Budget 2024: ಈ ಬಾರಿಯ ಬಜೆಟ್ನಲ್ಲಿ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಭರ್ಜರಿ ಗುಡ್ನ್ಯೂಸ್!!!
ತೆರಿಗೆ ಪಾವತಿಯಲ್ಲಿ ರಿಯಾಯಿತಿ?
Budget 2024 : ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರದ ಮಧ್ಯಂತರ ಬಜೆಟ್(BUDGET 2024) ನಡೆಯಲಿದ್ದು, ಈ ವೇಳೆ ಸರ್ಕಾರವು ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಹೊಸ ಬದಲಾವಣೆಗಳನ್ನು (BUDGET 2024 EXPECTATION)ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಹಳೆಯ ಮತ್ತು ಹೊಸ ಪಿಂಚಣಿಗೆ ಸಂಬಂಧಿಸಿದ ವಿವಾದಗಳ ನಡುವೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು (NPS )ಆಕರ್ಷಕಗೊಳಿಸಲು ಸರ್ಕಾರವು ಈ ಬಜೆಟ್ನಲ್ಲಿ ಕೆಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ದಟ್ಟವಾಗಿದೆ.ಈ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎನ್ಪಿಎಸ್ನಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಬಹುದು ಎನ್ನಲಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ ಪರಿಹಾರ ಸಿಗುವ ಜೊತೆಗೆ ಖಾಸಗಿ ವಲಯದ ಉದ್ಯೋಗಿಗಳಿಗೆ ತೆರಿಗೆ ವಿನಾಯಿತಿ ನೀಡಲಿದೆ. ಇದಕ್ಕೆ ಸಂಬಂಧಿಸಿದಂತೆ, ಪಿಂಚಣಿ ನಿಧಿ ನಿಯಂತ್ರಕವು ಎನ್ಪಿಎಸ್ನಲ್ಲಿ (NPS SCHEME)ಕೆಲವು ಬದಲಾವಣೆಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಹಳೇ ಆದಾಯ ತೆರಿಗೆ ಪದ್ದತಿ ಎನ್ಪಿಎಸ್ನಲ್ಲಿ 50,000 ರೂ. ವರೆಗಿನ ಕೊಡುಗೆಗಳು ಸೆಕ್ಷನ್ 80CCD (1B) ಅಡಿಯಲ್ಲಿ ತೆರಿಗೆ ಕಡಿತ ಸಿಗುತ್ತಿದೆ. ಇದೇ ವೇಳೆ ಎನ್ಪಿಎಸ್ನ ಶ್ರೇಣಿ-1 ಖಾತೆಯಲ್ಲಿ ಲಭ್ಯವಿರುವ ಈ ವಿನಾಯಿತಿಯನ್ನು ಹೊಸ ತೆರಿಗೆ ಪದ್ಧತಿಯಲ್ಲಿ ಸೇರಿಸಬೇಕು ಎಂದು ನೌಕರರು ಒತ್ತಾಯ ಮಾಡುತ್ತಿದ್ದಾರೆ. ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿಯೂ ಜನರು ಎನ್ಪಿಎಸ್ ಕೊಡುಗೆಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬೇಕು ಎನ್ನುವುದು ನೌಕರರ ಒತ್ತಾಯವಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಹೆಚ್ಚು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ತರುವ ಸಾಧ್ಯತೆ ದಟ್ಟವಾಗಿದೆ.ಫೆಬ್ರವರಿ 1 ರಂದು ಬಜೆಟ್ ನಲ್ಲಿ ಈ ಬದಲಾವಣೆಗಳನ್ನು ಹಣಕಾಸು ಸಚಿವರು ಘೋಷಣೆ ಮಾಡಬಹುದು ಎನ್ನಲಾಗಿದೆ. ತಜ್ಞರ ಪ್ರಕಾರ, 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇದರಡಿಯಲ್ಲಿ ಕೊಡುಗೆಯನ್ನು ಹೆಚ್ಚಿಸುವ ಹಾಗೂ ಹಿಂಪಡೆಯುವಿಕೆಯ ಮೇಲೆ ತೆರಿಗೆ ಪ್ರಯೋಜನಗಳನ್ನು ಸೇರಿಸುವ ನಿರೀಕ್ಷೆಯಿದೆ.
ಬಜೆಟ್ನಲ್ಲಿ ಎನ್ಪಿಎಸ್ನಲ್ಲಿ ಬದಲಾವಣೆಗಳನ್ನು ಮಾಡಿದರೆ ಉದ್ಯೋಗಿಗಳು ಮತ್ತು ಉದ್ಯೋಗದಾತರು 10ರ ಬದಲಿಗೆ 12 ಶೇಕಡಾ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಲಿದ್ದಾರೆ. NPSನಲ್ಲಿ, 10 ಪ್ರತಿಶತದಷ್ಟು ಉದ್ಯೋಗಿಗಳ ನಿಧಿಗೆ ಉದ್ಯೋಗದಾತರ ಕೊಡುಗೆಯ ಮೇಲೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಿದೆ. ಆದರೆ, ಇಪಿಎಫ್ಒದಲ್ಲಿ ಉದ್ಯೋಗಿಗಳ ನಿಧಿಗೆ ಒಟ್ಟು ಶೇಕಡ 12ರಷ್ಟು ಕೊಡುಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.