Passport: ಜಗತ್ತಿನಲ್ಲಿ ಈ 3 ಜನ ಮಾತ್ರ ಪಾಸ್‌ಪೋರ್ಟ್‌ ಇಲ್ಲದೆ ಪ್ರಯಾಣ ಮಾಡಲು ಸಾಧ್ಯ!!

Passport: ವಿದೇಶ ಪ್ರಯಾಣ ಮಾಡುವ ವ್ಯಕ್ತಿಯ ಗುರುತಿನ ಚೀಟಿಯಾಗಿ ಪಾಸ್ಪೋರ್ಟ್ (Passport)ಬಳಕೆ ಮಾಡಲಾಗುತ್ತದೆ. ಅದರಲ್ಲಿಯೂ ವಿದೇಶ ಪ್ರಯಾಣಕ್ಕೆ(Foreign Trip)ಪಾಸ್ಪೋರ್ಟ್ ಕಡ್ಡಾಯವಾಗಿದೆ. ಪಾಸ್ಪೋರ್ಟ್ ನಲ್ಲಿ ಪ್ರಯಾಣಿಕನ(Passengers Name)ಹೆಸರು, ವಿಳಾಸ, ಪೌರತ್ವ, ವಯಸ್ಸು, ಸಹಿ ಸೇರಿದಂತೆ ಇತರೆ ಮಾಹಿತಿಗಳನ್ನು ಒಳಗೊಂಡಿರುತ್ತದೆ.ವಿಶ್ವದ ಈ ಮೂವರಿಗೆ ಯಾವುದೇ ಮೂಲೆಗೆ ತೆರಳಲು ಪಾಸ್ಪೋರ್ಟ್ ಅಗತ್ಯವಿಲ್ಲ. ಆ ಮೂರು ವ್ಯಕ್ತಿಗಳು ಯಾರು ಅನ್ನೋದು ನಿಮಗೆ ಗೊತ್ತಾ ?? ಇಲ್ಲಿದೆ ನೋಡಿ ಡೀಟೈಲ್ಸ್!!

 

 

ವಿಶ್ವದಲ್ಲಿ ಪಾಸ್ ಪೋರ್ಟ್ ವ್ಯವಸ್ಥೆ ಜಾರಿಗೆ ಬಂದು 102 ವರ್ಷಗಳು ಕಳೆದಿವೆ. ರಾಷ್ಟ್ರಪತಿಯಿಂದ ಹಿಡಿದು ಪ್ರಧಾನ ಮಂತ್ರಿ, ಸರ್ಕಾರಿ ಅಧಿಕಾರಿಗಳು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸುವಾಗ ಪಾಸ್‌ಪೋರ್ಟ್ ಒಳಗೊಂಡಿರಬೇಕಾಗುತ್ತದೆ. ಆದರೆ, ಬ್ರಿಟನ್ ರಾಜ, ಜಪಾನ್ ರಾಜ ಮತ್ತು ರಾಣಿ ಪಾಸ್ಪೋರ್ಟ್ ಇಲ್ಲದೇ ಪ್ರಯಾಣಿಸಬಹುದಾಗಿದೆ.

 

