Dakshina Kannada: ದ.ಕ. ಜಿಲ್ಲೆಗೆ ಸಿಗದ ನಿಗಮ ಮಂಡಳಿ ಸ್ಥಾನಮಾನ; ಭಾರೀ ನಿರಾಸೆ!!!
Dakshina Kannada: ದಕ್ಷಿಣ ಕನ್ನಡ ಜಿಲ್ಲೆಗೆ ನಿಗಮ ಮಂಡಳಿ ಸ್ಥಾನಮಾನ ದೊರಕಿಲ್ಲ. ಕೆ.ಸಿ.ವೇಣುಗೋಪಾಲ್ ಪಟ್ಟಿಯಲ್ಲಿದ್ದ ಹೆಸರನ್ನು ಸಿಎಂ ಸಿದ್ದರಾಮಯ್ಯ ಅವರು ಕೈ ಬಿಟ್ಟಿರುವ ಕುರಿತು ಇದೀಗ ಪ್ರಶ್ನೆ ಎದ್ದಿವೆ.
ಇದನ್ನೂ ಓದಿ: Vijayapura: ಜೈಲಿನಲ್ಲಿ ರಾಮೋತ್ಸವ ಆಚರಣೆ, ಹಿಂದೂ ಕೈದಿಗಳ ಮೇಲೆ ಅನ್ಯಕೋಮಿನವರಿಂದ ಹಲ್ಲೆ, ಮುಸ್ಲಿಂ ಅಧಿಕಾರಿಗಳ ಸಾಥ್ !!
ಕೆ.ಸಿ.ವೇಣುಗೋಪಾಲ್ ಪಟ್ಟಿಯಲ್ಲಿ ಖಾದರ್ ಆಪ್ತೆ ಮಮತಾ ಗಟ್ಟಿ ಅವರು ಹೆಸರಿತ್ತು ಎಂದು ಹೇಳಲಾಗಿತ್ತು. ಮಂಗಳೂರಿನ ಉಳ್ಳಾಲ ವಲಯದ ಕಾಂಗ್ರೆಸ್ ನಾಯಕಿ ಮಮತಾ ಗಟ್ಟಿ ಅವರ ಹೆಸರು ವೇಣುಗೋಪಾಲ್ ಫೈನಲ್ ಮಾಡಿದ್ದ 39 ಜನರ ಪಟ್ಟಿಯಲ್ಲಿತ್ತು. ಸದ್ಯ ದ.ಕ ಜಿಲ್ಲೆಯಲ್ಲಿ ಖಾದರ್ ಹೊರತುಪಡಿಸಿ ಪುತ್ತೂರಿನಲ್ಲಿ ಮಾತ್ರ ಕಾಂಗ್ರೆಸ್ ಗೆ ಬಲ ಇದೆ. ಅಶೋಕ್ ರೈ ಮಾತ್ರ ದ.ಕ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ.
ನಿಗಮ ಮಂಡಳಿಗೆ ದ.ಕ.ಜಿಲ್ಲೆಯಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದರು. ಹಾಲಿ ಪುತ್ತೂರು ಶಾಸಕ ಅಶೋಕ್ ರೈ, ಎಂಎಲ್ ಸಿಗಳಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ ರೇಸ್ ನಲ್ಲಿದ್ದರು. ಇವರ ಜೊತೆಗೆ ಹಲವು ಕಾಂಗ್ರೆಸ್ ಸ್ಥಳೀಯ ನಾಯಕರು, ಕಾರ್ಯಕರ್ತರು ಆಕಾಂಕ್ಷೆ ಹೊಂದಿದ್ದರು ಎನ್ನಲಾಗಿದೆ. ಆದರೂ ಮಮತಾ ಗಟ್ಟಿ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಇತ್ತು ಎನ್ನಲಾಗಿತ್ತು. ಆದರೆ ಇದೀಗ ಮಮತಾ ಗಟ್ಟಿ ಅವರಿಗೂ ಸ್ಥಾನ ತಪ್ಪಿದೆ ಎನ್ನಲಾಗಿದೆ. ದ.ಕ. ಜಿಲ್ಲೆಗೆ ಈ ಮೂಲಕ ನಿಗಮ ಮಂಡಳಿ ಹಂಚಿಕೆಯಲ್ಲಿ ನಿರಾಸೆ ಕಂಡಿದೆ.