Home Karnataka State Politics Updates Budget 2024: ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರದಿಂದ ಮಾಸ್ಟರ್ ಪ್ಲಾನ್; ಕೈಗೆಟಕುವ ದರದಲ್ಲಿ ವಸತಿ ಯೋಜನೆಗೆ...

Budget 2024: ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರದಿಂದ ಮಾಸ್ಟರ್ ಪ್ಲಾನ್; ಕೈಗೆಟಕುವ ದರದಲ್ಲಿ ವಸತಿ ಯೋಜನೆಗೆ ಚಿಂತನೆ!!

Budget 2024

Hindu neighbor gifts plot of land

Hindu neighbour gifts land to Muslim journalist

Budget 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ನಡುವೆ, ಅನೇಕ ಕೊಡುಗೆಗಳನ್ನು ಈ ಸಂದರ್ಭದಲ್ಲಿ ನೀಡುವ ನಿರೀಕ್ಷೆಯಿದೆ.ಈ ನಡುವೆ, ನಗರಗಳಲ್ಲಿ ಕೈಗೆಟಕುವ ದರದ ವಸತಿಗಾಗಿ ಬಡ್ಡಿ ಸಬ್ಸಿಡಿಗಳ ಕುರಿತು ಶೀಘ್ರದಲ್ಲೇ ಕ್ಯಾಬಿನೆಟ್ಗೆ ಪ್ರಸ್ತಾವನೆಯನ್ನು ಕಳುಹಿಸಲಾಗುವ ಕುರಿತು ಭಾರತದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.

ಈ ವರ್ಷದ ಚುನಾವಣೆಗೆ (Election) ಮೊದಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಮುಖ ಫೆಡರಲ್ ವಸತಿ ಕಾರ್ಯಕ್ರಮದ ವಿಸ್ತರಣೆಯನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳ ಬಜೆಟ್‌ನಲ್ಲಿ (Union Budget) ಕಡಿಮೆ ವೆಚ್ಚದ ಗೃಹ ಸಾಲಗಳಿಗೆ ಸಬ್ಸಿಡಿಗಳನ್ನು ಹೆಚ್ಚಿಸಲು ಭಾರತ ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: Parliment election: ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಟಿಕೆಟ್ ವಿಚಾರದಲ್ಲಿ ರೋಚಕ ಟ್ವಿಸ್ಟ್- ಈ ಬಾರಿ ‘ಶೋಭಾ’ಗಿಲ್ಲಾ ಟಿಕೆಟ್?! ಇವರಿಗೆ ಫಿಕ್ಸ್?

ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮನೆಗೆ ಸುಮಾರು 200,000 ರೂಪಾಯಿಗಳಿಗೆ ಆರ್ಥಿಕ ಸಹಾಯವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರ ಜೊತೆಗೆ ನಗರ ಪ್ರದೇಶಗಳಲ್ಲಿ 5 ಮಿಲಿಯನ್ ರೂಪಾಯಿಗಳವರೆಗಿನ ಗೃಹ ಸಾಲದ ಮೇಲಿನ ಬಡ್ಡಿ ಸಬ್ಸಿಡಿ ನೀಡಲು ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. 2023/24 ಬಜೆಟ್ ನಲ್ಲಿ 790 ಶತಕೋಟಿ ರೂಪಾಯಿಗಳಿಂದ 2024/25 ಕ್ಕೆ 15% ರಂತೆ ಹೆಚ್ಚಳ ಮಾಡಿ 1 ಟ್ರಿಲಿಯನ್ ರೂಪಾಯಿಗಳ ಮೌಲ್ಯದ ($ 12 ಶತಕೋಟಿ) ಕಡಿಮೆ ವೆಚ್ಚದ ವಸತಿಗಾಗಿ ಹಂಚಿಕೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಭೂಮಿ ಮತ್ತು ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಕಾರ್ಯಕ್ರಮವನ್ನು ವಿಸ್ತರಿಸುವ ಜೊತೆಗೆ ಪ್ರೋತ್ಸಾಹಧನವನ್ನು ಏರಿಕೆ ಮಾಡಲು ಸರ್ಕಾರ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.