Puttur : ಖ್ಯಾತ ಗಾಯಕಿ ‘ಸೂರ್ಯ ಗಾಯತ್ರಿ’ ಪ್ರಪ್ರಥಮ ಬಾರಿ ನಾಳೆ (ಜ.20) ಪುತ್ತೂರಿಗೆ

Share the Article

Puttur: ಸೂರ್ಯಗಾಯತ್ರಿ ಹಾಡಿರುವ ರಾಮ ನಾಮದ ಹಾಡಿಗೆ ಖುದ್ದು ಪ್ರಧಾನಿ ಮೋದಿ ಕೆಲ ದಿನದ ಹಿಂದೆ ಟ್ವಿಟರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ, ಪುತ್ತೂರು ನಗರದ ನಟ್ಟೋಜ ಫೌಂಡೇಶನ್‌ ಟ್ರಸ್ಟ್‌ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ಹಿನ್ನಲೆ ಖ್ಯಾತ ಗಾಯಕಿ ‘ಸೂರ್ಯ ಗಾಯತ್ರಿ’ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ದಶಾಂಬಿಕೋತ್ಸವದ ಪ್ರಯುಕ್ತ ಖ್ಯಾತ ಯುವಗಾಯಕಿ (Soorya Gayathri) ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಜ.20ರಂದು ಆಯೋಜನೆ ಮಾಡಲಾಗಿದೆ. ಅಂಬಿಕಾ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಸಂಜೆ 5.30ರಿಂದ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.

 

Leave A Reply