Curd-sugar: ಮೊಸರಿಗೆ ಸಕ್ಕರೆ ಹಾಕಿ ತಿಂದ್ರೆ ಇಷ್ಟೆಲ್ಲಾ ಪ್ರಯೋಜನ ಇದೆ ಗುರೂ… !! ಗೊತ್ತಾದ್ರೆ ನೀವಂತೂ ಪ್ರತೀ ದಿನ ಬಿಡದೆ ತಿಂತೀರಾ
Curd-sugar: ಆಹಾರ ಪದಾರ್ಥಗಳು ಅಂದರೇನೇ ಹಾಗೆ. ಕೆಲವು ರುಚಿಸುತ್ತವೆ, ಆದ್ರೆ ದೇಹಕ್ಕೆ ಒಳ್ಳೆಯದಲ್ಲ, ಕೆಲವು ರುಚಿಸುವುದಿಲ್ಲ ಆದರೆ ದೇಹಕ್ಕೆ ತುಂಬಾ ಒಳ್ಳೆಯದು. ಇನ್ನು ಕೆಲವು ನಾಲಿಗೆಗೂ ಹಿತ, ದೇಹಕ್ಕೂ ಹಿತ. ಅಂತದ್ದರಲ್ಲಿ ಈ ಮೊಸರು-ಸಕ್ಕರೆ(Curd-sugar) ಕೂಡ ಒಂದು.
ಹೌದು, ಮನೆಯಲ್ಲಾಗಲಿ, ಸಮಾರಂಭಗಳಲ್ಲಾಗಲಿ ಅಥವಾ ಎಲ್ಲಾ ಹೋಟೆಲ್ ಗಳಲ್ಲೂ ಊಟದ ನಂತರ ಮೊಸರು-ಸಕ್ಕರೆ ಕೊಡುವುದು ಗೊತ್ತಿದೆ. ಇದೆರಡನ್ನು ಮಿಕ್ಸ್ ಮಾಡಿ ಸವಿದರೆ ಆಹಾ… ಅದೆಂತ ರುಚಿ. ಆದರೆ ಕೆಲವರು ಇದನ್ನು ತಿಂದರೆ ಶೀತ ಆಗುತ್ತೆ, ಕೆಮ್ಮು ಬರುತ್ತೆ, ಗಂಟಲು ಕೆರೆಯುತ್ತೆ ಎಂದೆಲ್ಲಾ ಅಲ್ಲಗಳೆಯುತ್ತಾರೆ. ತಿನ್ನೋರಿಗೂ ಅಡ್ಡಗಾಲು ಹಾಕುತ್ತಾರೆ. ಆದರೆ ಮೊಸರಿಗೆ ಸಕ್ಕರೆ ಹಾಕಿ ತಿಂದ್ರೆ ಎಷ್ಟೆಲ್ಲಾ ಲಾಭ ಉಂಟು ಗೊತ್ತಾ?! ಇದನ್ನೇನಾದ್ರೂ ನೀವು ತಿಳಿದರೆ ಪ್ರತೀ ದಿನ ತಿಂತೀರಾ !!
ಮೊಸರಿಗೆ ಸಕ್ಕರೆ ಸಾಕಿ ತಿನ್ನೋದ್ರಿಂದ ಏನೆಲ್ಲಾ ಲಾಭ ಉಂಟು?
• ಶೀತ, ನೆಗಡಿ, ಕೆಮ್ಮು, ಕಫ ಕಡಿಮೆಯಾಗುತ್ತೆ
• ಅಸಿಡಿಟಿ, ಹೊಟ್ಟೆ ಉರಿ ಕಡಿಮೆಯಾಗುತ್ತೆ
• ದೇಹವನ್ನು ಸದಾ ತಂಪಾಗಿರಿಸುತ್ತೆ
• ಮೆದುಳಿನ ಹಾಗೂ ದೇಹದ ಶಕ್ತಿ ಹೆಚ್ಚಿಸುತ್ತೆ