Ram Mandir ದಲ್ಲಿ ಹಸಿರು ಬಾವುಟ ಸ್ಟೇಟಸ್ ಪ್ರಕರಣ: ಆರೋಪಿಯ ಬಂಧನ !!

Share the Article

Ram Mandir: ಅಯೋಧ್ಯೆ ರಾಮಮಂದಿರದ (Ram Mandir)ಮೇಲೆ ಹಸಿರು ಧ್ವಜ ಹಾರಿಸಿದ್ದ ಫೋಟೊ ವಾಟ್ಸಪ್‌ ಸ್ಟೇಟಸ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Ram Mandir

ಧಾರವಾಡ (Dharwad)ತಾಲೂಕಿನ ತಡಕೋಡ ಗ್ರಾಮದ ಸದ್ದಾಂ ಹುಸೇನ್ ಬಂಧಿತ ಆರೋಪಿ ಎನ್ನಲಾಗಿದ್ದು, ಅಯೋಧ್ಯೆ ರಾಮಮಂದಿರದ ಮೇಲೆ ಹಸಿರುಧ್ವಜ ಎಡಿಟ್ ಮಾಡಿ ಅದರ ಫೋಟೊ ಸ್ಟೇಟಸ್ ಹಾಕಿದ್ದ. ಇದು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿ ಇದರಿಂದ ನೂರಾರು ಹಿಂದುಗಳು ರಾತ್ರೋ ರಾತ್ರಿ ಈದ್ಗಾ ಮೈದಾನಕ್ಕೆ ನುಗ್ಗಿ ಗಲಾಟೆ ಮಾಡಿದ್ದರು.

ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮೊದಲೇ ಎಚ್ಚೆತ್ತ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ಭೇಟಿ ನೀಡಿ ಸ್ಥಳೀಯ ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ ನಡೆಸಿ ಹಾನಿಯಾಗಿದ್ದ ಗುಂಬಜ್ ವನ್ನು ಕೆಲವೇ ನಿಮಿಷಗಳಲ್ಲಿ ದುರಸ್ತಿ ಮಾಡಲಾಗಿದೆ ಎನ್ನಲಾಗಿದೆ.

Leave A Reply

Your email address will not be published.