Pratap Simha: ರಾಮ ಮಂದಿರ ಪೂಜೆಗೆ ಬಂದ ಪ್ರತಾಪ್‌ ಸಿಂಹಗೆ ಘೇರಾವ್‌; ವಾಪಸ್‌ ಬಂದ ಸಂಸದ!!!

Pratap Simha: ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ಗುದ್ದಲಿ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಪೂಜೆಗೆಂದು ಬಂದ ಸಂಸದ ಪ್ರತಾಪ್‌ ಸಿಂಹ ಅವರಿಗೆ ಕೆಲವೊಂದು ಸ್ಥಳೀಯರು ಘೇರಾವ್‌ ಹಾಕಿದ ಘಟನೆಯೊಂದು ನಡೆದಿದೆ. ದಲಿತ ವಿರೋಧಿ ಎಂದು ಕರೆದು ಪೂಜೆಗೆ ಅವಕಾಶ ಕಲ್ಪಿಸದೆ ವಾಪಸದೆ ಕಳುಹಿಸಿದ ಘಟನೆಯೊಂದು ಮೈಸೂರು ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿರುವ ಕುರಿತು ಟಿವಿ9 ವರದಿ ಮಾಡಿದೆ.

 

ಇದನ್ನೂ ಓದಿ: Ram Mandir ಉದ್ಘಾಟನೆಗೆ ಗೃಹ ಸಚಿವ ಅಮಿತ್ ಶಾ ಗೈರು!!

ರಾಮದಾಸ್‌ ಎಂಬುವರ ಜಮೀನಿನಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲ ಮೂರ್ತಿಯ ಕೃಷ್ಣ ಶಿಲೆ ಕಲ್ಲು ದೊರಕಿತ್ತು. ಈ ಜಾಗದಲ್ಲಿ ರಾಮಮಂದಿರ ಮಾಡುವುದಾಗಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದರು. ಹಾಗಾಗಿ ಇಂದು ಭೂಮಿಪೂಜೆ, ರಾಮನ ಪೂಜೆ ಏರ್ಪಡಿಸಿದ ಸಂದರ್ಭ ಅಲ್ಲಿಗೆ ಆಗಮಿಸಿದ ಪ್ರತಾಪ್‌ ಸಿಂಹರನ್ನು ಕೆಲ ಸ್ಥಳೀಯರು ಘೇರಾವು ಹಾಕಿ ಮಹಿಷಾ ದಸರಕ್ಕೆ ವಿರೋಧ ನೆಪ ಹೇಳಿ ಅಪಮಾನ ಮಾಡಿ ದಲಿತ ವಿರೋಧಿ ಎಂದು ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಬರಬಾರದು ಎಂದು ಹೇಳಿ ಅಲ್ಲಿಂದ ಆಚೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಸಂಸದ ಪ್ರತಾಪ್‌ ಸಿಂಹ ಅವರು ಇದರಿಂದ ಬೇಸರಗೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗದೆ ಹೊರ ನಡೆದರು.

Leave A Reply

Your email address will not be published.