆಡಿಎಸ್ ಜೊತೆಗಿನ ಮುತ್ರಿಯನ್ನು ಬಹಿಷ್ಕರಿಸಿದ್ದಾರೆ.

ಅಲ್ಲದೆ ಹೈಕಮಾಂಡ್ ಹಾಗೂ ರಾಷ್ಟ್ರ ನಾಯಕರು ಕುಮಾರಸ್ವಾಮಿಯನ್ನು ಒಪ್ಪಿಕೊಂಡರು ಕೂಡ ಇಲ್ಲಿನ ಪ್ರಾದೇಶಿಕ ನಾಯಕರು ಅವರನ್ನು ಒಪ್ಪಿಕೊಳ್ಳದಿರುವುದು ಮೈತ್ರಿಗೆ ಭಾರಿ ದೊಡ್ಡ ಹೊಡೆತವನ್ನು ನೀಡಿದೆ. ಇದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಹೆಣೆಸಲು ನಿರ್ಧಾರ ಮಾಡಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಆರಂಭಿಕ ಹಂತದಲ್ಲೇ ನಿರಾಸೆ ಉಂಟಾಗಿದೆ.

Leave A Reply

Your email address will not be published.