Hanagal Rape Case: ಹಾನಗಲ್ ಗ್ಯಾಂಗ್ ರೇಪ್ ಕೇಸ್;50 ಲಕ್ಷ ಆಮಿಷವೊಡ್ಡಿ ಪ್ರಕರಣ ಮುಚ್ಚಿ ಹಾಕಲು ಷಡ್ಯಂತ್ರ!?

Hanagal gang rape case: ಎಲ್ಲೆಡೆ ಚರ್ಚೆಗೆ ಕಾರಣವಾಗಿರುವ ಹಾನಗಲ್‌ ಗ್ಯಾಂಗ್‌ ರೇಪ್‌ (Haveri Gang Rape)ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ಹೊರ ಬಿದ್ದಿದೆ.

 

 

ಹಾನಗಲ್ ಗ್ಯಾಂಗ್ರೇಪ್ ಪ್ರಕರಣ (Hanagal gang rape case) ಭಾರೀ ಚರ್ಚೆಗೆ ಕಾರಣವಾಗಿದೆ. ಹಾನಗಲ್‌ನ ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆಯನ್ನು ಭಾನುವಾರ ದಿಢೀರ್‌ ಆಗಿ ಶಿರಸಿಯಲ್ಲಿರುವ ಆಕೆಯ ಊರಿಗೆ ಪೊಲೀಸರು ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಸಂತ್ರಸ್ತ ಮಹಿಳೆಯ ಪತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರೇವಣಕಟ್ಟಾ ಗ್ರಾಮದಲ್ಲಿ ಸಂತ್ರಸ್ತೆ ಪತಿ ತೌಸಿಪ್ ಟಿವಿ9 ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಮ್ಮ ಬಾಯಿ ಮುಚ್ಚಿಸಲು 50 ಲಕ್ಷದವರೆಗೆ ಆಮಿಶ ಒಡ್ಡಿದ್ದರು ಎಂದು ಸಂತ್ರಸ್ತೆಯ ಪತಿ ಗಂಭೀರ ಆರೋಪ ಮಾಡಿದ್ದಾರೆ.

 

ನಾವು ಹಾವೇರಿ ಕೊರ್ಟ್, ಪೊಲೀಸ್ ಸ್ಟೇಷನ್ಗೆ ಹೋದ ಸಂದರ್ಭದಲ್ಲಿ ಆಮಿಷ ಒಡ್ಡಿದ್ದಾರೆ. ಮೂರ್ನಾಲ್ಕು ಬಾರಿ ನನ್ನ ಅರಿವಿಗೆ ಬಾರದ ರೀತಿಯಲ್ಲಿ ನಮ್ಮ ಪತ್ನಿಗೆ ಆಮಿಷ ಒಡ್ಡಿದ್ದರು. ಆದರೆ ಅವಳು ಅವರ ಆಮಿಷಕ್ಕೆ ಬಗ್ಗದೆ ನನಗೆ ತಿಳಿಸಿದ್ದಾಳೆ. ಅವರ ಆಮಿಷಕ್ಕೆ ನಾವು ಒಪ್ಪಿಲ್ಲ. ನಮಗೆ ನ್ಯಾಯ ಬೇಕೆ ಹೊರತು ಹಣವಲ್ಲ ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

 

ನನ್ನ ಪತ್ನಿ ಆರೋಗ್ಯ ಸರಿಯಿಲ್ಲದ ಹಿನ್ನೆಲೆ ಏನೂ ಹೇಳುವ ಸ್ಥಿತಿಯಲ್ಲಿಲ್ಲ. ಈ ಘಟನೆ ನಡೆದ ಸಂದರ್ಭ ಕೂಡ ನನ್ನ ಬಳಿ ಆಕೆ ಏನೂ ಹೇಳಿರಲಿಲ್ಲ. ಪತ್ನಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಪತ್ನಿ ಆರೋಗ್ಯ ಸರಿಯಿಲ್ಲದೇ ಇರುವ ಹಿನ್ನೆಲೆ ಸಹೋದರಿ ಮನೆಯಲ್ಲಿದ್ದಾರೆ. ಅವಳ ಜೊತೆಗೆ ನಾನಿದ್ದೇನೆ. ರಾಜಕಾರಣಿಗಳು ನ್ಯಾಯ ಕೊಡಿಸುವುದಾದರೇ ಬರಲಿ ಆದರೆ ರಾಜಕೀಯ ಮಾಡುವುದು ಬೇಡ ನ್ಯಾಯ ಕೊಡಿಸಲಿ ಎಂದಿದ್ದಾರೆ. ನನ್ನ ಪತ್ನಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಅಷ್ಟೆ ಅಲ್ಲದೇ, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂಬುದು ನಮ್ಮ ಆಗ್ರಹ ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.