ಚಾರ್ಲ್ಸ್ ಬ್ರಿಟನ್ ರಾಜರಾಗುವ ಮೊದಲು ದಿವಂಗತ ರಾಣಿ ಎಲಿಜಬೆತ್ ಈ ಸೌಲಭ್ಯಗಳನ್ನು ಹೊಂದಿದ್ದರು. ಚಾರ್ಲ್ಸ್ ಬ್ರಿಟನ್ ರಾಜರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ಕಾರ್ಯದರ್ಶಿಗಳು ತಮ್ಮ ದೇಶದ ವಿದೇಶಾಂಗ ಕಚೇರಿ ಮುಖಾಂತರ ಎಲ್ಲಾ ರಾಷ್ಟ್ರಗಳಿಗೆ ವಿದೇಶ ಪ್ರಯಾಣಕ್ಕೆ ಬೇಕಾದ ದಾಖಲೆಗಳನ್ನು ರವಾನಿಸಿದರಂತೆ. ಕಿಂಗ್ ಚಾರ್ಲ್ಸ್ ಈಗ ಬ್ರಿಟಿಷ್ ರಾಜಮನೆತನದ ಮುಖ್ಯಸ್ಥರಾಗಿದ್ದು, ಅವರ ಪ್ರಯಾಣಕ್ಕೆ ಅನುಮತಿ ನೀಡಬೇಕಾಗುತ್ತದೆ. ರಾಜರ ಪ್ರಯಾಣಕ್ಕೆ ಯಾವುದೇ ಅಡೆತಡೆ ಇರಬಾರದು ಎಂಬ ಸಂದೇಶವನ್ನು ರವಾನಿಸಲಾಗಿತ್ತು.

 

ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಬ್ರಿಟನ್ ರಾಜರಿಗೆ ಮಾತ್ರ ಈ ವಿಶೇಷ ಅವಕಾಶವಿರುತ್ತದೆಯೇ ಹೊರತು ಅವರ ಪತ್ನಿಗೆ ಈ ಸೌಲಭ್ಯವಿರದು. ರಾಜನ ಪತ್ನಿ ಪ್ರಯಾಣಿಸುವಾಗ ಕಾನ್ಸುಲರ್ ಪಾಸ್‌ಪೋರ್ಟ್ ಹೊಂದಿರುತ್ತಾರೆ. ಕಾನ್ಸುಲರ್ ಪಾಸ್ಪೋರ್ಟ್ ಹೊಂದಿರುವವರಿಗೆ ವಿಶೇಷ ಗಮನ ಮತ್ತು ಗೌರವವನ್ನು ನೀಡಲಾಗುತ್ತದೆ.

 

ಪ್ರಪಂಚದ ಎಲ್ಲಾ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಮಾಡುವಾಗ ಕಾನ್ಸುಲರ್ ಪಾಸ್ಪೋರ್ಟ್ ಹೊಂದಿರುವುದು ಸಾಮಾನ್ಯ. ಕಾನ್ಸುಲರ್ ಪಾಸ್ಪೋರ್ಟ್ ಹೊಂದಿರುವ ನಾಯಕರಿಗೆ ಭದ್ರತಾ ತಪಾಸಣೆ ಮತ್ತು ಇತರ ಪರಿಶೀಲನೆಗಳಿಂದ ವಿನಾಯಿತಿ ನೀಡಲಾಗುತ್ತದೆ. ಭಾರತದಲ್ಲಿ ಈ ಸ್ಥಾನಮಾನವನ್ನು ಪ್ರಧಾನಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹೊಂದಿದ್ದಾರೆ.

 

ಇನ್ನು ಜಪಾನ್ ರಾಜ ಮತ್ತು ರಾಣಿಯೂ ಈ ವಿಶೇಷ ಸೌಲಭ್ಯ ಹೊಂದಿದ್ದು, ಸದ್ಯದ ಜಪಾನಿನ ರಾಜ ನರುಹಿಟೊ ಮತ್ತು ಪತ್ನಿ ಮಸಾಕೊ ಒವಾಟಾ ಪಾಸ್ಪೋರ್ಟ್ ಇಲ್ಲದೇ ಪ್ರಯಾಣ ಮಾಡಬಹುದು. ರಾಜನ ಸ್ಥಾನದಿಂದ ಕೆಳಗೆ ಇಳಿಯುವಂತೆ ದೇಶಕ್ಕೆ ಪ್ರಯಾಣಿಸುವಾಗ ಕಾನ್ಸುಲರ್ ಪಾಸ್‌ಪೋರ್ಟ್ ಹೊಂದುತ್ತಾರೆ.

Leave A Reply

Your email address will not be published.