Home Interesting Tax liability: ತೆರಿಗೆ ಪಾವತಿದಾರರಿಗೆ ಬಿಗ್ ಅಪ್ಡೇಟ್;7 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ: ಈ ದಿನದಿಂದಲೇ...

Tax liability: ತೆರಿಗೆ ಪಾವತಿದಾರರಿಗೆ ಬಿಗ್ ಅಪ್ಡೇಟ್;7 ಲಕ್ಷ ಆದಾಯಕ್ಕೆ ತೆರಿಗೆ ವಿನಾಯಿತಿ: ಈ ದಿನದಿಂದಲೇ ಜಾರಿ!!

Tax liability
Image source: https://Livelaw.in

Hindu neighbor gifts plot of land

Hindu neighbour gifts land to Muslim journalist

Personal Income: ಸರ್ಕಾರ ಕಳೆದ ಬಜೆಟ್‌ನಲ್ಲಿ (Union Budget 2023) 7 ಲಕ್ಷ ರೂ. ವೈಯಕ್ತಿಕ ಆದಾಯಕ್ಕೆ (Personal Income) ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಇದೀಗ, ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಿರುವ ಪ್ರಸ್ತಾಪವನ್ನು ಅಧಿಕೃತವಾಗಿ ಜಾರಿಗೆ ತಂದಿದೆ.

ಈ ಹಿಂದೆ 5 ಲಕ್ಷ ರೂ. ವರೆಗೆ ಆದಾಯದಲ್ಲಿ ಈ ವಿನಾಯಿತಿ ನೀಡಲಾಗುತ್ತಿತ್ತು. 2023ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 7 ಲಕ್ಷ ರೂ. ಆದಾಯ ಇರುವವರೆಗೆ ಈ ಅವಕಾಶವನ್ನು ವಿಸ್ತರಿಸಿದ್ದಾರೆ. ಹೀಗಾಗಿ, ಆದಾಯ ತೆರಿಗೆ ಸಲ್ಲಿಸುವಾಗ ಆದಾಯ 7 ಲಕ್ಷ ರೂಪಾಯಿಯವರೆಗೆ ಇದ್ದಲ್ಲಿ ಇನ್ನು ಮುಂದೆ ಕಟ್ಟಿರುವ ತೆರಿಗೆಯನ್ನು ರಿಬೇಟ್ (Rebate) ಹಿಂಪಡೆಯಲು ಅವಕಾಶವಿದೆ.

ಆದಾಯ ತೆರಿಗೆ ಕಾಯ್ದೆ (Income Tax Act) 2023 ಸೆಕ್ಷನ್‌ 87ಕ್ಕೆ ತಿದ್ದುಪಡಿ ಮಾಡಿ ವಾರ್ಷಿಕ ಬಜೆಟ್ನಲ್ಲಿ ಪ್ರಕಟಿಸಿದ ಘೋಷಣೆಯನ್ನು ಜಾರಿ ಮಾಡಲಾಗಿರುವ ಕುರಿತು ಹಣಕಾಸು ಸಚಿವಾಲಯ (Finance Ministry) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಈ ವಿಷಯವನ್ನು ಅಧಿಕೃತವಾಗಿ ಮಾಹಿತಿ ನೀಡಿದೆ.