Edible Oil Import : ಗೃಹಿಣಿಯರಿಗೆ ಸಿಹಿ ಸುದ್ದಿ; ಖಾದ್ಯ ತೈಲ ಕಡಿಮೆ ದರದಲ್ಲಿ ಪೂರೈಕೆಗೆ ಸರ್ಕಾರ ನಿರ್ಧಾರ!!

Edible Oil Import: ಸರ್ಕಾರ ಗೃಹಿಣಿಯರಿಗೆ ಗುಡ್ ನ್ಯೂಸ್ ನೀಡಿದೆ. ಖಾದ್ಯ ತೈಲವನ್ನು( Edible Oil)ಕಡಿಮೆ ಸುಂಕದಲ್ಲಿ ಆಮದು(Import)ಮಾಡಿಕೊಳ್ಳುವ ಕ್ರಮವನ್ನು ಮುಂದುವರಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೂರ್ಯಕಾಂತಿ ಎಣ್ಣೆ ಮತ್ತು ಕಚ್ಚಾ ಸೋಯಾಯಿಲ್ ಮೇಲಿನ ಕಡಿಮೆ ಆಮದು ಸುಂಕ(Lower Duty)ಮಾರ್ಚ್ 2024 ರಲ್ಲಿ ಕೊನೆಗೊಳ್ಳಲಿದ್ದು, ಸದ್ಯ ಇದನ್ನು ಮುಂದಿನ ವರ್ಷದವರೆಗೆ (March 2025)ವಿಸ್ತರಿಸಲಾಗಿದೆ.ಖಾದ್ಯ ತೈಲದ ಮೇಲಿನ ಕಡಿಮೆ ಆಮದು ಸುಂಕಗಳು ಮುಂದಿನ ವರ್ಷ ಮಾರ್ಚ್‌ವರೆಗೆ ಮುಂದುವರಿಯಲಿದೆ.ಭಾರತ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಿಂದ ತಾಳೆ ಎಣ್ಣೆಯನ್ನು ಸ್ವೀಕರಿಸುತ್ತದೆ. ಸೋಯಾ ಆಯಿಲ್ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಅರ್ಜೆಂಟೀನಾ, ಬ್ರೆಜಿಲ್, ರಷ್ಯಾ ಮತ್ತು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Edible Oil Import : ಗೃಹಿಣಿಯರಿಗೆ ಸಿಹಿ ಸುದ್ದಿ; ಖಾದ್ಯ ತೈಲ ಕಡಿಮೆ ದರದಲ್ಲಿ ಪೂರೈಕೆಗೆ ಸರ್ಕಾರ ನಿರ್ಧಾರ!!

ಸರಕಾರ 2025 ರ ಮಾರ್ಚ್ 31 ರವರೆಗೆ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಆಮದುಗಳ ಮೇಲಿನ ರಿಯಾಯಿತಿ ಸುಂಕ ದರಗಳನ್ನು ಸಚಿವಾಲಯವು ಒಂದು ವರ್ಷದವರೆಗೆ ವಿಸ್ತರಣೆ ಮಾಡಿದೆ. ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಶೇಕಡಾ 17.5 ರಿಂದ 12.5 ಕ್ಕೆ ಇಳಿಕೆ ಮಾಡಲಾಗಿದೆ.

Leave A Reply

Your email address will not be published.