Babri Majid: ಹಿಂದೂಗಳು ಬಾಬ್ರಿ ಮಸೀದಿ ಕೆಡವಿದರ ಕುರಿತು ನಿಡುಮಾಮಿಡಿ ಸ್ವಾಮೀಜಿಯಿಂದ ಶಾಕಿಂಗ್‌ ಹೇಳಿಕೆ!!!

Babri Majid: ರಾಮ ಮಂದಿರ (Ram Mandir)ಉದ್ಘಾಟನೆ ನಡೆಯಲಿರುವ ಹಿನ್ನೆಲೆ ಇಡೀ ದೇಶವೇ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಎದುರು ನೋಡುತ್ತಿದ್ದಾರೆ.ಈ ನಡುವೆ,‌ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲಸ್ವಾಮೀಜಿ(Nidumamidi Swamiji) ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

 

 500 ವರ್ಷಗಳ ಹಿಂದೆ ವಿಷ್ಣು ಅಥವಾ ರಾಮನ ದೇವಾಲಯವನ್ನ ಬಾಬರ್ ಕೆಡವಿ ಮಸೀದಿ ಕಟ್ಟಿದ್ದರು.ಅದು ಆಗಿನ ಕಾಲದ ರಾಜಕೀಯ ಅನಿವಾರ್ಯತೆಯಾಗಿತ್ತು. ಈ ಕಾರ್ಯದಲ್ಲಿ ಸಾಮಾನ್ಯ ವರ್ಗದ ಮುಸ್ಲಿಂರು ಭಾಗಿಯಾಗಿರಲಿಲ್ಲ. ಮತ್ತೆ ಅದೇ ಸ್ಥಳದಲ್ಲಿ ದೇವಾಲಯವನ್ನ ಕಟ್ಟಬೇಕು ಎಂಬ ಎಲ್ಲರ ಭಾವನೆ ತಪ್ಪಲ್ಲ. ಅಂದು ಮಂದಿರವನ್ನ ಕೆಡವಿದ್ದು ಸಾಮಾನ್ಯ ಜನರಲ್ಲ ಧಾರ್ಮಿಕ ನಾಯಕರಲ್ಲ ಬದಲಿಗೆ ರಾಜಕೀಯ ನಾಯಕರು ಆಗಿದ್ದರು.

ಇದನ್ನೂ ಓದಿ: Post office Savings Scheme:
ಅಂಚೆ ಕಚೇರಿಯ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ; ಕುಳಿತಲ್ಲೇ ಲಕ್ಷ ಲಕ್ಷ ಎಣಿಸಿ!!

 ಆದರೆ, ಈಗ ಹಿಂದೂ ಸಂಘಟನೆಗಳು ಬಾಬ್ರಿ ಮಸೀದಿ ಕೆಡವಿದ್ದು ಸೂಕ್ತವಲ್ಲ (Hindus demolished Babri Masjid was not appropriate)ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಲ್ಲರೂ ರಾಮ ಮಂದಿರ ನಿರ್ಮಾಣದ ಖುಷಿಯಲ್ಲಿರುವ ಸಂದರ್ಭ ಬಾಗೇಪಲ್ಲಿಯ ನಿಡುಮಾಮಿಡಿ ಸ್ವಾಮೀಜಿ 30 ವರ್ಷಗಳ ಹಿಂದೆ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ. ಸದ್ಯ, ಸ್ವಾಮಿಜಿಯ ಹೇಳಿಕೆಗೆ ಪರ ವಿರೋಧ ಚರ್ಚೆ ನಡೆಯುತ್ತಿದೆ.

Leave A Reply

Your email address will not be published.