Aadhaar Verification Mandatory Order: ಯಾವುದೇ ಆಸ್ತಿ, ದಾಖಲೆ ನೋಂದಣಿಗೆ ಇನ್ನು ಮುಂದೆ ಈ ದಾಖಲೆ ಕಡ್ಡಾಯ ಪರಿಶೀಲನೆ- ಆದೇಶ

Aadhaar Verification Mandatory Order : ಯಾವುದೇ ಮಾರಾಟ ಇಲ್ಲವೇ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮೊದಲು ಆ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಯ ಆಧಾರ್ ಅಧಿಕೃತತೆಯನ್ನು ಪರಿಶೀಲನೆ (Aadhaar Verification Mandatory Order)ನಡೆಸಬೇಕೆಂದು ಹೈಕೋರ್ಟ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾನಿರ್ದೇಶಕರಿಗೆ ಆದೇಶ ಹೊರಡಿಸಿದೆ.

ದಾಖಲೆ ನಕಲು ಮಾಡಿ ಭೂಮಿ ಮಾರಾಟ ಮಾಡಿದ್ದಾರೆಂದು ಆರೋಪಿಸಲಾದ ರಮೇಶ್ ಎಂಬ ವ್ಯಕ್ತಿ ನೋಂದಣಿ ಸಂದರ್ಭ ಆಧಾರ್ ದಾಖಲೆ ಸಲ್ಲಿಸಿದ್ದು, ಅದನ್ನು ಅಧಿಕೃತ ದಾಖಲೆ ಅಥವಾ ಗುರುತಿನ ಚೀಟಿ ಎಂದು ಪರಿಗಣಿಸಿ ಉಪ ನೋಂದಣಾಧಿಕಾರಿ ನೋಂದಣಿ ಮಾಡಿದ್ದಾರೆ. ಆದರೆ, ಆಧಾರ್ ನೈಜತೆ ಪರಿಶೀಲಿಸದೇ ಇರುವುದರಿಂದ ವ್ಯಾಜ್ಯಕ್ಕೆ ಕಾರಣವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣ ತನಿಖೆ ನಡೆಸಿದ ಬಳಿಕ ಹೈಕೋರ್ಟ್ ಆಧಾರ್ ಕಾರ್ಡ್ ಅಧಿಕೃತತೆಯನ್ನ ಪರಿಶೀಲಿಸಿದ ಬಳಿಕವೇ ನೋಂದಣಿ ಮಾಡಲು ಸೂಚಿಸಿದೆ.

”ಆಧಾರ್ ಕಾಯಿದೆ- 2016ರ ಅನುಸಾರ ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಪ್ರೇಷನ್ ಯುಐಎಡಿಐ ಜೊತೆಗೆ ನೋಂದಾಯಿ ಸಿಕೊಳ್ಳಬೇಕು.ಇದಾದ ಬಳಿಕ ಯಾವುದೇ ವ್ಯಕ್ತಿ ನಿವೇಶನ ಅಥವಾ ಮನೆ ಮಾರಾಟ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು ಅವರು ನೀಡಿರುವ ಆಧಾರ್ ನೈಜತೆಯನ್ನು ಪರಿಶೀಲಿಸಬೇಕು. ಈ ಪರಿಶೀಲನೆ ನಡೆಸಿದ ಬಳಿಕವೇ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಬೇಕು” ಎಂದು ನ್ಯಾಯಪೀಠ ಆದೇಶ ನೀಡಿದೆ.

Leave A Reply

Your email address will not be published.