Ram Mandir: ಅಯೋಧ್ಯಾ ರಾಮ ಲಲ್ಲಾ ವಿಗ್ರಹದ ಕುರಿತು ಮಾಜಿ ಮುಖ್ಯಮಂತ್ರಿಯಿಂದ ಶಾಕಿಂಗ್ ಹೇಳಿಕೆ!!

Share the Article

Ram Mandir: ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ನಡುವೆ, ರಾಮ ಮಂದಿರದಲ್ಲಿ (Ram Mandir) ಪ್ರತಿಷ್ಠಾಪಿಸಲಿರುವ ರಾಮಲಲ್ಲಾ ವಿಗ್ರಹದ (Ram Lalla Idol) ಕುರಿತು ಮಾಜಿ ಮುಖ್ಯಮಂತ್ರಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

 

ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ (Pran Pratishta) ನಡೆಯಲಿರುವ ರಾಮ ಲಲ್ಲಾ ವಿಗ್ರಹವನ್ನು ಗರ್ಭ ಗುಡಿಯ ಪೀಠದಲ್ಲಿ ಗುರುವಾರ ಇರಿಸಲಾಗಿದೆ. ಈ ರಾಮ ಲಲ್ಲಾ ವಿಗ್ರಹದ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ನಡುವೆ, ಮಧ್ಯ ಪ್ರದೇಶದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (Digvijay Singh) ರಾಮ ಲಲ್ಲಾ ವಿಗ್ರಹ ಬಾಲಕ ರಾಮನಂತೆ ಕಾಣುತ್ತಿಲ್ಲ (Child Ram) ಎಂದು ಹೇಳಿದ್ದಾರೆ.

 

ದಿಗ್ವಿಜಯ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ನಮ್ಮ ಗುರುಗಳಾದ ದ್ವಾರಕಾ ಮತ್ತು ಜೋಶಿಮಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದಜಿ ಮಹಾರಾಜ್ ರವರು, ರಾಮ ಜನ್ಮಭೂಮಿ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹವು ಬಾಲಕ ರಾಮನಾಗಿರಬೇಕು ಜೊತೆಗೆ ತಾಯಿ ಕೌಶಲ್ಯಾ ಮಡಿಲಲ್ಲಿ ಇರುವಂತಿರಬೇಕು ಎಂದು ಸಲಹೆ ನೀಡಿದ್ದರು. ಆದರೆ, ಪ್ರತಿಷ್ಠಾಪನೆ ಮಾಡಲಾಗುತ್ತಿರುವ ವಿಗ್ರಹವು ಬಾಲಕ ರಾಮನ ರೀತಿಯಲ್ಲಿ ಕಂಡುಬರುತ್ತಿಲ್ಲ ಎಂದು ಹೇಳಿದ್ದಾರೆ. ಸದ್ಯ, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರು ಬಾಲಕ ರಾಮನನ್ನು ಈ ವಿಗ್ರಹ ಹೋಲುತ್ತಿಲ್ಲ ಎಂದು ಆರೋಪಿಸಿದ್ದಾರೆ.

Leave A Reply