Flight: ವಿಮಾನ ಟೇಕ್ ಆಫ್ ಆದಾಗ ಶೌಚಾಲಯಕ್ಕೆ ತೆರಳಿದ ಪ್ರಯಾಣಿಕ; ಬಾಗಿಲು ತೆರೆಯಲಾಗದೇ ಪರದಾಟ: ಮುಂದೇನಾಯ್ತು?!
Flight: ಬೆಂಗಳೂರಿನಲ್ಲಿ ವಿಮಾನ (Flight)ಟೇಕ್ ಆಫ್ ಆದಾಗ ಶೌಚಾಲಯಕ್ಕೆ(Toilet)ತೆರಳಿದ ಪ್ರಯಾಣಿಕನೋರ್ವ (Passenger)ವಿಮಾನದ ಟಾಯ್ಲೆಟ್ ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ವಿಮಾನ ಟೇಕಾಫ್ ಆದಾಗ ಟಾಯ್ಲೆಟ್ಗೆ ತೆರಳಿದ ಬಳಿಕ ಒಳಗಿನಿಂದ ಬಾಗಿಲು ತೆರೆಯಲಾಗದೆ ಪ್ರಯಾಣಿಕ ಅಲ್ಲೇ ಸಿಲುಕಿದ್ದಾನೆ. ಈ ಸಂದರ್ಭ ಗಗನಸಖಿಯರು ಟಾಯ್ಲೆಟ್ ಒಳಗೆ ಬಾಕಿಯಾದ ಪ್ರಯಾಣಿಕನಿಗೆ ಭಯ ಪಡದಂತೆ ಚೀಟಿ ಬರೆದು ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: Teaching Job: ಟೀಚರ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಉದ್ಯೋಗಾವಕಾಶ!!! ಮಾಸಿಕ 40 ಸಾವಿರ ಸಂಬಳ!!!
ಡೋರ್ ಲಾಕ್ ನಲ್ಲಿ ಸಮಸ್ಯೆಯಿಂದ ಪ್ರಯಾಣಿಕ ವಿಮಾನದ ಟಾಯ್ಲೆಟ್ ಒಳಗಡೆಯೇ ಸಿಲುಕಿಕೊಂಡಿದ್ದರು. ವಿಮಾನ ಲ್ಯಾಂಡಿಂಗ್ ಆದ ಮೇಲೆ ಇಂಜಿನಿಯರ್ ಬಂದು ಬಾಗಿಲು ರಿಪೇರಿ ಮಾಡಿದ್ದು, ಸತತ 2 ಗಂಟೆಗಳ ಡೋರ್ ರಿಪೇರಿ ಕೆಲಸದ ಬಳಿಕ ಪ್ರಯಾಣಿಕ ವಿಮಾನದಿಂದ ಹೊರಬಂದಿದ್ದಾನೆ ಎನ್ನಲಾಗಿದೆ. ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆದ ನಂತರ ಪ್ರಯಾಣಿಕ ಡೋರ್ ತೆಗೆದು ಹೊರ ಬಂದಿದ್ದು, ಕೂಡಲೇ ಆತನಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.