Dakshina Kannada: ಮನೆ ಮನೆಗೆ ಸರ್ಕಾರದ ಸೌಲಭ್ಯ!! ವಿಭಿನ್ನ ಕಾರ್ಯದ ಮೂಲಕ ಜನಮನ ಗೆದ್ದ ಕಿರಿ ವಯಸ್ಸಿನ ಪಂಚಾಯತ್ ಸದಸ್ಯ

 

ದಕ್ಷಿಣ ಕನ್ನಡ: ಕಳೆದ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದು ಪಂಚಾಯತ್ ಸದಸ್ಯ ಸ್ಥಾನ ಅಲಂಕರಿಸಿದ ಪುತ್ತೂರು ತಾಲೂಕಿನ ಕಿರಿಯ ವಯಸ್ಸಿನ ಪಂಚಾಯತ್ ಸದಸ್ಯನೋರ್ವ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Dakshina Kannada

Dakshina Kannada

Dakshina Kannada

ಪುತ್ತೂರು ತಾಲೂಕಿನ ನೆಟ್ಟಣಿಗೆ ಗ್ರಾಮ ಪಂಚಾಯತ್ ಸದಸ್ಯ, ವಕೀಲ ಚಂದ್ರಹಾಸ ಈಶ್ವರಮಂಗಲ ಅವರೇ ಇಂತಹದೊಂದು ಕಾರ್ಯ ನಿರಂತರವಾಗಿಸಿಕೊಂಡು ಸರ್ಕಾರಿ ಸೌಲಭ್ಯ ವಂಚಿತ ಗ್ರಾಮಸ್ಥರ ಬೆಳಕಾಗಿದ್ದಾರೆ.ಓರ್ವ ಕ್ರಿಯಾಶೀಲ ಯುವಕನಾಗಿರುವ ಚಂದ್ರಹಾಸ್ ಸ್ಥಳೀಯ ಯುವಕಮಂಡಲ, ಪಕ್ಷ ಹಾಗೂ ಸಂಘಟನೆಗಳ ಜವಾಬ್ದಾರಿಯುತ ಕಾರ್ಯಕರ್ತನಾಯಕನಾಗಿಯೂ ಚಿರಪರಿಚಿತ.

Dakshina Kannada

Dakshina Kannada

Dakshina Kannada

ತನ್ನ ವಾರ್ಡಿನ ಸಹಿತ ಇಡೀ ಗ್ರಾಮದ ವೃದ್ಧರ, ಅನಾರೋಗ್ಯ ಪೀಡಿತರ ಬಗ್ಗೆ ಕಾಳಜಿ ವಹಿಸುವ ಇವರು ಸೌಲಭ್ಯ ವಂಚಿತರ ಮನೆಗೆ ತೆರಳಿ ಸರ್ಕಾರದ ವತಿಯಿಂದ ಸಿಗುವ ಎಲ್ಲಾ ಸೌಲಭ್ಯಗಳ ಬಗೆಗೆ ವಿವರವಾಗಿ ವಿಸ್ತರಿಸಿ,ಕಾನೂನು ಪ್ರಕಾರ ಅರ್ಜಿ ನಮೂನೆಗಳನ್ನು ಸಿದ್ಧಪಡಿಸಿ ಸಲ್ಲಿಸುವ W ಮೂಲಕ ಸರ್ಕಾರದ ಸೌಲಭ್ಯಗಳು ಫಲಾನುಭವಿಗಳಿಗೆ ದಕ್ಕುವಂತೆ ಮಾಡುತ್ತಿದ್ದಾರೆ. ಈ ವರೆಗೆ ಹಲವಾರು ಸೌಲಭ್ಯಗಳನ್ನು ಫಲಾನುಭವಿಗಳ ಹೆಸರಿಗೆ ಮಾಡಿಸಿಕೊಟ್ಟಿದ್ದು ಗ್ರಾಮೀಣ ಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಮತ ನೀಡಿದ ಮತದಾರನ ಮನ ಗೆದ್ದಿದ್ದಾರೆ.

ಇದನ್ನೂ ಓದಿ: Indian Congress: 2024ರ ಲೋಕಸಭಾ ಚುನಾವಣೆ- ಕಾಂಗ್ರೆಸ್ ನಲ್ಲಿ ನಡೆಯಿತು ಊಹಿಸದಂತ ಮಹತ್ವದ ಬದಲಾವಣೆ!!

Dakshina Kannada

Dakshina Kannada

Dakshina Kannada

ನೆಟ್ಟಣಿಗೆ ಒಂದು ಗ್ರಾಮೀಣ ಪ್ರದೇಶವಾಗಿದ್ದು, ಹಲವಾರು ವರ್ಷಗಳಿಂದ ಇಲ್ಲಿ ಗೆದ್ದು ಬಂದ ಸದಸ್ಯರು ಹೇಳಿಕೊಳ್ಳುವಷ್ಟರ ಮಟ್ಟಿಗೆ ಕೆಲಸ ನಿರ್ವಹಿಸಿಲ್ಲವಾದರೂ ಗ್ರಾಮಕ್ಕೆ, ವಾರ್ಡ್ ಗೆ ಬೇಕಾದ ಅನುದಾನ, ಕಾಮಗಾರಿ ಎಲ್ಲವೂ ನಡೆದಿದ್ದವು. ಆದರೆ ಈ ಬಾರಿಯ ಸದಸ್ಯ ಕೊಂಚ ವಿಭಿನ್ನತೆ ಬಯಸಿದ್ದು, ಗ್ರಾಮೀಣ ಭಾಗದ ಜನತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳಬೇಕು, ಅದರಿಂದ ವಂಚಿತರಾಗಬಾರದು ಎನ್ನುವ ಯೋಚನೆಯಲ್ಲಿ ಇಂತಹದೊಂದು ಕಾರ್ಯಕ್ಕೆ ಚಂದ್ರಹಾಸ ಕೈ ಹಾಕಿದ್ದರು.

ಅದರಂತೆ ಎಲ್ಲಾ ಫಲಾನುಭವಿಗಳಿಗೂ ಸರ್ಕಾರದ ಸೌಲಭ್ಯಗಳ ಮಾಹಿತಿ, ಅದರ ಪ್ರಯೋಜನದ ಬಗ್ಗೆ ವಿವರಿಸಿ ಓರ್ವ ಜನಪ್ರತಿನಿಧಿ ಹೇಗಿರಬೇಕು, ಯಾವ ರೀತಿಯ ಭ್ರಷ್ಟಾಚಾರ ರಹಿತ ಸೇವೆ ನೀಡಬೇಕು ಎನ್ನುವುದನ್ನು ತೋರಿಸಿಕೊಟ್ಟು ಗಮನಸೆಳೆದಿದ್ದಾರೆ.

Leave A Reply

Your email address will not be published.