Ayodhya Ram Mandir: ಜನವರಿ 22 ರಂದು ಮದ್ಯ- ಮಾಂಸ ಮುಟ್ಟದಂತೆ ರಾಷ್ಟ್ರದ ಜನತೆಗೆ ಕರೆ!!

Ayodhya Ram Mandir: ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ (Prana Prathista)ನೆರವೇರಲಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದೆ.

 

ಈ ಬಾಲ ರಾಮನ ಪ್ರತಿಮೆಯನ್ನು ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತಿಸಿದ್ದಾರೆ. . ನೇಪಾಳದ ಜನಕ್‌ಪುರದಿಂದ 500ಕ್ಕೂ ಹೆಚ್ಚು ಅಲಂಕೃತ ಉಡುಗೊರೆ ಬುಟ್ಟಿಗಳನ್ನು ಅಯೋಧ್ಯೆಗೆ ರವಾನಿಸಲಾಗಿದೆ. ಜನವರಿ 22ರಂದು ಮದ್ಯ-ಮಾಂಸ ಮುಟ್ಟದಂತೆ ಈ ರಾಷ್ಟ್ರದಿಂದ ಜನತೆಗೆ ಕರೆ ಕೊಡಲಾಗಿದೆ. ಈ ಭವ್ಯ ಕಾರ್ಯಕ್ರಮದ ಜೊತೆಗೆ ನೇಪಾಳಕ್ಕೂ (Nepal) ದೊಡ್ಡ ಸಂಬಂಧ ಹೊಂದಿದೆ.

 

ಜನಕಪುರವನ್ನು ಸೀತೆಯ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಜನವರಿ 22 ರಂದು ಆರತಿ ಮತ್ತು ವಿಶೇಷ ಪೂಜೆಯನ್ನು ಮಾಡುವಂತೆ ನೇಪಾಳ ತನ್ನ ನಾಗರಿಕರಿಗೆ ಕರೆ ನೀಡಿದೆ. ಈ ದಿನದಂದು ಮದ್ಯ ಮತ್ತು ಮಾಂಸಾಹಾರ ಮಾರಾಟವನ್ನು ನಿಲ್ಲಿಸಲಾಗುತ್ತದೆ.

 

ಜನವರಿ 22 ರಂದು ಪ್ರತಿ ಮನೆ ಮತ್ತು ರಾಮ-ಜಾನಕಿ ದೇವಸ್ಥಾನದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಪ್ರಾಣ ಪ್ರತಿಷ್ಠಾ ಉತ್ಸವದಲ್ಲಿ ಎಲ್ಲಾ ನಿವಾಸಿಗಳು ಭಾಗವಹಿಸಲು ಜನಕಪುರ ಉಪ ಮಹಾನಗರ ಪಾಲಿಕೆ ಕರೆ ನೀಡಿದೆ. ಇದರ ಜೊತೆಗೆ ಜನವರಿ 22 ರಂದು ಬಿರ್‌ಗುಂಜ್ ಮೆಟ್ರೋಪಾಲಿಟನ್ ಸಿಟಿಯು ಮಾಂಸಾಹಾರಿ ಆಹಾರ ಮತ್ತು ಮದ್ಯದ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವುದಾಗಿ ಘೋಷಿಸಲಾಗಿದೆ.

 

Leave A Reply

Your email address will not be published.