DA Hike: ಕೇಂದ್ರ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ; ವೇತನ ಹೆಚ್ಚಳ ಸೇರಿದಂತೆ ಸಿಗಲಿದೆ ಈ ಎಲ್ಲಾ ಪ್ರಯೋಜನ!!
DA Hike: ನೌಕರರಿಗೆ ಹೊಸ ವರ್ಷದಲ್ಲಿ ಗುಡ್ ನ್ಯೂಸ್ ಹೊರ ಬೀಳುವ(DA Hike) ಸಾಧ್ಯತೆ ದಟ್ಟವಾಗಿದೆ. ಲೋಕಸಭೆ ಚುನಾವಣೆಗೆ ಮೊದಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಅನ್ನು (Interim budget)ಮಂಡಿಸಲಿದ್ದಾರೆ. ಈ ನಡುವೆ, ಲೋಕಸಭೆ ಚುನಾವಣೆಯ ಹಿನ್ನೆಲೆ ಅನೇಕ ಜನಪ್ರಿಯ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದ್ದು,8 ನೇ ವೇತನ ಆಯೋಗವನ್ನು(8th Pay Commission)ಪರಿಗಣಿಸಿ ನೌಕರರ ಮೂಲ ವೇತನ(Salary Hike) ರೂ.18000 ದಿಂದ ರೂ.26000ಕ್ಕೆ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿ, ಕೇಂದ್ರ ಸರ್ಕಾರ ಬಜೆಟ್ ಅಧಿವೇಶನದಲ್ಲಿ ನೌಕರರ ವೇತನದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. 7 ನೇ ವೇತನ ಆಯೋಗದಡಿಯಲ್ಲಿ, ಉದ್ಯೋಗಿಗಳ ಫಿಟ್ಮೆಂಟ್ ಅಂಶವನ್ನು 3.00 ಅಥವಾ 3.68 ಪ್ರತಿಶತಕ್ಕೆ ಏರಿಕೆ ಮಾಡಲಾಗುತ್ತದೆ. ಸದ್ಯ, ಕೇಂದ್ರ ನೌಕರರ ಫಿಟ್ಮೆಂಟ್ ಅಂಶ 2.57 ಹಾಗೂ ಮೂಲ ವೇತನ 18000 ಆಗಿದ್ದು, ಕೇಂದ್ರ ನೌಕರರು ಬಹಳ ಸಮಯದಿಂದ 3.68ಕ್ಕೆ ಫಿಟ್ಮೆಂಟ್ ಅಂಶ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಹೀಗಾಗಿ, 48 ಲಕ್ಷಕ್ಕೂ ಅಧಿಕ ಕೇಂದ್ರ ನೌಕರರ ಮೂಲ ವೇತನ ಹೆಚ್ಚಳದ ಬಗ್ಗೆ ಬಜೆಟ್ ನಲ್ಲಿ ದೊಡ್ಡ ಘೋಷಣೆ ಹೊರಬೀಳಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: Road Pothole: ಸತ್ತನೆಂದು ಮನೆ ಕಡೆ ಹೊರಟ ಆಂಬುಲೆನ್ಸ್; ಮುಂದೆ ನಡೆದದ್ದೇ ಪವಾಡ!!
ಒಂದು ವೇಳೆ, ಫಿಟ್ಮೆಂಟ್ ಅಂಶವನ್ನು ಶೇಕಡಾ 2.57 ರಿಂದ 3.00 ಅಥವಾ 3.68 ಕ್ಕೆ ಹೆಚ್ಚಳ ಮಾಡಿದರೆ, ಮೂಲ ವೇತನವು ರೂ.3000 ರಿಂದ ರೂ.8000 ಮತ್ತು ರೂ.18000 ರಿಂದ ರೂ.21000 ಅಥವಾ ರೂ.26000 ಕ್ಕೆ ಏರಿಕೆಯಾಗುತ್ತದೆ. ಉದಾಹರಣೆಗೆ, ಕೇಂದ್ರ ಉದ್ಯೋಗಿಯ ಮೂಲ ವೇತನ ರೂ. 18,000, ಭತ್ಯೆಗಳನ್ನು ಹೊರತುಪಡಿಸಿ ಅವರ ವೇತನವು ರೂ.18,000 X 2.57 = ರೂ.46,260 ಆಗಿರುತ್ತದೆ. 3.68 ಹೆಚ್ಚಳವಾದರೆ ಸಂಬಳ ರೂ.66,240 ಆಗಲಿದೆ.