Jarkhand CM Missing: ಜಾರ್ಖಂಡ್ ಸಿಎಂ ಹೇಮಂತ್ ಸುರೇನ್ ನಾಪತ್ತೆ !!

Jarkhand CM Missing: ಆಪಾದಿತ ಭೂ ಹಗರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಕೇಸ್‌ ಎದುರಿಸುತ್ತಿರುವ ಜಾರ್ಖಂಡ್‌ ಸಿಎಂ(Jarkhand CM) ಹೇಮಂತ್‌ ಸೊರೆನ್‌ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ತಿಳಿಸಿದೆ.

 

ಹೌದ, ಹೇಮಂತ್ ಸುರೇನ್(Hemanth Soren) ಅವರು ಆಪಾದಿತ ಭೂ ಹಗರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಕೇಸ್‌ ಎದುರಿಸುತ್ತಿದ್ದು, ಜನವರಿ 27 ರಂದು ಜಾರಿ ನಿರ್ದೇಶನಾಲಯ ಸೊರೆನ್‌ಗೆ 9ನೇ ಸಮನ್ಸ್‌ಅನ್ನು ನೀಡಿತ್ತು. ಇದಕ್ಕೂ ಮುನ್ನ ಜನವರಿ 27 ಅಥವಾ ಜನವರಿ 31ರ ಸಮಯದಲ್ಲಿ ವಿಚಾರಣೆಗೆ ಸಹಾಯ ಮಾಡುವಂತೆ ಇಡಿ ಸೊರೆನ್‌ಗೆ ಮನವಿ ಮಾಡಿತ್ತು. ಆದರೆ, ಇದಕ್ಕೆ ಹೇಮಂತ್‌ ಸೊರೆನ್‌ ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಅವರ ನಾಪತ್ತೆ ಆಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ತಿಳಿಸಿದೆ.

ಇನ್ನು ಸೊರೆನ್‌ ಅವರು ಮಿಸ್ಸಿಂಗ್‌ ಆಗಿದ್ದಾರೆ ಎಂದು ಇಡಿ ತನ್ನ ಪತ್ರಿಕೆಗಳಿಗೆ ತಿಳಿಸಿದ ಕೆಲವೇ ಹೊತ್ತಿನಲ್ಲಿ ಜಾರ್ಖಂಡ್‌ ಸಿಎಂ ತಾನಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಜನವರಿ 31ರಂದು ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.

Leave A Reply

Your email address will not be published.