Killer CEO: ಪೊಲೀಸರ ಸಮ್ಮುಖದಲ್ಲೇ ಸೂಚನಾ ಮತ್ತು ಪತಿ ನಡುವೆ ಭಾರೀ ಜಟಾಪಟಿ!!

Killer CEO: ಬೆಂಗಳೂರಿನ ಸ್ಟಾರ್ಟ್ಅಪ್‌ ಸಿಇಒ ಸೂಚನಾ(Killer CEO)ಸೇಠ್‌ ತನ್ನ 4 ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವುದು ಗೊತ್ತಿರುವ ಸಂಗತಿ. ಈ ನಡುವೆ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಪತಿ ವೆಂಕಟ್‌ ರಾಮನ್‌ ಹಾಗೂ ಸೂಚನಾ ನಡುವೆ ಪೊಲೀಸ್ ಠಾಣೆಯಲ್ಲಿಯೇ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಮಗನ ಹತ್ಯೆ (Killer CEO)ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಹೇಳಿಕೆ ನೀಡಲು ವೆಂಕಟ್‌ ರಾಮನ್‌ ಗೋವಾದ ಕ್ಯಾಲಂಗುಟ್‌ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಅಲ್ಲಿಯೇ ಪೊಲೀಸರ ವಶದಲ್ಲಿದ್ದ ಸೂಚನಾಳೊಂದಿಗೆ ಮಾತನಾಡಲು ವೆಂಕಟ್‌ಗೆ 15 ನಿಮಿಷ ಅನುವು ಮಾಡಿಕೊಡಲಾಗಿದೆ. ಈ ಸಂದರ್ಭ, ‘ನನ್ನ ಮಗನ ಏಕೆ ಹತ್ಯೆ ಮಾಡಿದೆ?’ ಎಂದು ವೆಂಕಟ್‌ರಾಮನ್ ತನ್ನ ಪತ್ನಿಯನ್ನು ಸೂಚನಾರನ್ನು ಪ್ರಶ್ನೆ ಮಾಡಲಾಗಿದೆ. ವೆಂಕಟ್‌ ರಾಮನ್ ಪೊಲೀಸರಿಗೆ 2 ಗಂಟೆಗಳ ಕಾಲ ಸುದೀರ್ಘ 5 ಪುಟಗಳ ಹೇಳಿಕೆ ನೀಡಿದ್ದು, ಸೂಚನಾ ಮೊದಲಿನಿಂದಲೂ ಕ್ರೂರ ಅಥವಾ ಹಿಂಸಾತ್ಮಕ ಮನಸ್ಥಿತಿಯುಳ್ಳವಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Gang Rape : ಹಾನಗಲ್ ಗ್ಯಾಂಗ್ ರೇಪ್ ಕೇಸ್ ಕುರಿತು ಸ್ಪೋಟಕ ಮಾಹಿತಿ ಬಹಿರಂಗ; ಸಂತ್ರಸ್ತೆ ಬಿಚ್ಚಿಟ್ಲು ರೋಚಕ ಸತ್ಯ!!

ಈ ಸಂದರ್ಭ ಸುಚನಾ ‘ಇದಕ್ಕೆಲ್ಲ ನೀನೇ ಕಾರಣವೆಂದು ಪತಿಯ ವಿರುದ್ದ ಆರೋಪ ಮಾಡಿದ್ದಾಳೆ ಎನ್ನಲಾಗಿದೆ. ನಾನು ಪೊಲೀಸ್‌ ಕಸ್ಟಡಿಯಲ್ಲಿದ್ದರೆ, ನೀನು ಫ್ರೀಯಾಗಿ… ಆರಾಮಾಗಿ ಓಡಾಡಿಕೊಂಡಿದ್ದೀಯಲ್ಲಾ’ ಎಂದು ಹಂಗಿಸಿದ್ದಾಳೆ ಎನ್ನಲಾಗಿದೆ. ವೆಂಕಟ್‌ ‘ನನ್ನ ಮಗನನ್ನು ನೀನು ಹತ್ಯೆ ಮಾಡಿಲ್ಲವೇ? ಮಗು ಹೇಗೆ ಮೃತಪಟ್ಟಿತು?’ ಎಂದು ವೆಂಕಟ್ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭ ಇಬ್ಬರ ನಡುವೆ ಭಾರಿ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.