Rape Case: ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ಕೇಸ್ ಗೆ ರೋಚಕ ಟ್ವಿಸ್ಟ್;ಅಣ್ಣನಿಂದಲೇ ತಂಗಿಯ ರೇಪ್: ಆರೋಪಿ ಬಂಧನ!!

Rape Case: ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ 10 ನೆಯ ವಿದ್ಯಾರ್ಥಿನಿಯ ಮೇಲೆ ಆಕೆಯ ಅಣ್ಣನೇ ದೌರ್ಜನ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ. 10 ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕಲಬುರ್ಗಿಯಲ್ಲಿ ಜರುಗಿದೆ.

 

ವಿದ್ಯಾರ್ಥಿನಿ ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಶಾಲೆಗೆ ರಜೆ ಇದ್ದಾಗ ಆಕೆ ಮನೆಗೆ ಬರುತ್ತಿದ್ದ ಸಂದರ್ಭ ವಿದ್ಯಾರ್ಥಿನಿಯ ದೊಡ್ಡಪ್ಪನ ಮಗ ರಾತ್ರಿ ಹೊತ್ತು ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಲ್ಯೆಂಗಿಕ ದೌರ್ಜನ್ಯ ಎಸಗುತ್ತಿದ್ದ. ಹೀಗೆ ಕಳೆದ ಮಾರ್ಚ್ ನಿಂದ ವಿದ್ಯಾರ್ಥಿನಿ ಹಲವು ಬಾರಿ ತನ್ನ ಅಣ್ಣನಿಂದ ಅತ್ಯಾಚಾರಕ್ಕೆ ಒಳಗಾಗಿದ್ದು, ಈ ವಿಚಾರವನ್ನು ಬಾಯಿಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಆಕೆ ಅತ್ಯಾಚಾರ ವಿಚಾರವನ್ನು ಯಾರ ಮುಂದೆಯೂ ಬಾಯಿ ಬಿಡದೆ ಮುಚ್ಚಿಟ್ಟಿದ್ದಳು.

ಇದನ್ನೂ ಓದಿ: Belthangady: ಕರ್ತವ್ಯದ ಸಮಯದಲ್ಲಿ ತಹಶೀಲ್ದಾರ್‌ ಮೇಲೆ ಹಲ್ಲೆ ಯತ್ನ; ಪ್ರಕರಣ ದಾಖಲು!!!

ಮತ್ತೊಂದೆಡೆ ವಿದ್ಯಾರ್ಥಿನಿ ದಪ್ಪ ಇರುವ ಹಿನ್ನೆಲೆ ಕುಟುಂಬಸ್ಥರಿಗೆ ಆಕೆಯ ದೇಹದಲ್ಲಿ ಆದ ಬದಲಾವಣೆ ಗೊತ್ತಾಗಿಲ್ಲ ಎನ್ನಲಾಗಿದೆ. ಡಿಸೆಂಬರ್‌ 24 ರಂದು ಶಾಲೆಯಲ್ಲಿ ಆಕೆಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಹೀಗಾಗಿ ಶಿಕ್ಷಕರಿಗೆ ಹೇಳಿ ಆಕೆ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ನಂತರ ಸಂಬಂಧಿಕರು‌ ವಿದ್ಯಾರ್ಥಿನಿ ಕುಟಂಬದವರಿಗೆ ಮಾಹಿತಿ ನೀಡಿದ್ದು, ಇದಾದ ಬಳಿಕ‌ ಆಕೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ದಾಖಲು ಆಗುತ್ತಿದ್ದಂತೆ ವಿಧ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆ. ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ಕೊಟ್ಟಿರುವ ವಿಚಾರ ಗೊತ್ತಾಗ್ತಿದ್ದಂತೆ ಕುಟುಂಬಸ್ಥರು ಶಾಕ್‌ ಆಗಿದ್ದಾರೆ. ಆಸ್ಪತ್ರೆಯವರು ಮಹಾರಾಷ್ಟ್ರದ ಪೊಲೀಸರಿಗೆ ಮಾಹಿತಿ ನೀಡಿದ್ದು,ನಿಂಬರ್ಗಾ ಪೊಲೀಸರು ವಿದ್ಯಾರ್ಥಿನಿಯ ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಈ ವೇಳೆ ಅಣ್ಣನಿಂದ ದೌರ್ಜನ್ಯವಾಗಿದ್ದು ಮುನ್ನಲೆಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.