Minister Madhu Bangarappa: ರಾಮ ಮಂದಿರ ಉದ್ಘಾಟನೆ ದಿನ ಶಾಲಾ ಕಾಲೇಜುಗಳಿಗೆ ರಜೆ; ಶಿಕ್ಷಣ ಸಚಿವರು ಹೇಳಿದ್ದೇನು?

Share the Article

Holiday (Madhu Bangarappa): ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.

“ನಾನು ಈ ವಿಚಾರದಲ್ಲಿ ಯಾವುದೇ ವಿವಾದವನ್ನು ಮಾಡಲು ಹೋಗುವುದಿಲ್ಲ. ನಾನು ಅಪ್ಪಟ್ಟ ರಾಮಭಕ್ತ. ರಾಮನ ನಡವಳಿಕೆ ತಿಳಿದವನು. ಆದರೆ ಬಿಜೆಪಿಯವರು ರಾಮನ ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಶ್ರೀರಾಮನ ವಿಚಾರಲ್ಲಿ ರಾಜಕೀಯ ಮಾಡುವ ಬುದ್ಧಿ ನಮಗೆ ಕೊಟ್ಟಿಲ್ಲ” ಎಂದು ಬಿಜೆಪಿ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ರಜೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಹಾಗೆನೇ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟದ್ದು, ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

Leave A Reply