Ram Lalla ಮೂರ್ತಿಗೆ ಕಲ್ಲು ನೀಡಿದ ರೈತನಿಗೆ ಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲ!?

Ram Mandir Inauguration : ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ರಾಮ ಮಂದಿರದ (Ram Mandir inauguration)ಉದ್ಘಾಟನಾ ಕಾರ್ಯಕ್ರಮದ ಸಿದ್ದತೆ ಭರದಿಂದ ಸಾಗುತ್ತಿದ್ದು, ಈ ಅಮೋಘ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ.

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮಲಲ್ಲನ ವಿಗ್ರಹವನ್ನು ಕೆತ್ತಲು ಮೈಸೂರು ಸಮೀಪದ ಗುಜ್ಜೇಗೌಡನಪುರ ಗ್ರಾಮದ ತಮ್ಮ ಜಮೀನಿನಲ್ಲಿ ಸಿಕ್ಕ ಕಲ್ಲು ಬಳಸಿದ ಹಿನ್ನೆಲೆ ದಲಿತ ರೈತ ರಾಮದಾಸ್ ಸಂತಸ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಆಸ್ತಿಯ ಭಾಗವನ್ನು ದಾನ ಮಾಡಲು ಕೂಡ ತೀರ್ಮಾನ ಕೈಗೊಂಡಿದ್ದಾರಂತೆ.

ಇದನ್ನೂ ಓದಿ: Bigg Boss ಸ್ಪರ್ಧಿ ಡ್ರೋನ್‌ ಪ್ರತಾಪ್‌ಗೆ ಮತ್ತೊಂದು ಸಂಕಷ್ಟ; ಫಿನಾಲೆಗೆ ಇರಲ್ವ ಪ್ರಬಲ ಸ್ಪರ್ಧಿ!!!

ಗುಜ್ಜೇಗೌಡನಪುರದ ಜನರಿಗೆ ತಮ್ಮ ಗ್ರಾಮದಿಂದ ಕಲ್ಲು ಬಂಡೆಯಿಂದ ವಿಗ್ರಹವನ್ನು ಕೆತ್ತಿರುವುದು ಸಂತಸ ತಂದಿದೆ ಎಂದು ರಾಮದಾಸ್ ಹೇಳಿದ್ದಾರೆ. ಜನವರಿ 22ರಂದು ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ರಾಮದಾಸ್ ಅವರು ದಾನ ಮಾಡಲಿರುವ ಜಮೀನಿನಲ್ಲಿ ರಾಮಭಕ್ತರು ಹಾಗೂ ಗ್ರಾಮಸ್ಥರು ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಕುರಿತು ಜಿಟಿ ದೇವೇಗೌಡ ಮಾಹಿತಿ ನೀಡಿದ್ದರು. ರಾಮದಾಸ್ ಅವರ ಜಮೀನಿನಲ್ಲಿ ಅಗೆದಿರುವ ಕಲ್ಲಿನ ಬಂಡೆಯನ್ನು ಬಳಸಿ ನಿರ್ಮಿಸುವ ದೇವಾಲಯಕ್ಕಾಗಿ ರಾಮನ ವಿಗ್ರಹವನ್ನು ಕೆತ್ತಲು ಗ್ರಾಮಸ್ಥರೊಂದಿಗೆ ಯೋಗಿರಾಜ್ ಅವರನ್ನು ಸಂಪರ್ಕಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ತಮ್ಮ 2.14 ಎಕರೆ ಭೂಮಿಯಲ್ಲಿನ ಬಂಡೆಗಳನ್ನು ಕೃಷಿಗಾಗಿ ತೆರವುಗೊಳಿಸಲು ಇಚ್ಚಿಸಿದ್ದೆ ಆದರೆ, ಉತ್ಖನನ ಮಾಡಿದ ಬಂಡೆಗಳು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅವಶ್ಯಕತೆಗೆ ಸರಿಹೊಂದುತ್ತವೆ. ಹೀಗಾಗಿ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿದ್ದಾರೆ ಎಂದು ರೈತ ರಾಮದಾಸ್ ಹೇಳಿದ್ದಾರೆ.

Leave A Reply

Your email address will not be published.