Ayodhya Ram Mandir: ಜ.22 ರಂದು ಮಗು ಜನಿಸಲು ಗರ್ಭಿಣಿಯರ ಒತ್ತಾಯ! ವೈದ್ಯರು ಕಂಗಾಲು, ಇಲ್ಲಿದೆ ವಿವರ!

Ayodhya Ram Mandir: ಅಯೋಧ್ಯೆಯಲ್ಲಿ ರಾಮ ಮಂದಿರದ (Ayodhya Ram Mandir)ಉದ್ಘಾಟನೆ ಜನವರಿ 22ರಂದು ನಡೆಯಲಿದ್ದು, ಈ ಅಭೂತಪರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈ ನಡುವೆ, ಈ ದಿನದಂದು ತಾಯ್ತನ ಆನಂದಿಸಲು ಎದುರು ನೋಡುತ್ತಿರುವ ಗರ್ಭಿಣಿಯರು, ತಮಗೆ ಜನಿಸುವ ಮಗು ಜನವರಿ 22ರಂದೇ ಆಗಬೇಕು ಎಂದು ವೈದ್ಯರ ಬಳಿ ದುಂಬಾಲು ಬೀಳುತ್ತಿದ್ದಾರೆ.

ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಇಡೀ ದೇಶವೇ ಶ್ರೀರಾಮನ ದರ್ಶನ ಪಡೆಯಲು ಎದುರುನೋಡುತ್ತಿದೆ. ಈ ಪೈಕಿ ಅನೇಕ ಗರ್ಭಿಣಿಯರು (Pregnancy)ತಮಗೆ ಜನಿಸುವ ಮಗುವಿನ ಜನನದ(Birth)ದಿನ ಜ.22ರ ಹಿಂದೆ-ಮುಂದೆ ಇದ್ದರೂ ಅದನ್ನು ಲೆಕ್ಕಿಸದೇ ಬಲವಂತವಾಗಿಯಾದರೂ ಪರವಾಗಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ವಿಗ್ರಹ ಸಮಾರಂಭದ ದಿನವೇ ನಮಗೆ ಮಗು ಜನಿಸುವಂತೆ ಹೆರಿಗೆ ಮಾಡಿ ಎಂದು ಪಟ್ಟು ಹಿಡಿದಿದ್ದಾರಂತೆ.

ಆದರೆ, ಹಲವಾರು ಆಸ್ಪತ್ರೆಯಲ್ಲಿ ಇರುವ ಗರ್ಭಿಣಿಯರು ಇದೇ ಬಯಕೆಯನ್ನು ವೈದರ ಮುಂದೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸುತ್ತಿರುವ ವೈದ್ಯರು, ಗರ್ಭಿಣಿಯರಿಗೆ ನಿಗದಿಪಡಿಸಿರುವ ಡೆಲಿವರಿ ಡೇಟ್‌ಗೂ ಮೊದಲೇ ಇಲ್ಲವೇ ಅವಧಿ ಮೀರಿದರೆ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಭಾರೀ ತೊಂದರೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.