Mangaluru Parking: ಮಂಗಳೂರಿನಲ್ಲಿ ಸಹೋದರರಿಬ್ಬರ ಮೇಲೆ ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ; ಮನಬಂದಂತೆ ಥಳಿತ!!! ದೂರು ದಾಖಲು

Mangaluru Parking: ಪಾರ್ಕಿಂಗ್‌ ವಿಷಯಕ್ಕೆ ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ರಾವ್‌ ಆಂಡ್‌ ರಾವ್‌ ಸರ್ಕಲ್‌ ಬಳಿ ನಡೆದಿದೆ. ಫಾರೂಕ್‌ ಹಾಗೂ ಎಂಟು ಮಂದಿಯಿಂದ ಉಲ್ಲಾಸ್‌ ರಾವ್‌, ಹರ್ಷಿತ್‌ ರಾವ್‌ ಸಹೋದರರ ಮೇಲೆ ಹಲ್ಲೆ ನಡೆಸಿದ ಆರೋಪ ನಡೆದಿದೆ.

 

ಸಹೋದರರು ಎಂಪಾಯರ್‌ ಹೋಟೆಲ್‌ಗೆ ಊಟಕ್ಕೆಂದು ಹೋಗಿದ್ದರು. ಈ ಸಂದರ್ಭದಲ್ಲಿ ಹೋಟೆಲ್‌ ಮಾಲೀಕನ ತಮ್ಮ ಹಾಗೂ ಇತರರು ಕಲ್ಲು, ಕೈಯಿಂದ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ತಲೆಗೆ, ತುಟಿಗೆ ಸಹೋದರರಿಗೆ ಗಾಯವಾಗಿದ್ದು, ಈ ಘಟನೆ ಕುರಿತು ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.