Spiritual Tips: ನಿಮಗಿದು ಗೊತ್ತೇ? ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕೆಂದು? ಇಲ್ಲಿದೆ ನೋಡಿ ವಿವರ
Spiritual Tips: ಪ್ರದಕ್ಷಿಣೆ (Temple Pradakshina)ಒಂದು ರೀತಿಯ ಪ್ರಾಯಶ್ಚಿತ್ತದ ಭಾಗವಾಗಿದ್ದು, ಸಂಪೂರ್ಣ ನಮ್ರತೆ ಮತ್ತು ಭಕ್ತಿಯಿಂದ ಮಾಡಿದರೆ ಇದರ ಫಲ ಸಿಗುತ್ತದೆ. ದೇವರ ಮುಂದೆ ಸಂಪೂರ್ಣ ಶರಣಾಗತಾನಾಗುವುದು ಪ್ರದಕ್ಷಿಣೆಯ ಮೂಲ ಉದ್ದೇಶವಾಗಿದೆ. ಇದರ ಜೊತೆಗೆ ಶಾಸ್ತ್ರಗಳ ಪ್ರಕಾರ, ದೇವಾಲಯ ಮತ್ತು ಭಗವಂತನ ಸುತ್ತ ಪ್ರದಕ್ಷಿಣೆ ಮಾಡುವುದರಿಂದ, ಧನಾತ್ಮಕ ಶಕ್ತಿಯು ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ಇದು ವ್ಯಕ್ತಿಗೆ ಶಾಂತಿ ನೆಮ್ಮದಿಯನ್ನು ನೀಡುತ್ತದೆ ಎಂಬ ನಂಬಿಕೆಯಿದೆ.
ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?
ಪ್ರತಿ ದೇವರಿಗೂ ಪ್ರದಕ್ಷಿಣೆ ಭಿನ್ನವಾಗಿರುತ್ತದೆ. ಸೂರ್ಯ ದೇವರಿಗೆ ಏಳು ಬಾರಿ ಪ್ರದಕ್ಷಿಣೆ ಮಾಡಬೇಕಾಗುತ್ತದೆ. ಅದೇ ರೀತಿ ಹನುಮಂತನಿಗೆ ಮೂರು ಬಾರಿ, ಗಣಪತಿಗೆ ನಾಲ್ಕು ಬಾರಿ, ವಿಷ್ಣು ಮತ್ತು ಅವನ ಅವತಾರ ಪುರುಷರಿಗೆ ನಾಲ್ಕು ಸುತ್ತು ಪ್ರದಕ್ಷಿಣೆ ಹಾಕಬೇಕು. ದುರ್ಗಾ ದೇವಿಗೆ ಒಂದು ಬಾರಿ ಮಾತ್ರ ಪ್ರದಕ್ಷಿಣೆಯನ್ನು ಮಾಡಬೇಕು.
Viral Video : ಹುಳುಕು ಹಲ್ಲನ್ನು ಹುಡುಕಿ ಹುಡುಕಿ ಕೀಳುತ್ತೆ ಈ ಗಿಳಿ !! ಕೆಲವೇ ನಿಮಿಷಗಳಲ್ಲಿ 9 ಕೋಟಿ ವೀಕ್ಷಣೆ ಕಂಡ…
ಇನ್ನು ಶಿವನಿಗೆ ಮಾತ್ರ ಅರ್ಧ ಪ್ರದಕ್ಷಿಣೆ (ಗರ್ಭಗುಡಿಯಿಂದ ಗೋಮುಖಿ ಅಂದರೆ ಅಭಿಷೇಕದ ನೀರು ಬರುವವರೆಗೆ ಮಾತ್ರ) ಮಾಡಬೇಕು. ಅರಳಿ ಮರಕ್ಕೆ ಏಳು ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಈ ರೀತಿಯ ನಿಯಮಕ್ಕನುಸಾರವಾಗಿ ಹಾಕುವ ಪ್ರದಕ್ಷಿಣೆ ವಿಶೇಷ ಫಲಗಳನ್ನು ನೀಡುತ್ತವೆ ಎಂದು ಪುರಾಣಗಳು ಹೇಳುತ್ತವೆ.
ಪ್ರದಕ್ಷಿಣೆ ಯಲ್ಲಿರುವ ದಕ್ಷಿಣವು ಬಲ ಭಾಗವನ್ನು ಸೂಚಿಸುತ್ತದೆ. ಹಾಗಾಗಿ ನಾವು ನಮ್ಮ ಎಡಭಾಗದಿಂದ ಬಲಭಾಗಕ್ಕೆ ಸುತ್ತಬೇಕು ಎನ್ನಲಾಗುತ್ತದೆ.
Clean Gas Burner: ಗ್ಯಾಸ್ ಬರ್ನರ್ ಕೊಳಕಾಗಿದೆಯೇ? ಈ ತಂತ್ರ ಅಳವಡಿಸಿ, ಕ್ಷಣಾರ್ಧದಲ್ಲಿ ಹೊಳಪು ಪಡೆಯಿರಿ
ಪ್ರದಕ್ಷಿಣೆ ಹಾಕುವಾಗ ಈ ಮಂತ್ರವನ್ನು ಪಠಿಸಿ.
ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ|
ತಾನಿ ಸವಾರ್ಣಿ ನಶ್ಯಂತು ಪ್ರದಕ್ಷಿಣೆ ಪದೇ – ಪದೇ||
ನಾವು ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳು ಮತ್ತು ಹಿಂದಿನ ಜನ್ಮಗಳ ಎಲ್ಲಾ ಪಾಪಗಳು ಪ್ರದಕ್ಷಿಣೆಯೊಂದಿಗೆ ನಾಶವಾಗಲಿ. ಇದರ ಜೊತೆಗೆ ದೇವರು ನನಗೆ ಸರಿಯಾದ ದಾರಿಯಲ್ಲಿ ನಡೆಯುವ ಬುದ್ಧಿ ನೀಡಲಿ ಎಂಬ ಅರ್ಥವನ್ನು ಶ್ಲೋಕ ಹೇಳುತ್ತದೆ.