Private School Holiday: ಜನವರಿ 22 ರಂದು ಕರ್ನಾಟಕದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ !?; ಖಾಸಗಿ ಶಾಲಾ ಕಾಲೇಜುಗಳಿಂದ ಮಹತ್ವದ ತೀರ್ಮಾನ!!

Private School Holiday: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಹಿನ್ನೆಲೆ ಕರ್ನಾಟಕದ ಶಾಲೆಗಳಿಗೂ(Karnataka Schools)ರಜೆ(School Holiday)ಘೋಷಣೆ ಆಗಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಪೋಷಕರನ್ನು ಕಾಡುತ್ತಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಅಂದು ಮಕ್ಕಳು ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆಗೆ ಸಾಕ್ಷಿಯಾಗಬೇಕು ಎಂದು ಕೆಲವು ಸಂಘಟನೆಗಳು ಆಗ್ರಹಿಸಿವೆ. ಶ್ರೀರಾಮ ಸೇನೆ ಮತ್ತು ಹಲವರು ಹಿಂದೂ ಸಂಘಟನೆಗಳು ರಾಜ್ಯಪಾಲರಿಗೆ ಈ ಕುರಿತು ಮನವಿ ಸಲ್ಲಿಸಿವೆ.

ಇದನ್ನು ಓದಿ: Astro Tips: ಈ 5 ಹೂವುಗಳಿಂದ ಧನ ಯೋಗ! ಅದೃಷ್ಟವನ್ನು ಸುಲಭವಾಗಿ ಪಡೆಯಬಹುದು!

ಖಾಸಗಿ ಶಾಲೆಗಳಿಗೆ (Private School Holiday)ವಿದ್ಯಾರ್ಥಿಗಳ ಪೋಷಕರು ಜನವರಿ 22ರಂದು ರಜೆಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದು, ಈ ನಿಟ್ಟಿನಲ್ಲಿ ಖಾಸಗಿ ಶಾಲೆಗಳ ಸಂಘಟನೆಗಳು ಪ್ರಮುಖ ನಿರ್ಧಾರ ಕೈಗೊಂಡಿವೆ. ಜನವರಿ 22ರಂದು ಶಾಲೆಯಲ್ಲಿಯೇ ಒಂದು ಗಂಟೆಗಳ ಕಾಲ ರಾಮ ಮಂದಿರದಲ್ಲಿ ಶ್ರಿ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯನ್ನು ನೇರ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ ಎನ್ನಲಾಗಿದೆ. ಈ ಕುರಿತಂತೆ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಖಾಸಗಿ ಶಾಲಾ ಸಂಘಟನೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಜನವರಿ 22ರಂದು ಸರ್ಕಾರ ರಜೆ ಘೋಷಿಸಿದ್ದರೆ ಉತ್ತಮವೆಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಪೋಷಕರ ಬೇಡಿಕೆ ಅನುಸಾರವಾಗಿ ಆಯಾ ಶಾಲಾ ಆಡಳಿತ ಮಂಡಳಿ ರಜೆ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಿ ಎಂದು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.