K .S Chaitra: ಖ್ಯಾತ ಗಾಯಕಿ ಕೆಎಸ್‌ ಚಿತ್ರಾ ವಿರುದ್ಧ ಎಡಪಂಥೀಯರ ಸೈಬರ್‌ ದಾಳಿ: ಬೆಚ್ಚಿ ಬೀಳಿಸುತ್ತೆ ಇದರ ಹಿಂದಿನ ಕಾರಣ!!

Share the Article

K S Chithra: ತಮ್ಮ ಹಾಡುಗಳ ಮೂಲಕ ಎಲ್ಲರ ಮನಗೆದ್ದಿರುವ ಕೆ.ಎಸ್‌ ಚಿತ್ರಾ(K S Chithra) ಈಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಸಂಗೀತ ಕ್ಷೇತ್ರದ ಮಹಾನ್ ಗಾಯಕಿ ಕೆ ಎಸ್ ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಿಂದಾಗಿ ಕೇರಳದ ಲೆಫ್ಟಿಸ್ಟ್‌ಗಳು ಹಾಗೂ ಕಮ್ಯುನಿಸ್ಟ್‌ಗಳು ಗಾಯಕಿಯ ವಿರುದ್ದ ಮುಗಿಬಿದ್ದಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ayodhya Ram Mandir)ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಭಕ್ತರು ರಾಮ ಮಂತ್ರವನ್ನು ಪಠಿಸುವುದು ಮಾತ್ರವಲ್ಲದೆ ತಮ್ಮ ತಮ್ಮ ಮನೆಗಳಲ್ಲಿ ಐದು ದೀಪಗಳನ್ನು ಬೆಳಗಿಸಿ ಇದನ್ನು ಸಂಭ್ರಮಿಸಬೇಕು ಎಂದು ಮನವಿ ಮಾಡಿರುವ ವಿಡಿಯೋವನ್ನು ಕೆ ಎಸ್ ಚಿತ್ರಾ ಇತ್ತೀಚೆಗೆ ಪೋಸ್ಟ್‌ ಮಾಡಿದ್ದರು.ಈ ವಿಡಿಯೋವನ್ನು ಪೋಸ್ಟ್‌ ಮಾಡಿದ ಬಳಿಕ ಕೇರಳದ ಎಡಪಂಥೀಯರು ಹಾಗೂ ಕಮ್ಯುನಿಸ್ಟ್‌ಗಳು ಚಿತ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹಿಂದೂಗಳು ಬಾಬ್ರಿ ಮಸೀದಿ ಕೆಡವಿದರ ಕುರಿತು ನಿಡುಮಾಮಿಡಿ ಸ್ವಾಮೀಜಿಯಿಂದ ಶಾಕಿಂಗ್‌ ಹೇಳಿಕೆ!!!

ಕೆಎಸ್‌ ಚಿತ್ರಾ ವಿರುದ್ಧ ಲೆಫ್ಟಿಸ್ಟ್‌ ಹಾಗೂ ಕಮ್ಯುನಿಸ್ಟ್‌ ಬ್ರಿಗೇಡ್‌ ದಾಳಿ ಮಾಡಿದೆ ಎನ್ನಲಾಗಿದೆ.ಇದರ ಜೊತೆಗೆ ‘ಅಲ್ಲಿರುವ ಮಸೀದಿಯನ್ನು ಕೆಡವಿ ದೇವಸ್ಥಾನ ಕಟ್ಟಿದ್ದಾರೆ ಎನ್ನುವುದನ್ನು ಕೆಎಸ್‌ ಚಿತ್ರಾ ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ತಮ್ಮ ವಿಡಿಯೋಗೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಚಿತ್ರಾ ಅವರು ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಿಂದ ಆ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ ಎನ್ನಲಾಗಿದೆ.

.

Leave A Reply