Cleaning Tips: ಗ್ಯಾಸ್ ಬರ್ನರ್ ಕೊಳಕಾಗಿದ್ಯಾ; ಈ ಟಿಪ್ಸ್ ಫಾಲೋ ಮಾಡಿ ಫಳ ಫಳ ಹೊಳೆಯುವುದನ್ನ ಗಮನಿಸಿ!!

Cleaning Tips: ನಿರಂತರ ಅಡುಗೆಯ ಸಮಯದಲ್ಲಿ, ಗ್ಯಾಸ್ ಓವನ್ ಬರ್ನರ್ (Gas Burner)ಜ್ವಾಲೆಯು ಹಲವಾರು ಬಾರಿ ಕಡಿಮೆಯಾದಾಗ, ಅಡುಗೆ ಮಾಡುವ ಸಮಯದಲ್ಲಿ ಹೆಚ್ಚಿನ ಕಾಲ ತೆಗೆದುಕೊಳ್ಳುತ್ತದೆ. ಇಲ್ಲಿ ನಾವು ಕೆಲವೊಂದು ಟಿಪ್ಸ್‌ (Cleaning Hack)ನೀಡಿದ್ದು, ಈ ಮೂಲಕ ನೀವು ಈ ಸಮಸ್ಯೆಯನ್ನು ನೀವೇ ಕ್ಷಣಮಾತ್ರದಲ್ಲಿ ಹೋಗಲಾಡಿಸಬಹುದು.

ಸ್ಟವ್ ಬರ್ನರ್ (Stove Burner)ಸ್ವಚ್ಛಗೊಳಿಸಲು ಉಪ್ಪನ್ನು ಬಳಸಬಹುದು. ಸೋಡಾ ನೀರು ಮತ್ತು ಉಪ್ಪು ಬಳಸುವುದರಿಂದ ಕೊಳೆಯನ್ನು ಸುಲಭವಾಗಿ ತೆಗೆಯಬಹುದು. ಬಿಸಿನೀರಿನಲ್ಲಿ ಅದ್ದಿದ ಸ್ಟೀಲ್ ಸ್ಕ್ರಬ್ ಮೂಲಕ ಗ್ಯಾಸ್ ಸ್ಟವ್ ಮತ್ತು ಬರ್ನರ್ಗಳನ್ನು ಚೆನ್ನಾಗಿ ಉಜ್ಜಿಕೊಂಡು ಮೈಕ್ರೋಫೈಬರ್ ಬಟ್ಟೆಯಿಂದ ಗ್ಯಾಸ್ ಸ್ಟವ್ ಮತ್ತು ಬರ್ನರ್ಗಳನ್ನು ಒರೆಸಬೇಕು. ಬರ್ನರ್ ಸಂಪೂರ್ಣವಾಗಿ ಒಣಗಲು ಬಿಡಬೇಕು.

ಗ್ಯಾಸ್ ಬರ್ನರ್ ಅನ್ನು ಸ್ವಚ್ಛಗೊಳಿಸುವ ಮುನ್ನ ಸ್ಟೌವ್ನಿಂದ ಸಂಪರ್ಕ ಕಡಿತಗೊಳಿಸಬೇಕು. ಇದಾದ ಬಳಿಕ ಸಾಧ್ಯವಾದಷ್ಟು ಸಂಗ್ರಹವಾದ ಕೊಳೆಯನ್ನು ತೆಗೆದುಹಾಕಲು ಪ್ರಯತ್ನಿಸಿ. ಗ್ಯಾಸ್ ಸ್ಟೌವ್ನಿಂದ ಕೊಳಕು ತೆಗೆಯಲು ಮತ್ತು ಬರ್ನರ್ಗಳನ್ನು ಸ್ವಚ್ಛಗೊಳಿಸಲು ಸ್ಟೀಲ್ ಸ್ಕ್ರಬ್ಬರ್ ಅನ್ನು ಬಳಕೆ ಮಾಡಿಕೊಳ್ಳಿ. ಇದಕ್ಕಾಗಿ ಮೊದಲು ಒಂದು ಬೌಲ್ನಲ್ಲಿ ಉಪ್ಪು ಮತ್ತು ಸೋಡಾ ನೀರಿನ್ನು ಮಿಶ್ರಣ ಮಾಡಿಕೊಂಡು ಈ ಗಟ್ಟಿ ಪೇಸ್ಟ್ ಅನ್ನು ಬರ್ನರ್ನ ಮೇಲೆ ಚೆನ್ನಾಗಿ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲದವರೆಗೆ ಬಿಡಬೇಕು. ಇದಾದ ಬಳಿಕ ಮತ್ತೊಂದು ಬಟ್ಟಲಿಗೆ ಬೆಚ್ಚಗಿನ ನೀರು ಮತ್ತು ಡಿಶ್ ಸೋಪ್ ಸೇರಿಸಿಕೊಂಡು ಮಿಶ್ರಣ ಮಾಡಿಕೊಳ್ಳಿ.

 ನಿಂಬೆ ಸಿಪ್ಪೆ ಮತ್ತು ಉಪ್ಪು ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ಹಿತ್ತಾಳೆಯಿಂದ ಮಾಡಲ್ಪಟ್ಟ ಗ್ಯಾಸ್ ಬರ್ನರ್ ಅನ್ನು ಕೂಡ ನಿಂಬೆಯಿಂದ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಒಂದು ಕಪ್ ಬಿಸಿನೀರನ್ನು ತೆಗೆದುಕೊಂಡು ಅದರಲ್ಲಿ 2-3 ನಿಂಬೆಹಣ್ಣಿನ ಸಿಪ್ಪೆ ಮತ್ತು ಉಪ್ಪನ್ನು ಮಿಕ್ಸ್ ಮಾಡಿಕೊಳ್ಳಿ. ಅದರಲ್ಲಿ ಡಿಶ್ ಸೋಪ್ ಮಿಕ್ಸ್ ಮಾಡಿ ಗ್ಯಾಸ್ ಬರ್ನರ್ ಗಳನ್ನು 30 ನಿಮಿಷಗಳವರೆಗೆ ಬಿಡಿ .ಬರ್ನರ್ ಅನ್ನು ಈ ನೀರಿನಿಂದ ಉಜ್ಜಿ ಸ್ವಚ್ಛಗೊಳಿಸಬೇಕು.

Leave A Reply

Your email address will not be published.